ಹೊಸೂರು : ಕೆ.ಆರ್.ನಗರ ತಾಲೂಕಿನ ಕೆಸ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ರಾಧಮ್ಮ, ಉಪಾಧ್ಯಕ್ಷರಾಗಿ ಕೆ.ಸಿ.ರವಿ ಚುನಾಯಿತರಾದರು. ಒಟ್ಟು ೧೫ ಮಂದಿ ಸದಸ್ಯರಿದ್ದು, ಅಧ್ಯಕ್ಷ ಸ್ಥಾನಕ್ಕೆ ಪ್ರಭಾವತಿ, ಆರ್.ಶೋಭಾ, ಮತ್ತು ರಾಧಮ್ಮರವರು ನಾಮ ಪತ್ರ ಸಲ್ಲಿಸಿದ್ದರು.
೮ ಮತಗಳನ್ನು ಪಡೆದು ರಾಧಮ್ಮ ಆಯ್ಕೆಯಾಗಿದ್ದು, ಆರ್.ಶೋಭಾ ೭ ಮತಗಳನ್ನು ಪಡೆದರೆ, ಪ್ರಭಾವತಿರವರು ತಮ್ಮ ಮತವನ್ನು ಹಾಕಿಕೊಳ್ಳದೆ ಶೂನ್ಯ ಪಡೆದು ರಾಧಮ್ಮರವರ ಆಯ್ಕೆಗೆ ಕಾರಣರಾಗಿದ್ದಾರೆ ಎನ್ನಲಾಗಿದೆ.
ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು, ಸಾಮಾನ್ಯ ವರ್ಗಕ್ಕೆ ಮೀಸಲಾದ ಉಪಾಧ್ಯಕ್ಷ ಸ್ಥಾನಕ್ಕೆ ಕೆ.ಸಿ.ರವಿ ಮತ್ತು ಮಂಜುನಾಥ್ ನಾಮ ಪತ್ರ ಸಲ್ಲಿಸಿದ್ದು ಕೆ.ಸಿ.ರವಿ ೮ ಮತಗಳನ್ನು ಪಡೆಯುವ ಮೂಲಕ ಚುನಾಯಿತರಾದರು. ಚುನಾವಣಾಧಿಕಾರಿಯಾಗಿ ಬಿಇಒ ಆರ್.ಕೃಷ್ಣಪ್ಪ ಕರ್ತವ್ಯ ನಿರ್ವಹಿಸಿದ್ದರು.
ಚುನಾವಣಾ ಸಭೆಯಲ್ಲಿ ಕೆ.ಎಂ.ಜಗದೀಶ್, ದೊಡ್ಡಸ್ವಾಮಿ, ನಾಗಮಣ್ಣಿ, ಮಂಜುಳ, ರಮೇಶ್, ಶೈಲಾನಟೇಶನಾಯಕ, ಗೀತಾಮಹದೇವ್, ಕೆ.ಆರ್.ಪ್ರಕಾಶ್, ಸುಶೀಲ, ರುಕ್ಮಿಣಿ ಹಾಜರಿದ್ದರು. ನೂತನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕಟಗೊಂಡ ನಂತರ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ವಿಜಿಯೋತ್ಸವ ಆಚರಿಸಿ ಶಾಸಕ ಡಿ.ರವಿಶಂಕರ್‌ರವರಿಗೆ ಜಯಕಾರ ಕೂಗಿದರು.
ಈ ಸಂಧರ್ಭದಲ್ಲಿ ಮುಖಂಡರಾದ ಶೇಖರಾಚಾರಿ, ಮಹೇಶ್, ಸುರೇಶ್, ಹರೀಶ್, ರವಿಕುಮಾರ್, ಚಿಕ್ಕಶೆಟ್ಟಿ, ವೇಣುಗೋಪಾಲ್, ಕೃಷ್ಣ, ಸೋಮಶೇಖರಾಚಾರ್, ಮಂಜುನಾಥ್, ಪಿಡಿಒ ನಾಗೇಶ್, ಕಾರ್ಯದರ್ಶಿ ಮಾಯಿಗೌಡ, ಸಿಬ್ಬಂದಿಗಳಾದ ಅಶೋಕ್, ದಿನೇಶ್, ಸಂತೋಷ್, ಗ್ರಾಮದ ಗ್ರಂಥಾಲಯದ ಮೇಲ್ವಿಚಾರಕ ಚಂದ್ರಶೇಖರ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.