Friday, July 4, 2025
Google search engine

Homeಸ್ಥಳೀಯಆಷಾಢ ಮಾಸದ ಎರಡನೇ ಶುಕ್ರವಾರದ ಅಂಗವಾಗಿ ಲಕ್ಷ್ಮಿ ಅಲಂಕಾರದಲ್ಲಿ ಚಾಮುಂಡೇಶ್ವರಿ

ಆಷಾಢ ಮಾಸದ ಎರಡನೇ ಶುಕ್ರವಾರದ ಅಂಗವಾಗಿ ಲಕ್ಷ್ಮಿ ಅಲಂಕಾರದಲ್ಲಿ ಚಾಮುಂಡೇಶ್ವರಿ

ಮೈಸೂರು: ಇಂದು ಆಷಾಢ ಮಾಸದ ಎರಡನೇ ಶುಕ್ರವಾರದ ಸಂದರ್ಭದಲ್ಲಿ ಚಾಮುಂಡೇಶ್ವರಿ ತಾಯಿ ಲಕ್ಷ್ಮಿ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದಾಳೆ. ಈ ವಿಶೇಷ ದಿನದ ನಿಮಿತ್ತ ದೇವಾಲಯವನ್ನು ತೋತಾಪುರಿ, ಮೆಕ್ಕೆಜೋಳ ಹಾಗೂ ಕಮಲಪುಷ್ಪಗಳಿಂದ ಸುವ್ಯವಸ್ಥಿತವಾಗಿ ಅಲಂಕರಿಸಲಾಗಿದೆ.

ಮುಂಜಾನೆಯಿಂದಲೇ ಭಕ್ತರು ಭಾರಿ ಸಂಖ್ಯೆಯಲ್ಲಿ ಆಗಮಿಸಿ, ತಾಯಿಯ ದರ್ಶನ ಪಡೆಯುತ್ತಿದ್ದಾರೆ. ಇಂದು ಮುಂಜಾನೇ 5 ಗಂಟೆಯಿಂದಲೇ ತಾಯಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಕಳೆದ ಶುಕ್ರವಾರ ತಡರಾತ್ರಿಯಿಂದಲೇ ಮೆಟ್ಟಿಲುಗಳ ಮೂಲಕ ದರ್ಶನಕ್ಕೆ ಭಕ್ತರು ಬಂದ ಕಾರಣ ಸಾಕಷ್ಟು ಗೊಂದಲಗಳಾಗಿದ್ದವು. ಹೀಗಾಗಿ ಈ ಬಾರಿ ಬೆಳಿಗ್ಗೆ 5 ರಿಂದ ಸಂಜೆ 6 ಗಂಟೆವರೆಗೆ ಮಾತ್ರ ಮೆಟ್ಟಿಲುಗಳನ್ನೇರಿ ಬಂದವರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಪವಿತ್ರ ಸಂದರ್ಭದಲ್ಲಿ ದೇವಸ್ಥಾನ ಪರಿಸರದಲ್ಲಿ ಧಾರ್ಮಿಕ ವಾತಾವರಣ ಮೂಡಿದ್ದು, ಭಕ್ತರು ಭಕ್ತಿಭಾವದಿಂದ ಪೂಜೆ ಸಲ್ಲಿಸುತ್ತಿದ್ದಾರೆ.

RELATED ARTICLES
- Advertisment -
Google search engine

Most Popular