Friday, June 27, 2025
Google search engine

Homeವಿದೇಶಶೀಘ್ರವೇ ಭಾರತ-ಅಮೆರಿಕ ಬಿಗ್ ಟ್ರೇಡ್ ಡೀಲ್ : ಡೊನಾಲ್ಡ್ ಟ್ರಂಪ್ ಘೋಷಣೆ

ಶೀಘ್ರವೇ ಭಾರತ-ಅಮೆರಿಕ ಬಿಗ್ ಟ್ರೇಡ್ ಡೀಲ್ : ಡೊನಾಲ್ಡ್ ಟ್ರಂಪ್ ಘೋಷಣೆ

ವಾಷಿಂಗ್ಟನ್: ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಸಂಬಂಧದಲ್ಲಿ ಮಹತ್ವದ ಮುಂದುವರಿಕೆ ಸಂಭವಿಸುವ ಎಲ್ಲಾ ಸೂಚನೆಗಳು ವ್ಯಕ್ತವಾಗಿವೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, “ಭಾರತದ ಜೊತೆ ಶೀಘ್ರವೇ ಬಹಳ ದೊಡ್ಡ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲಾಗಲಿದೆ” ಎಂದು ಘೋಷಿಸಿದ್ದಾರೆ.

ಅಮೆರಿಕದ ಶ್ವೇತಭವನದಲ್ಲಿ ನಡೆದ ‘ಬಿಗ್ ಬ್ಯೂಟಿಫುಲ್’ ಎಂಬ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಾ, “ಭಾರತದ ಜೊತೆ ನಮ್ಮ ವ್ಯಾಪಾರ ಸಂಬಂಧ ಅತ್ಯಂತ ಬಲಿಷ್ಠವಾಗಿದೆ. ಈ ಸಂಬಂಧ ನಾವೀಗ ಅಂತಿಮ ಹಂತದ ಮಾತುಕತೆ ನಡೆಸುತ್ತಿದ್ದೇವೆ.

ಪ್ರತಿಯೊಬ್ಬರೂ ಒಪ್ಪಂದ ಮಾಡಿಕೊಳ್ಳಲು ಮತ್ತು ಅದರಲ್ಲಿ ಭಾಗವಹಿಸಲು ಬಯಸುತ್ತಾರೆ. ನಾವು ನಿನ್ನೆ ಚೀನಾದೊಂದಿಗೆ ಸಹಿ ಹಾಕಿದ್ದೇವೆ. ನಾವು ಕೆಲವು ಉತ್ತಮ ಒಪ್ಪಂದಗಳನ್ನು ಹೊಂದಿದ್ದೇವೆ. ಬಹುಶಃ ಭಾರತದೊಂದಿಗೆ ಬಹಳ ದೊಡ್ಡ ಒಪ್ಪಂದ ಮಾಡುತ್ತಿದ್ದೇವೆ. ಈ ವೇಳೆ ಅವರು ನಾವು ಎಲ್ಲರೊದಿಗೆ ಒಪ್ಪಂದ ಮಾಡಿಕೊಳ್ಳುವುದಿಲ್ಲ. ಕೆಲವರಿಗೆ ಮಾತ್ರ ಪತ್ರ ಕಳುಹಿಸುತ್ತೇವೆ ಎಂದು ಅವರು ಹೇಳಿದರು.

ಮೆಗಾ ವ್ಯಾಪಾರ ಒಪ್ಪಂದದ ಕುರಿತು ನಾಲ್ಕು ದಿನಗಳ ಮಾತುಕತೆ ವೇಳೆ ಎರಡೂ ದೇಶಗಳಲ್ಲಿ ಕೈಗಾರಿಕಾ ಮತ್ತು ಕೃಷಿ ಉತ್ಪನ್ನಗಳಿಗೆ ಹೆಚ್ಚಿನ ಮಾರುಕಟ್ಟೆ ಪ್ರವೇಶ, ಸುಂಕ ಕಡಿತ ಮತ್ತು ಸುಂಕ ರಹಿತ ವ್ಯಾಪಾರದ ಬಗ್ಗೆ ಚರ್ಚೆ ನಡೆಸಲಾಗಿದೆ.

ಮಾತುಕತೆ ವೇಳೆ ಎರಡು ದೇಶಗಳ ನಡುವೆ ಪ್ರಸ್ತುತ ಇರುವ 190 ಬಿಲಿಯನ್ ಡಾಲರ್‌ ವಾರ್ಷಿಕ ದ್ವಿಪಕ್ಷೀಯ ವ್ಯಾಪಾರವನ್ನು 2023ರ ವೇಳೆಗೆ 500 ಬಿಲಿಯನ್ ಡಾಲರ್‌ಗೆ ಕೊಂಡೊಯ್ಯುವ ಗುರಿಯನ್ನು ಹಾಕಲಾಗಿದೆ.

RELATED ARTICLES
- Advertisment -
Google search engine

Most Popular