ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಪಟ್ಟಣದ ೯ನೇ ವಾರ್ಡಿನ ಅರ್ಕನಾಥ ರಸ್ತೆಯ ನಿವಾಸಿ ಯಡತೊರೆ ಶಿಕ್ಷಣ ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷೆ ಪ್ರೇಮಮ್ಮರಾಮಾಚಾರಿ(೭೭) ಸೋಮವಾರ ಸಂಜೆ ನಿಧನರಾದರು.
ಮೃತರು ಲೋಕೋಪಯೋಗಿ ಇಲಾಖೆಯ ನಿವೃತ್ತ ಅಭಿಯಂತರ ದಿವಂಗತ ರಾಮಾಚಾರಿ ಅವರ ಪತ್ನಿಯಾಗಿದ್ದು, ಇವರು ನಾಲ್ವರು ಪುತ್ರಿಯರು, ಓರ್ವ ಪುತ್ರ ಹಾಗೂ ಅಪಾರ ಬಂಧು ವರ್ಗದವರನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಮಂಗಳವಾರ ಮಧ್ಯಾಹ್ನ ಕಂಠೇನಹಳ್ಳಿಯಲ್ಲಿರುವ ಅವರ ಜಮೀನಿನಲ್ಲಿ ನೆರವೇರಿತು.
ಸಂತಾಪ-ಎoಸಿಡಿಸಿಸಿ ಬ್ಯಾಂಕಿನ ನಿರ್ದೇಶಕ ದೊಡ್ಡಸ್ವಾಮೇಗೌಡ, ಯಡತೊರೆ ಶಿಕ್ಷಣ ಮಹಾವಿದ್ಯಾಲಯದ ಆಡಳಿತ ಮಂಡಳಿ ಕಾರ್ಯದರ್ಶಿ ಸುಜಾತಶ್ರೀನಿವಾಸ್, ವ್ಯವಸ್ಥಾಪಕ ಲೋಕೇಶ್‌ಭರಣಿ, ಪ್ರಾಂಶುಪಾಲೆ ಎನ್.ಎಸ್.ದೀಪ, ಉಪನ್ಯಾಸಕರು ಮತ್ತು ಸಿಬ್ಬಂದಿ ವರ್ಗ, ವಿಶ್ವಕರ್ಮ ಸಮಾಜದ ಮುಖಂಡ ವೀರಭದ್ರಾಚಾರ್, ಪುರಸಭೆ ಸದಸ್ಯೆ ಶಾರದಾನಾಗೇಶ್, ಮಾಜಿ ಸದಸ್ಯರಾದ ಕೆ.ಆರ್.ಗಿರೀಶ್, ಕೆ.ಬಿ.ಸುಬ್ರಹ್ಮಣ್ಯ, ಯುವ ಕಾಂಗ್ರೆಸ್ ಮುಖಂಡ ದೀಪು ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದರು.