Sunday, July 6, 2025
Google search engine

Homeರಾಜ್ಯಆಗಸ್ಟ್ 15ರೊಳಗೆ ಬೆಂಗಳೂರು ಮೆಟ್ರೋ ಹಳದಿ ಮಾರ್ಗ ಚಾಲನೆ: ಬಿಎಂಆರ್ಸಿಎಲ್ ಎಂಡಿ ಮಹೇಶ್ವರ್ ರಾವ್ ಸ್ಪಷ್ಟನೆ

ಆಗಸ್ಟ್ 15ರೊಳಗೆ ಬೆಂಗಳೂರು ಮೆಟ್ರೋ ಹಳದಿ ಮಾರ್ಗ ಚಾಲನೆ: ಬಿಎಂಆರ್ಸಿಎಲ್ ಎಂಡಿ ಮಹೇಶ್ವರ್ ರಾವ್ ಸ್ಪಷ್ಟನೆ

ಬೆಂಗಳೂರು: ಆಗಸ್ಟ್ 15ರೊಳಗೆ ಮೆಟ್ರೋ ಹಳದಿ ಮಾರ್ಗಕ್ಕೆ ಚಾಲನೆ ನೀಡಲಾಗುವುದು ಎಂದು ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ್ ರಾವ್ ತಿಳಿಸಿದ್ದಾರೆ. ಯೆಲ್ಲೋ ಲೈನ್ ಕುರಿತು ಮಾತನಾಡಿದ ಅವರು, ಇದಕ್ಕಾಗಿ ಈಗಾಗಲೇ ಮೂರು ಮೆಟ್ರೋ ಕೋಚ್ ಬಂದಿದೆ ಎಂದು ತಿಳಿಸಿದ್ದಾರೆ.

ಎಲ್ಲಾ ನಿಯಮಾನುಸಾರ ಕಾರ್ಯಗಳು ಒಂದು ತಿಂಗಳೊಳಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಸೇಫ್ಟಿ ಟೆಸ್ಟ್ ಪ್ರಕ್ರಿಯೆ ಮುಂದಿನ ವಾರದೊಳಗೆ ಮುಗಿಯುವ ನಿರೀಕ್ಷೆ ಇದೆ. 17 ಕಿಲೋಮೀಟರ್ ಉದ್ದದ ಈ ಮಾರ್ಗದಲ್ಲಿ ಒಟ್ಟು 17 ನಿಲ್ದಾಣಗಳಿವೆ. ಕೆಲವು ನಿಲ್ದಾಣಗಳಲ್ಲಿ ಮಾತ್ರ ಸೇವೆ ಆರಂಭಿಸುವ ವಿಚಾರವನ್ನೂ ಪರಿಗಣಿಸಲಾಗುತ್ತಿದೆ. ಆಗಸ್ಟ್‌ನಲ್ಲಿ ಸಾಧ್ಯವಾದಷ್ಟು ಬೇಗ ಚಾಲನೆ ನೀಡುವ ಉದ್ದೇಶವಿದೆ. ಜಯನಗರದ ಅಂಡರ್‌ಪಾಸ್ ನಿರ್ಮಾಣಕ್ಕೆ ಮನವಿ ಸಲ್ಲಿಸಲಾಗಿದೆ. ಹಣಕಾಸು ಸಹಾಯಕ್ಕೆ ಸರ್ಕಾರದ ಸ್ಪಂದನೆ ಕಾಯಲಾಗುತ್ತಿದೆ.

ಹಳದಿ ಮಾರ್ಗ ವಿಳಂಬದ ಬಗ್ಗೆ ನಾಗರಿಕರಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಈ ಹಿನ್ನೆಲೆ ಸಂಸದ ತೇಜಸ್ವಿ ಸೂರ್ಯ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಟೀಕೆಗಳಿಗೆ ಸ್ಪಂದನೆ ನೀಡಿದ ಬಿಎಂಆರ್ಸಿಎಲ್ ಎಂಡಿ ರಾವ್ ಪ್ರಗತಿಯ ವಿವರ ನೀಡಿದರು.

RELATED ARTICLES
- Advertisment -
Google search engine

Most Popular