ನೆಲಮಂಗಲ: ರಾಜ್ಯವನ್ನು ಬೆಚ್ಚಿ ಬೀಳಿಸಿದ್ದ ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆಯಂತೆ ಮತ್ತೊಂದು ಭೀಕರ ಘಟನೆ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯಲ್ಲಿ ನಡೆದಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆಯ ಸಂಬಂಧ ನಾಲ್ವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.
ಕುಶಾಲ್ ಎಂಬ ಯುವಕನು ಕಾಲೇಜಿನಲ್ಲಿ ಪರಿಚಿತೆಯಾದ ಯುವತಿಯೊಂದಿಗೆ ಎರಡು ವರ್ಷ ಪ್ರೀತಿ ಸಂಬಂಧ ಹೊಂದಿದ್ದ. ಈ ಸಂಬಂಧ ಮುರಿದು ಬಿದ್ದು, ಯುವತಿಗೆ ಹೊಸ ಸ್ನೇಹಿತನೊಬ್ಬ ಪರಿಚಯವಾಗಿದ್ದ ಮಾಹಿತಿಯಿಂದ ಕುಶಾಲ್ ಸೈಕೋ ವರ್ತನೆ ತೋರಿಸಿದ್ದಾನೆ. ತಾನು ಅವಳಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಲು ಪ್ರಾರಂಭಿಸಿದ್ದಾನೆ ಎನ್ನಲಾಗಿದೆ.
ಈ ಬಗ್ಗೆ ತಿಳಿದ ಯುವತಿಯ ಸ್ನೇಹಿತರು ಮಾತನಾಡಿ ಪರಿಹಾರ ಹುಡುಕುವ ನಾಟಕದೊಂದಿಗೆ, ಕುಶಾಲ್‌ನನ್ನು ಎಜಿಪಿ ಲೇಔಟ್ ಕಡೆ ಕರೆಸಿ ಅಪಹರಿಸಿದ್ದಾರೆ. ಕುಶಾಲ್‌ನನ್ನು ಕಿಡ್ನಾಪ್ ಮಾಡಿಕೊಂಡು ಬಂದ ಗುಂಪು, ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಆತನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಕುಶಾಲ್‌ನನ್ನು ಕೋಲಿನಿಂದ ಹೊಡೆದು, ಆತನ ಬಟ್ಟೆ ಬಿಚ್ಚಿಸಿ ಮರ್ಮಾಂಗಕ್ಕೆ ತುಳಿದು ವಿಕೃತಿ ಮೆರೆದಿದ್ದಾರೆ. ಈ ಕೃತ್ಯವನ್ನು ಗುಂಪಿನಲ್ಲಿದ್ದ ಒಬ್ಬಾತ ವಿಡಿಯೋ ಮಾಡಿದ್ದು, ಇದು ರೇಣುಕಾಸ್ವಾಮಿ ಕೇಸ್‌ನಂತೆ ಆಗುತ್ತೆ ಎಂದಿದ್ದಾನೆ. ಎ1 ಹೇಮಂತ ಎ2 ನಾನು ಎಂದು ವಿಡಿಯೋದಲ್ಲಿ ಹೇಳಿದ್ದಾರೆ. ಬಳಿಕ, ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಕುಶಾಲ್ಗೆ ಆರೋಪಿಗಳು ಬೆದರಿಕೆ ಹಾಕಿದ್ದಾರೆ.
ಈ ಕೃತ್ಯಕ್ಕೆ ಸಂಬಂಧಿಸಿ ಹೇಮಂತ್, ಯಶವಂತ್, ಶಿವಶಂಕರ್, ಶಶಾಂಕ್ ಗೌಡ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆ ಕೂಡ ರಾಜ್ಯದ ಕಾನೂನು ಸುವ್ಯವಸ್ಥೆ ಮೇಲೆ ಗಂಭೀರ ಪ್ರಶ್ನೆ ಎಬ್ಬಿಸಿದೆ.