ಹೊಸದಿಲ್ಲಿ: ಅಹಮದಾಬಾದ್ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ AI-171 ಅಪಘಾತ ಪ್ರಕರಣದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆಯಾಗಿದೆ. ವಿಮಾನ ದುರಂತದ ಸ್ಥಳದಿಂದ ಎರಡನೇ ಬ್ಲ್ಯಾಕ್ ಬಾಕ್ಸ್, ಅಂದರೆ ಕಾಕ್ಪಿಟ್ ವಾಯ್ಸ್ ರೆಕಾರ್ಡರ್ ಪತ್ತೆಯಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪ್ರಧಾನ ಕಾರ್ಯದರ್ಶಿ ಪಿ.ಕೆ. ಮಿಶ್ರಾ ಅಧಿಕೃತವಾಗಿ ತಿಳಿಸಿದ್ದಾರೆ.
ಈ ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿದೆ ಎಂಬುದು ತನಿಖಾ ಸಂಸ್ಥೆಗಳಿಗೆ ತುಂಬಾ ಮಹತ್ವದ್ದಾಗಿದೆ. ಈ ಸಾಧನದ ಮೂಲಕ ಪೈಲಟ್ಗಳ ನಡುವಿನ ಸಂಭಾಷಣೆಗಳು, ರೇಡಿಯೋ ಸಂಜ್ಞೆಗಳು, ಎಚ್ಚರಿಕೆ ಸಿಗ್ನಲ್ಗಳು ಹಾಗೂ ಯಾಂತ್ರಿಕ ಶಬ್ದಗಳು ಅವುಗಳನ್ನೆಲ್ಲಾ ವಿಶ್ಲೇಷಿಸಲು ಸಾಧ್ಯವಾಗಲಿದೆ.
ಕಾಕ್ಪಿಟ್ ವಾಯ್ಸ್ ರೆಕಾರ್ಡರ್ ಅಂದರೆ, ವಿಮಾನದಲ್ಲಿ ಸಂಭವಿಸಿದ ತಾಂತ್ರಿಕ ದೋಷಗಳು, ಮಾನವೀಯ ತಪ್ಪುಗಳು ಅಥವಾ ಯಾವುದೇ ಹೊರಗಿನ ಅಸಾಮಾನ್ಯತೆಗಳ ವಿವರವನ್ನು ಸ್ಪಷ್ಟವಾಗಿ ನೀಡಬಲ್ಲದು. ಅಪಘಾತಕ್ಕೆ ನಿಖರ ಕಾರಣ ಪತ್ತೆಹಚ್ಚಲು ಇದು ಪ್ರಮುಖ ಸಾಕ್ಷ್ಯವಾಗಲಿದೆ.
ಈ ಹಿಂದೆ, ಶುಕ್ರವಾರ ದಿನದಂದು, ಅಪಘಾತದ ಸ್ಥಳದಲ್ಲಿನ ಕಟ್ಟಡದ ಮೇಲ್ಛಾವಣಿಯಿಂದ ಮೊದಲ ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿ ತನಿಖೆ ಆರಂಭವಾಗಿತ್ತು. ಈಗ ಎರಡನೇ ಬ್ಲ್ಯಾಕ್ ಬಾಕ್ಸ್ ಸಿಕ್ಕಿರುವುದರಿಂದ ತನಿಖಾಧಿಕಾರಿಗಳು ಸಂಪೂರ್ಣ ಚಿತ್ರಣವನ್ನು ರೂಪಿಸಬಹುದಾದ ಸ್ಥಿತಿಗೆ ಬಂದಿದ್ದಾರೆ.