ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಹೆಚ್.ಡಿ. ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿ ಇರುವ ಪ್ರಸಿದ್ಧ ಕಬಿನಿ ಜಲಾಶಯಕ್ಕೆ ಸ್ಯಾಂಡಲ್‌ವುಡ್ ಹ್ಯಾಟ್ರಿಕ್ ಹೀರೋ ನಟ ಶಿವರಾಜ್ ಕುಮಾರ್ ಹಾಗೂ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಅವರು ಭೇಟಿ ನೀಡಿದ್ದಾರೆ.
ಕಬಿನಿ ಡ್ಯಾಂನಲ್ಲಿ ಶಿವಣ್ಣ ಜೊತೆ ಫೋಟೊಗೆ ಅಭಿಮಾನಿಗಳು ಮುಗಿಬಿದ್ದರು. ಡ್ಯಾಂಗೆ ತೆರಳುವ ದಾರಿಯಲ್ಲಿ ರಸ್ತೆಯ ಪಕ್ಕದ ಹಾಡಿ ಮಕ್ಕಳನ್ನು ನೋಡಿದ ಶಿವರಾಜ್ ಕುಮಾರ್ ದಂಪತಿ, ತಕ್ಷಣವೇ ಕಾರು ನಿಲ್ಲಿಸಿ ಮಕ್ಕಳೊಂದಿಗೆ ಮಾತುಕತೆ ನಡೆಸಿದರು. ಮುದ್ದಾದ ಮಕ್ಕಳ ಜೊತೆ ದಂಪತಿಗಳು ಸಂತೋಷದಿಂದ ಫೋಟೋ ಕ್ಲಿಕ್ಕಿಸಿದರು.
ಕಬಿನಿ ಡ್ಯಾಂದ ಪ್ರಕೃತಿ ಸೌಂದರ್ಯ, ನೀರಿನ ಹರಿವು, ಹಸಿರು ಪರ್ವತಗಳು ಈ ದಂಪತಿಯ ಗಮನ ಸೆಳೆದವು. ಅಲ್ಲಿನ ಸಿಬ್ಬಂದಿಗಳು ಹಾಗೂ ಸ್ಥಳೀಯರು ಶಿವಣ್ಣ ದಂಪತಿಗೆ ಆತ್ಮೀಯವಾಗಿ ಆತಿಥ್ಯವನ್ನೂ ನೀಡಿದರು.
ಶಿವರಾಜ್‌ಕುಮಾರ್ ಸದ್ಯ 125 ಸಿನಿಮಾಗಳನ್ನು ಪೂರೈಸಿದ್ದಾರೆ. ಸದ್ಯ ಅವರ ಕೈಯಲ್ಲಿ ಐದಕ್ಕೂ ಹೆಚ್ಚು ಪ್ರಾಜೆಕ್ಟ್‌ಗಳಿವೆ. ಕೆಲ ದಿನಗಳ ಹಿಂದಷ್ಟೇ ಸಿನಿಪಯಣದಲ್ಲಿ 40 ವರ್ಷದ ಪೂರೈಸಿದ ಸಂಭ್ರಮವನ್ನು ಶಿವಣ್ಣ ಮಿಂದೆದ್ದರು.