Monday, June 30, 2025
Google search engine

Homeರಾಜ್ಯ‘ಮನ್ ಕಿ ಬಾತ್’ ನಲ್ಲಿ ಕಲಬುರಗಿಯ ‘ಜೋಳದ ರೊಟ್ಟಿ’ಗೆ ಪ್ರಧಾನಿ ಮೋದಿ ಶ್ಲಾಘನೆ

‘ಮನ್ ಕಿ ಬಾತ್’ ನಲ್ಲಿ ಕಲಬುರಗಿಯ ‘ಜೋಳದ ರೊಟ್ಟಿ’ಗೆ ಪ್ರಧಾನಿ ಮೋದಿ ಶ್ಲಾಘನೆ

ಕಲಬುರಗಿ: ಕಲಬುರಗಿಯ ಖಡಕ್ ಜೋಳದ ರೊಟ್ಟಿಗೆ ಪ್ರಧಾನಿ ನರೇಂದ್ರ ಮೋದಿಯವರ ಶ್ಲಾಘನೆ ಲಭಿಸಿದೆ. ಭಾನುವಾರ ತಮ್ಮ ‘ಮನ್ ಕಿ ಬಾತ್’ 123ನೇ ಸಂಚಿಕೆಯಲ್ಲಿ ಅವರು ಕಲಬುರಗಿ ಮಹಿಳೆಯರ ಪರಿಶ್ರಮವನ್ನು ಮೆಚ್ಚಿದರು. ಆತ್ಮನಿರ್ಭರ ಭಾರತ ಅಭಿಯಾನದಡಿಯಲ್ಲಿ ಮಹಿಳೆಯರು ಜೋಳದ ರೊಟ್ಟಿಯನ್ನು ಬ್ರ್ಯಾಂಡ್‌ ಆಗಿ ರೂಪಿಸಿದ್ದು ಗಮನಾರ್ಹ ಎಂದರು.

ಸ್ವಸಹಾಯ ಸಂಘಗಳ ಮೂಲಕ ಪ್ರತಿದಿನ 3,000 ರೊಟ್ಟಿಗಳು ತಯಾರಿಸಲಾಗುತ್ತಿದ್ದು, ಅವುಗಳು ಗ್ರಾಮೀಣ ಭಾಗ ಮಾತ್ರವಲ್ಲದೇ ಬೆಂಗಳೂರಿನ ಮಳಿಗೆಯ ಮೂಲಕ ನಗರಕ್ಕೂ ಹರಡಿವೆ. ಆನ್ಲೈನ್ ಆರ್ಡರ್‌ಗಳೂ ಬರುತ್ತಿವೆ. ಮಹಿಳೆಯರ ಈ ಸಾಧನೆ ರಾಷ್ಟ್ರದ ಆತ್ಮನಿರ್ಭರತೆಗೆ ಉತ್ತಮ ಉದಾಹರಣೆ ಎಂದು ಮೋದಿ ಪ್ರಶಂಸಿಸಿದ್ದಾರೆ.

RELATED ARTICLES
- Advertisment -
Google search engine

Most Popular