ಬೆಂಗಳೂರು: ಬೆಂಗಳೂರು ನೈಸ್ ರಸ್ತೆಯಲ್ಲಿ ಲಕ್ಷಾಂತರ ವಾಹನಗಳು ಸಂಚರಿಸುತ್ತಿರುವ ನಡುವೆಯೇ ಟೋಲ್ ದರಗಳಲ್ಲಿ ಇಂದಿನಿಂದ (ಜುಲೈ 1ರಿಂದ) ಮತ್ತೆ ಶೇ.15ರವರೆಗೆ ಏರಿಕೆಯಾಗಿದೆ. ಬಿಎಂಐಸಿ ಯೋಜನೆಯ ಫೆರಿಫೆರಲ್ ಹಾಗೂ ಲಿಂಕ್ ರಸ್ತೆಗಳ ಟೋಲ್ ದರಗಳನ್ನು ಪರಿಷ್ಕರಿಸಲಾಗಿದ್ದು, ಈ ಬಗ್ಗೆಯಾಗಿ ನಂದಿ ಏಕನಾಮಿಕಲ್ ಕಾರಿಡಾರ್ ಎಂಟರ್ಪ್ರೈಸಸ್ ಮಾಹಿತಿ ನೀಡಿದೆ.
ಒಟ್ಟು 8 ಟೋಲ್ ಪ್ಲಾಜಾಗಳಲ್ಲಿ ಈ ಬದಲಾವಣೆ ಅನ್ವಯವಾಗಲಿದೆ. ಹೊಸೂರು ರಸ್ತೆ, ಬನ್ನೇರುಘಟ್ಟ ರಸ್ತೆ, ಕನಕಪುರ ರಸ್ತೆ, ತುಮಕೂರು ರಸ್ತೆ, ಮೈಸೂರು ರಸ್ತೆ ಸೇರಿದಂತೆ ವಿವಿಧ ಮುಖ್ಯ ಮಾರ್ಗಗಳಲ್ಲಿ ಟೋಲ್ ದರ ಏರಿಕೆಯಾಗಿದೆ.
ಟೋಲ್ ದರ ವಿವರಗಳು ಹೀಗಿವೆ:
- ತುಮಕೂರು ರಸ್ತೆ: ಕಾರು – ₹233, ಬೈಕ್ – ₹78, ಬಸ್ – ₹650
- ಕನಕಪುರ ರಸ್ತೆ: ಕಾರು – ₹110, ಬೈಕ್ – ₹33, ಬಸ್ – ₹295
- ಬನ್ನೇರುಘಟ್ಟ ರಸ್ತೆ: ಕಾರು – ₹158, ಬೈಕ್ – ₹48, ಬಸ್ – ₹450
- ಹೊಸೂರು ರಸ್ತೆ: ಕಾರು – ₹223, ಬೈಕ್ – ₹78, ಬಸ್ – ₹645
ಬೈಕ್ ಸವಾರರು ಸಹ ಟೋಲ್ ಪಾವತಿಸಬೇಕಾಗಿರುವುದು ಜನರಲ್ಲಿ ಅಸಹನೆ ಮೂಡಿಸಿದೆ. ಹಠಾತ್ ದರ ಏರಿಕೆಗೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಸರ್ಕಾರ ಈ ಬಗ್ಗೆ ಏನು ಸ್ಪಂದಿಸಲಿದೆ ಎಂಬುದನ್ನು ನೋಡಬೇಕು.