Wednesday, July 9, 2025
Google search engine

Homeಅಪರಾಧಮಾನಸಿಕ ಖಿನ್ನತೆ: ಕಾವೇರಿ ನದಿಗೆ ಹಾರಿ ಯುವತಿಯ ಆತ್ಮಹತ್ಯೆ ಯತ್ನ

ಮಾನಸಿಕ ಖಿನ್ನತೆ: ಕಾವೇರಿ ನದಿಗೆ ಹಾರಿ ಯುವತಿಯ ಆತ್ಮಹತ್ಯೆ ಯತ್ನ

ಮಂಡ್ಯ: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಉತ್ತರ ಕಾವೇರಿ ಸೇತುವೆ ಬಳಿ ಯುವತಿಯೋರ್ವಳು ಕಾವೇರಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಪ್ರಸಾದಹಳ್ಳಿ ಗ್ರಾಮದ ಮಂಜುನಾಥ್ ಅವರ ಪುತ್ರಿ ಸಿಂಚನಾ (24) ಎಂಬವರು ನದಿಗೆ ಹಾರಿದವರು.

ಎಂಸಿಎ ಪದವೀಧರಳಾಗಿರುವ ಸಿಂಚನಾ, ಪಿಸಿಓಡಿ ಸಮಸ್ಯೆಯಿಂದ ಬಳಲುತ್ತಿದ್ದರು. ಈ ಸಮಸ್ಯೆ ಕಾರಣದಿಂದಾಗಿ ಕಳೆದ ಕೆಲವು ಸಮಯದಿಂದ ಮಾನಸಿಕ ಖಿನ್ನತೆಯಲ್ಲಿ ಬಳಲುತ್ತಿದ್ದರು. ಮಂಗಳವಾರ ಸಂಜೆ ಮನೆಯಿಂದ ಹೊರಟು, ಹಾಸನ ಮೂಲಕ ಚನ್ನರಾಯಪಟ್ಟಣ ಮಾರ್ಗವಾಗಿ ಶ್ರೀರಂಗಪಟ್ಟಣದ ಬಸ್ ನಿಲ್ದಾಣಕ್ಕೆ ಬಂದಿದ್ದರು. ಬಳಿಕ ಬೆಂಗಳೂರು ದಿಕ್ಕಿಗೆ ನಡೆದು, ರಾತ್ರಿ 8ರ ಸುಮಾರಿಗೆ ಕಾವೇರಿ ಸೇತುವೆಯ ಮೇಲಿಂದ ನದಿಗೆ ಹಾರಿದ್ದಾರೆ.

ದಾರಿ ಬದಲಿಸುತ್ತಿದ್ದ ವಾಹನ ಸವಾರರು ಈ ಘಟನೆ ಗಮನಿಸಿ ಕೂಡಲೇ ಶ್ರೀರಂಗಪಟ್ಟಣ ಟೌನ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಹಾಗೂ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಹುಡುಕಾಟ ನಡೆಸಿದ್ದಾರೆ. ಆಧಾರ್ ಕಾರ್ಡ್, ಬ್ಯಾಗ್ ಮತ್ತು ಚಪ್ಪಲಿಗಳ ಆಧಾರದ ಮೇಲೆ ಯುವತಿಯ ಗುರುತು ಬಹಿರಂಗವಾಗಿದೆ. ಕತ್ತಲೆಯಲ್ಲಿ ತೀವ್ರ ಹರಿವಿನಲ್ಲಿ ಹುಡುಕಾಟ ಅಸಾಧ್ಯವಾದ ಕಾರಣ ಬುಧವಾರ ಮುಂಜಾನೆ ಮತ್ತೆ ಕಾರ್ಯಾಚರಣೆ ಆರಂಭಿಸಲಾಗಿದೆ.

ಈ ಸಂಬಂಧ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Google search engine

Most Popular