Wednesday, July 9, 2025
Google search engine

Homeಅಪರಾಧಮೂವರು ಶಂಕಿತ ಉಗ್ರರು ಎನ್ಐಎ ಬಲೆಗೆ

ಮೂವರು ಶಂಕಿತ ಉಗ್ರರು ಎನ್ಐಎ ಬಲೆಗೆ

ಬೆಂಗಳೂರು: ಬೆಂಗಳೂರು ನಗರದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಅಧಿಕಾರಿಗಳು ಮೂವರು ಶಂಕಿತ ಉಗ್ರರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಉಗ್ರ ಚಟುವಟಿಕೆಗೆ ಸಹಾಯ ಮಾಡಿರುವ ಶಂಕೆ ಮೇಲೆ ಚಿಂತಾಮಣಿಯ ಟ್ಯಾಂಕ್ ಬಂಡ್ ನಿವಾಸಿ, ಮನೋವೈದ್ಯ ನಾಗರಾಜ್ ಎಂಬಾತನನ್ನೂ ಬಂಧಿಸಲಾಗಿದೆ. ಆತ ನಾಸೀರ್ ಎಂಬ ಜೈಲಿನಲ್ಲಿದ್ದ ಉಗ್ರನಿಗೆ ಮಾನಸಿಕ ಬೆಂಬಲ ನೀಡಿದ್ದು, ಯುವಕರ ಮೈಂಡ್‌ ವಾಶ್ ಮಾಡುವಲ್ಲಿ ಸಹಕರಿಸಿದ್ದಾನೆ ಎನ್ನಲಾಗಿದೆ.

ನಾಸೀರ್ ಹಲವು ಬಾಂಬ್ ಸ್ಫೋಟ ಪ್ರಕರಣಗಳ ಪ್ರಮುಖ ಆರೋಪಿ. 2008ರ ಸರಣಿ ಬಾಂಬ್ ದಾಳಿ, ಮಂಗಳೂರು ಕುಕ್ಕರ್ ಬ್ಲಾಸ್ಟ್, ಶಿವಮೊಗ್ಗ ಉಗ್ರ ಚಟುವಟಿಕೆ, ಕಾಮೇಶ್ವರಂ ಕೆಫೆ ಬ್ಲಾಸ್ಟ್ ಸೇರಿ ಹಲವು ಪ್ರಕರಣಗಳಲ್ಲಿ ಆತನ ನಿಕಟ ಸಂಪರ್ಕವಿದೆ. ಜೈಲಿನಿಂದಲೇ ಸ್ಲೀಪರ್ ಸೆಲ್‌ ಗಳು ಹಾಗೂ ಉಗ್ರ ತಂಡಗಳೊಂದಿಗೆ ಸಂಪರ್ಕ ಹೊಂದಿದ್ದ ನಾಸೀರ್, ಯುವಕರನ್ನು ತಯಾರು ಮಾಡುತ್ತಿದ್ದ.

ಜುನೈದ್, ಮೊಹಮ್ಮದ್ ಹರ್ಷದ್ ಖಾನ್, ಸುಹೈಲ್, ಫೈಜಲ್, ಜಾಹಿದ್ ತಬ್ರೇಜ್, ಮುದಾಸಿರ್ ಸೇರಿದಂತೆ ಯುವಕರ ಒಂದು ತಂಡ ಆರ್‌ಟಿ ನಗರ, ಹೆಬ್ಬಾಳ ಪ್ರದೇಶಗಳಲ್ಲಿ ಬಂಧಿತವಾಗಿದೆ. ಇವರ ಬಳಿ ಪಿಸ್ತೂಲ್, ಗ್ರನೇಡ್, ಸ್ಫೋಟಕ ವಸ್ತುಗಳು ಪತ್ತೆಯಾಗಿದೆ. ಸಿಸಿಬಿ ಪೊಲೀಸರು ಪ್ರಕರಣವನ್ನು ಎನ್ಐಎಗೆ ಹಸ್ತಾಂತರಿಸಿದ್ದು, ಈಗಾಗಲೇ ಮೂವರನ್ನು ಬಂಧಿಸಿ, ಹಣ, ವಾಕಿಟಾಕಿ ಸೇರಿದಂತೆ ಸಾಕಷ್ಟು ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಮುಖ್ಯ ಆರೋಪಿ ಜುನೈದ್ ಗಾಗಿ ಶೋಧ ಮುಂದುವರಿದಿದೆ.

RELATED ARTICLES
- Advertisment -
Google search engine

Most Popular