Thursday, June 26, 2025
Google search engine

HomeUncategorizedರಾಷ್ಟ್ರೀಯ2026ರಿಂದ CBSE 10ನೇ ತರಗತಿಗೆ ವರ್ಷಕ್ಕೆ ಎರಡು ಪರೀಕ್ಷೆಗಳ ವ್ಯವಸ್ಥೆ

2026ರಿಂದ CBSE 10ನೇ ತರಗತಿಗೆ ವರ್ಷಕ್ಕೆ ಎರಡು ಪರೀಕ್ಷೆಗಳ ವ್ಯವಸ್ಥೆ

ಹೊಸದಿಲ್ಲಿ: ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (CBSE) 2026ರ ಶೈಕ್ಷಣಿಕ ವರ್ಷದಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ವರ್ಷಕ್ಕೆ ಎರಡು ಬಾರಿ ಪರೀಕ್ಷೆ ಬರೆಯುವ ಅವಕಾಶ ನೀಡಲಿದೆ.

ಮೊದಲ ಪರೀಕ್ಷೆ ಫೆಬ್ರವರಿಯಲ್ಲಿ ಕಡ್ಡಾಯವಾಗಿ ನಡೆಯಲಿದ್ದು, ಎರಡನೇ ಪರೀಕ್ಷೆ ಮೇನಲ್ಲಿ ಐಚ್ಛಿಕವಾಗಿರುತ್ತದೆ. ವಿದ್ಯಾರ್ಥಿಗಳು ತಮ್ಮ ಅಂಕಗಳನ್ನು ಉತ್ತಮಗೊಳಿಸಲು ಎರಡನೇ ಪರೀಕ್ಷೆ ಬರೆಯಬಹುದು.

ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (NEP) ಶಿಫಾರಸಿನಂತೆ ಈ ಬದಲಾವಣೆಗೆ CBSE ಒಪ್ಪಿಗೆ ನೀಡಿದೆ. ಮೊದಲ ಪರೀಕ್ಷೆಯ ಫಲಿತಾಂಶ ಏಪ್ರಿಲ್‌ನಲ್ಲಿ ಹಾಗೂ ಎರಡನೇ ಪರೀಕ್ಷೆಯದು ಜೂನ್‌ನಲ್ಲಿ ಪ್ರಕಟವಾಗಲಿದೆ.

ಇನ್ನು ಚಳಿಗಾಲವನ್ನು ಪರಿಗಣಿಸಿ ನಡೆಯುವ ಶಾಲೆ ವಿದ್ಯಾರ್ಥಿಗಳಿಗೆ ಮಾತ್ರ ಯಾವುದಾದರೂ ಒಂದು ಪರೀಕ್ಷೆಗೆ ಹಾಜರಾಗುವ ಆಯ್ಕೆ ನೀಡಲಾಗಿದೆ. ಆಂತರಿಕ ಮೌಲ್ಯ ಮಾಪನ ವರ್ಷಕ್ಕೆ ಒಂದೇ ಬಾರಿ ನಡೆಯಲಿದೆ.

RELATED ARTICLES
- Advertisment -
Google search engine

Most Popular