ನವದೆಹಲಿ: 19 ಕೆಜಿ ಎಲ್‌ಪಿಜಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 60 ರೂ. ಇಳಿಕೆಯಾಗಿದ್ದು, ಪರಿಷ್ಕೃತ ದರ ಇಂದಿನಿಂದಲೇ (ಜು.1) ಜಾರಿಗೆ ಬಂದಿದೆ. ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ದೆಹಲಿಯಲ್ಲಿ ಇಂದಿನಿಂದ 19 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆ 1665 ರೂ.ಆಗಿದೆ. ಕೋಲ್ಕತ್ತಾದಲ್ಲಿ 1769 ರೂ. ಇದೆ. ಮುಂಬೈನಲ್ಲಿ ಈ ಸಿಲಿಂಡರ್ ದರ 1616 ರೂ. ಆಗಿದೆ. ಚೆನ್ನೈನಲ್ಲಿ 1823.50 ರೂ. ಆಗಿದೆ.
ಗೃಹ ಬಳಕೆಯ ಎಲ್‌ಪಿಜಿ ದರ ಹೀಗಿದೆ:
ಬೆಂಗಳೂರು 855.5 ರೂ., ದೆಹಲಿ 853 ರೂ., ಗುರುಗ್ರಾಮ 861.5 ರೂ., ಅಹಮದಾಬಾದ್ 860 ರೂ., ಪಾಟ್ನಾ 942.5 ರೂ., ಆಗ್ರಾ 865.5 ರೂ., ಹೈದರಾಬಾದ್ 905 ರೂ., ಪುಣೆ 856 ರೂ., ಮುಂಬೈ 852.50ರೂ., ಲಕ್ನೋ 890.5 ರೂ., ವಾರಾಣಸಿ 916.5 ರೂ., ಭೋಪಾಲ್ 858.5 ರೂ., ಇಂದೋರ್ 881 ರೂ., ಗಾಜಿಯಾಬಾದ್ 850.5 ರೂ. ಇದೆ.