Sunday, June 29, 2025
Google search engine

HomeUncategorizedರಾಷ್ಟ್ರೀಯRAW ಮುಖ್ಯಸ್ಥರಾಗಿ ಪರಾಗ್ ಜೈನ್ ನೇಮಕ

RAW ಮುಖ್ಯಸ್ಥರಾಗಿ ಪರಾಗ್ ಜೈನ್ ನೇಮಕ

ನವದೆಹಲಿ: ಪಂಜಾಬ್ ಕೇಡರ್‌ನ 1989ರ ಬ್ಯಾಚ್ ಐಪಿಎಸ್ ಅಧಿಕಾರಿ ಪರಾಗ್ ಜೈನ್ ಅವರನ್ನು ಎರಡು ವರ್ಷಗಳ ಅವಧಿಗೆ ಸಂಶೋಧನಾ ಮತ್ತು ವಿಶ್ಲೇಷಣಾ ವಿಭಾಗದ (RAW) ಮುಖ್ಯಸ್ಥರಾಗಿ ನೇಮಕ ಮಾಡಲಾಗಿದೆ. ಜುನ್ 30ರಂದು ಅಧಿಕಾರಾವಧಿ ಮುಗಿಯುವ ರವಿ ಸಿನ್ಹಾ ಅವರ ಸ್ಥಾನಕ್ಕೆ ಜುಲೈ 1ರಂದು ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಪ್ರಸ್ತುತ ಅವರು ಎಆರ್‌ಸಿ (ವಾಯುಯಾನ ಸಂಶೋಧನಾ ಕೇಂದ್ರ) ಮುಖ್ಯಸ್ಥರಾಗಿದ್ದು, ಪಾಕಿಸ್ತಾನದ ವಿರುದ್ಧ ‘ಆಪರೇಷನ್ ಸಿಂಧೂರ್’ನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಭದ್ರತಾ ಕಾರ್ಯತಂತ್ರಗಳಲ್ಲಿ ಪರಿಣತಿ ಹೊಂದಿರುವ ಅವರು, ಚಂಡೀಗಢದ ಎಸ್‌ಎಸ್‌ಪಿಯಾಗಿ ಸೇವೆ ಸಲ್ಲಿಸಿರುವ ಅನುಭವವಿದೆ. ಅವರು ಕೆನಡಾ ಮತ್ತು ಶ್ರೀಲಂಕಾದಲ್ಲಿ ರಾಜತಾಂತ್ರಿಕ ಕರ್ತವ್ಯ ನಿರ್ವಹಿಸಿದ್ದರೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಗಳಲ್ಲೂ ತೊಡಗಿದ್ದರು.

RELATED ARTICLES
- Advertisment -
Google search engine

Most Popular