Wednesday, June 18, 2025
Google search engine

Homeರಾಜ್ಯಸುದ್ದಿಜಾಲಬೆಂಗಳೂರು: ಆನ್‌ಲೈನ್ ಮೂಲಕ ತರಿಸಿದ್ದ ಕೇಕ್ ತಿಂದು 6 ವರ್ಷದ ಮಗು ಸಾವು

ಬೆಂಗಳೂರು: ಆನ್‌ಲೈನ್ ಮೂಲಕ ತರಿಸಿದ್ದ ಕೇಕ್ ತಿಂದು 6 ವರ್ಷದ ಮಗು ಸಾವು

ಬೆಂಗಳೂರು: ನಗರದ ಕೆಪಿ ಅಗ್ರಹಾರದಲ್ಲಿ ನಡೆದ ದಾರುಣ ಘಟನೆ ಎಲ್ಲೆಡೆ ಆತಂಕ ಮೂಡಿಸಿದೆ. ಆನ್‌ಲೈನ್ ಮೂಲಕ ತರಿಸಲಾದ ಕೇಕ್ ಸೇವಿಸಿದ ಬಳಿಕ ಆರು ವರ್ಷದ ಮಗು ಸಾವನ್ನಪ್ಪಿದ್ದು, ಮಗುವಿನ ತಂದೆ-ತಾಯಿಯರಿಬ್ಬರೂ ಅಸ್ವಸ್ಥರಾಗಿರುವ ಘಟನೆ ನಡೆದಿದೆ.

ಮೃತ ಮಗುವನ್ನು ವಿನಯ್ (6) ಎಂದು ಗುರುತಿಸಲಾಗಿದೆ. ಮಂಗಳವಾರ ಸಂಜೆ, ಆನ್‌ಲೈನ್ ಮೂಲಕ ಕೇಕ್ ತರುವಂತೆ ಆರ್ಡರ್ ಮಾಡಲಾಗಿತ್ತು. ತಂದೆ, ತಾಯಿ ಮತ್ತು ಮಗು ಸೇರಿ ತಿನ್ನುತ್ತಿದ್ದ ವೇಳೆ ಎಲ್ಲರೂ ತೀವ್ರ ಅಸ್ವಸ್ಥಗೊಂಡರು. ಮಗುವಿನ ಸ್ಥಿತಿ ಹೆಚ್ಚು ಗಂಭೀರವಾಗಿದ್ದು, ಇಂದು ಬೆಳಗ್ಗೆ ಸಾವನ್ನಪ್ಪಿದೆ ಎನ್ನಲಾಗಿದೆ.

ಕುಟುಂಬದಲ್ಲಿ ನಾಲ್ವರು ಇದ್ದು, ಹೆಣ್ಣು ಮಗು ಸಂಬಂಧಿಕರ ಮನೆಗೆ ಹೋಗಿತ್ತು. ಮನೆಯಲ್ಲಿ ಮೂವರೇ ಇದ್ದರು. ಕೇಕ್ ತಿಂದ ಬಳಿಕ ತಂದೆ, ತಾಯಿ ಕೂಡ ಅಸ್ವಸ್ಥಗೊಂಡಿದ್ದರು. ಸದ್ಯ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸದ್ಯ ಮಗುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಬಳಿಕ ಎಫ್‌ಎಸ್‌ಎಲ್‌ಗೆ ರವಾನಿಸಲಿದ್ದಾರೆ. ಕೆಂಪೇಗೌಡ ವೈದ್ಯಕೀಯ ಆಸ್ಪತ್ರೆ (KIMS) ನ ವೈದ್ಯರ ತಂಡ ಈ ಪ್ರಕರಣವನ್ನು ಪರಿಶೀಲಿಸುತ್ತಿದ್ದು, ಪೋಷಕರ ಆರೋಗ್ಯದ ಮೇಲೂ ಕಾಳಜಿ ವಹಿಸಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ್ದಾರೆ.

RELATED ARTICLES
- Advertisment -
Google search engine

Most Popular