ಕಾಂಗ್ರೆಸ್ ನೇತೃತ್ವದ ಸಿದ್ದರಾಮಯ್ಯ ಸರ್ಕಾರ ಹೈಕೋರ್ಟ್‌ಗಳಿಂದ ನಿರಂತರವಾಗಿ ಛೀಮಾರಿ ಪಡೆಯುತ್ತಿರುವುದು ಸರ್ಕಾರದ ನಿರ್ಧಾರಗಳ ಅನ್ಯಾಯದ ನಡೆಗಳಿಗೆ ನಿದರ್ಶನ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತಿಳಿಸಿದ್ದಾರೆ.
ಹುಬ್ಬಳ್ಳಿ ಗಲಭೆ ಪ್ರಕರಣದ ಆರೋಪಿಗಳ ಮೇಲೆ ಕೇಸ್ ವಾಪಸ್ ಪಡೆಯಲು ಸರ್ಕಾರ ಮಾಡುತ್ತಿದ್ದ ಯತ್ನಕ್ಕೆ, ಹಾಗೂ ಚಾಮರಾಜಪೇಟೆಯಲ್ಲಿ ಪಶು ಚಿಕಿತ್ಸಾಲಯವನ್ನು ಅಲ್ಪಸಂಖ್ಯಾತರ ಇಲಾಖೆಗೆ ಹಸ್ತಾಂತರಿಸಲು ತೆಗೆದುಕೊಂಡ ನಿರ್ಧಾರಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದ ಕುರಿತು ಅವರು ಎಕ್ಸ್‌ನಲ್ಲಿ (ಹಳೆಯ ಟ್ವಿಟ್ಟರ್) ಪೋಸ್ಟ್ ಮಾಡಿದ್ದಾರೆ.
ಜನಔಷಧಿ ಕೇಂದ್ರಗಳ ಮುಚ್ಚುವ ನಿರ್ಧಾರವನ್ನೂ ಹೈಕೋರ್ಟ್ ತಿರಸ್ಕರಿಸಿ, ಸರ್ಕಾರಕ್ಕೆ ಮತ್ತೆ ಛೀಮಾರಿ ಹಾಕಿದೆ ಎಂದು ಅವರು ಹೇಳಿದರು. ವಾಲ್ಮೀಕಿ ನಿಗಮದ ಭ್ರಷ್ಟಾಚಾರ ಪ್ರಕರಣದಲ್ಲಿ ಇ.ಡಿ ಅಧಿಕಾರಿಗಳ ವಿರುದ್ಧ ಸುಳ್ಳು FIR ದಾಖಲಾಗಿಸಿದ್ದನ್ನು ಹೈಕೋರ್ಟ್ ತಿರಸ್ಕರಿಸಿತ್ತು.
ಬಿಡಿಎ ಸಂಸ್ಥೆಯ ಅವ್ಯವಸ್ಥೆ, ವಿಫಲ ಆಡಳಿತದ ಬಗ್ಗೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿ “ಒಮ್ಮೆ ಮಾರುವೇಷದಲ್ಲಿ ನೋಡಿ ಬನ್ನಿ” ಎಂದು ವ್ಯಂಗ್ಯವಾಡಿತ್ತು.
ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ ಹಕ್ಕುಗಳಿಗೆ ವಿಧವಾಗಿದ್ದ ಅನ್ಯಾಯದ ಬಗ್ಗೆ ಕೋರ್ಟ್ ಸ್ವಯಂಪ್ರೇರಿತವಾಗಿ ನೋಟಿಸ್ ನೀಡಿ ಛೀಮಾರಿ ಹಾಕಿತ್ತು.
ಇವೆಲ್ಲವೂ ಸಿದ್ದರಾಮಯ್ಯ ಸರ್ಕಾರದ ಜನವಿರೋಧಿ, ನಿರಂಕುಶ ರಾಜಕಾರಣದ ಪ್ರತೀಕ ಎಂದು ಆರ್. ಅಶೋಕ್ ಆರೋಪಿಸಿದ್ದಾರೆ.