Monday, July 7, 2025
Google search engine

Homeಅಪರಾಧತುಮಕೂರಿನಲ್ಲಿ ದಾವಣಗೆರೆಯ ಪಿಎಸ್‌ಐ ಆತ್ಮಹತ್ಯೆ: ಡೆತ್ ನೋಟ್ ಬರೆದಿಟ್ಟು ಲಾಡ್ಜ್‌ನಲ್ಲಿ ನೇಣಿಗೆ ಶರಣು

ತುಮಕೂರಿನಲ್ಲಿ ದಾವಣಗೆರೆಯ ಪಿಎಸ್‌ಐ ಆತ್ಮಹತ್ಯೆ: ಡೆತ್ ನೋಟ್ ಬರೆದಿಟ್ಟು ಲಾಡ್ಜ್‌ನಲ್ಲಿ ನೇಣಿಗೆ ಶರಣು

ತುಮಕೂರು : ತುಮಕೂರಿನ ಲಾಡ್ಜ್ ವೊಂದರಲ್ಲಿ ದಾವಣಗೆರೆಯ ಪಿಎಸ್ ಐ ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

ದಾವಣಗೆರೆ ಬಡಾವಣೆಯ ಠಾಣೆಯ ಪಿಎಸ್ ಐ ತುಮಕೂರಿನ ದ್ವಾರಕ ಹೋಟೆಲ್ ಲಾಡ್ಜ್ ನಲ್ಲಿ ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

35 ವರ್ಷದ ನಾಗರಾಜು ಆತ್ಮಹತ್ಯೆಗೆ ಶರಣಾದ ಪಿಎಸ್ ಐ ಆಗಿದ್ದು, ಜುಲೈ 1 ರಂದು ದ್ವಾರಕ ಹೋಟೆಲ್ ಲಾಡ್ಜ್ ನಲ್ಲಿ ರೂಂ ಬುಕ್ ಮಾಡಿದ್ದರು. ಇಂದು ಲಾಡ್ಜ್ ನಲ್ಲಿ ದುರ್ವಾಸನೆ ಬಂದಿದ್ದು, ಸಿಬ್ಬಂದಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

RELATED ARTICLES
- Advertisment -
Google search engine

Most Popular