Wednesday, July 2, 2025
Google search engine

Homeರಾಜಕೀಯಕೇಂದ್ರದಲ್ಲಿ ನಮ್ಮ ಸರಕಾರ ಬಂದಾಗ ಆರೆಸ್ಸೆಸ್‌ ನಿಷೇಧ: ಪ್ರಿಯಾಂಕ್‌ ಖರ್ಗೆ

ಕೇಂದ್ರದಲ್ಲಿ ನಮ್ಮ ಸರಕಾರ ಬಂದಾಗ ಆರೆಸ್ಸೆಸ್‌ ನಿಷೇಧ: ಪ್ರಿಯಾಂಕ್‌ ಖರ್ಗೆ

ಬೆಂಗಳೂರು: ಆರೆಸ್ಸೆಸ್‌ ಮೇಲಿದ್ದ ನಿಷೇಧವನ್ನು ತೆರವು ಮಾಡಿದ್ದೇ ನಮ್ಮಿಂದಾದ ಒಂದು ದೊಡ್ಡ ತಪ್ಪು ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ. ಆರೆಸ್ಸೆಸ್‌ ಚಟುವಟಿಕೆಗಳು ದೇಶದ್ರೋಹಿ ಸ್ವಭಾವದವಗಿದ್ದು, ನಿಷೇಧದ ಅವಧಿಯಲ್ಲಿ ಅವರು ಕೈಕಾಲು ಹಿಡಿದು ನಾಚಿಕೆಪಟ್ಟು ಕ್ಷಮೆ ಕೇಳಿದ್ದರು. ಈ ಎಲ್ಲಾ ಘಟನೆಗಳು ದಾಖಲೆಗಳಲ್ಲಿ ಇದೆ ಎಂದು ಖರ್ಗೆ ಹೇಳಿದರು.

ಆರೆಸ್ಸೆಸ್‌ ನಾಯಕ ದತ್ತಾತ್ರೇಯ ಹೊಸಬಾಳೆ ಹೇಳಿಕೆಗೆ ಪ್ರತಿಕ್ರಿಯಿಸಿ, “ಆರೆಸ್ಸೆಸ್‌ಗೆ ಜಾತ್ಯತೀತ, ಸಮಾನತೆ ಮತ್ತು ಸಮಾಜವಾದ ಅಂಶಗಳ ವಿರುದ್ಧ ಅಲರ್ಜಿ ಇದೆ. ನಾವು ಆರಂಭದಿಂದಲೂ ಅವರ ತತ್ತ್ವಗಳನ್ನು ತಿರಸ್ಕರಿಸಿದ್ದೇವೆ” ಎಂದು ಹೇಳಿದರು.

ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಬಗ್ಗೆ ಮಾತನಾಡಿದ ಅವರು, “ನಮ್ಮ ಶಾಸಕರ ಸಮಸ್ಯೆಗಳನ್ನು ನಮ್ಮ ಹೈಕಮಾಂಡ್‌ ಮುಂದೆ ಇರಿಸುವ ಬದಲು ಕೇಶವಕೃಪಾಕ್ಕೆ ಹೋಗಿ ಹೇಳುತ್ತೀರಾ?” ಎಂದು ಪ್ರಶ್ನಿಸಿದರು.

ಇದರ ವಿರುದ್ಧವಾಗಿ ಮಾಜಿ ಸಚಿವ ಸುನಿಲ್‌ ಕುಮಾರ್‌ ಪ್ರತಿಕ್ರಿಯೆ ನೀಡುತ್ತಾ, “ಮೀಸೆ ತಿರುವಿದವರು ಎಲ್ಲರೂ ಮಣ್ಣಾಗಿದ್ದಾರೆ” ಎಂಬ ವ್ಯಂಗ್ಯವಾಕ್ಯ ಬಳಸಿ ಖರ್ಗೆಯ ಹೇಳಿಕೆಯನ್ನು ಟೀಕಿಸಿದರು. ಆರೆಸ್ಸೆಸ್‌ ಹಲವು ಬೆದರಿಕೆಗಳನ್ನು ಎದುರಿಸಿ ಇಂದು ಬಲಿಷ್ಠ ಸಂಸ್ಥೆಯಾಗಿರುವುದನ್ನು ಅವರು ಒತ್ತಿಹೇಳಿದರು.

RELATED ARTICLES
- Advertisment -
Google search engine

Most Popular