ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ತಂಬಾಕು ಹದಗೊಳಿಸುವ ವೇಳೆ ಆಕಸ್ಮಿಕಬೆಂಕಿ ತಗಲಿ ಬ್ಯಾರೇನ್ ಸಂಪೂರ್ಣವಾಗಿ ಸುಟ್ಟು ಹೋಗಿರುವ ಘಟನೆ ಸಾಲಿಗ್ರಾಮ ತಾಲೂಕಿನ ಕುಪ್ಪೆ ಗ್ರಾಮದಲ್ಲಿ ಗುರುವಾರ ನಡೆದಿದೆ ನಡೆದಿದೆ.
ಗ್ರಾಮದ ವಿಶ್ವೇಶ್ವರಯ್ಯ ಎಂಬುವರಿಗೆ ಸೇರಿದ ತಂಬಾಕು ಹದಗೊಳಿಸುವ ಬ್ಯಾರೇನ್ ಸುಟ್ಟು ಹೋಗಿದ್ದು ಸುಮಾರು 5 ಲಕ್ಷದಷ್ಟು ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಗುರುವಾರ 3 ಗಂಟೆ ಬೆಳಗಿನ ಜಾವ ಸುಮಾರಿನಲ್ಲಿ ಈ ಘಟನೆ ನಡೆದಿದ್ದು ತಕ್ಷಣವೇ ವಿಶ್ವೇಶ್ವರಯ್ಯ ಕುಟುಂಬಸ್ಥರು, ಗ್ರಾಮಸ್ಥರು ಎತ್ತೆಚ್ಚು ಕೊಂಡು ಬೆಂಕಿ ಆರಿಸಿ ಮುಂದೆ ಅಗಬಹುದಾಗಿದ್ದ ಅನಾಹುತ ತಪ್ಪಿಸಿದ್ದಾರೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕದಳ ಮತ್ತು ಕಟ್ಟೆಮಳಲವಾಡಿ ವಿಭಾಗದ ತಂಬಾಕು ಮಂಡಳಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ತಂಬಾಕು ಮಂಡಳಿಯಿಂದ ಸಿಗುವ ನಷ್ಟ ಪರಿಹಾರವನ್ನು ಒದಗಿಸುವ ಭರವಸೆ ನೀಡಿದರು.