Wednesday, July 9, 2025
Google search engine

HomeUncategorizedರಾಷ್ಟ್ರೀಯಗುಜರಾತ್‌: ಮಹಿಸಾಗರ್ ನದಿಗೆ ಗಂಭೀರಾ ಸೇತುವೆ ಕುಸಿದು ಎಂಟು ಮಂದಿ ದುರ್ಮರಣ

ಗುಜರಾತ್‌: ಮಹಿಸಾಗರ್ ನದಿಗೆ ಗಂಭೀರಾ ಸೇತುವೆ ಕುಸಿದು ಎಂಟು ಮಂದಿ ದುರ್ಮರಣ

ವಡೋದರಾ: ಗುಜರಾತ್‌ನ ವಡೋದರಾ ಜಿಲ್ಲೆಯಲ್ಲಿ ಗಂಭೀರಾ ಸೇತುವೆಯ ಒಂದು ಭಾಗ ಇಂದು ಬೆಳಿಗ್ಗೆ 7.30ರ ಸುಮಾರಿಗೆ ಏಕಾಏಕಿ ಕುಸಿದ ಪರಿಣಾಮ, ಕನಿಷ್ಠ ನಾಲ್ಕು ವಾಹನಗಳು ಮಹಿಸಾಗರ್ ನದಿಗೆ ಉರುಳಿದ್ದು, ಎಂಟು ಮಂದಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಮೃತರಲ್ಲಿ ಟ್ರಕ್ ಮತ್ತು ಟ್ಯಾಂಕರ್ ಚಾಲಕರೂ ಸೇರಿದ್ದಾರೆ. ಸಚಿವ ಋಷಿಕೇಶ್ ಪಟೇಲ್ ಈ ವಿಷಯವನ್ನು ದೃಢಪಡಿಸಿದ್ದಾರೆ.

ಪೊಲೀಸರ ಪ್ರಕಾರ, ಇಂದು ಬೆಳಿಗ್ಗೆ ಗುಜರಾತ್‌ ನ ವಡೋದರಾ ಜಿಲ್ಲೆಯಲ್ಲಿ ಸೇತುವೆಯ ಒಂದು ಭಾಗ ಕುಸಿದ ನಂತರ ಎರಡು ಟ್ರಕ್‌ಗಳು ಮತ್ತು ಎರಡು ವ್ಯಾನ್‌ಗಳು ನದಿಗೆ ಉರುಳಿ ಬಿದ್ದವು, ನಾಲ್ವರನ್ನು ರಕ್ಷಿಸಿದ್ದೇವೆ ಎಂದು ಪದ್ರಾ ಪೊಲೀಸ್ ಇನ್ಸ್ ಪೆಕ್ಟರ್ ವಿಜಯ್ ಚರಣ್ ತಿಳಿಸಿದ್ದಾರೆ.

ನದಿಯಲ್ಲಿ ಇನ್ನೂ ಕಾರ್ಯಾಚರಣೆ ಮುಂದುವರೆದಿದೆ.

ಈ ಸೇತುವೆ ವಡೋದರಾ ಮತ್ತು ಆನಂದ್ ಜಿಲ್ಲೆಗಳನ್ನು ಸಂಪರ್ಕಿಸುತ್ತಿದ್ದು, ಇದರ ಕುಸಿತದಿಂದ ಪ್ರಮುಖ ರಸ್ತೆ ಸಂಪರ್ಕಕ್ಕೆ ಅಡ್ಡಿ ಉಂಟಾಗಿದೆ. ವಾಹನ ಸಂಚಾರ ಸ್ಥಗಿತಗೊಂಡಿದ್ದು, ಪ್ರದೇಶದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಸರ್ಕಾರಿ ತಂಡಗಳು ತಕ್ಷಣ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿವೆ.

RELATED ARTICLES
- Advertisment -
Google search engine

Most Popular