ಬೆಳಗಾವಿ: ಒಂದೇ ಕುಟುಂಬದ ತಾಯಿ, ಮಗ, ಮಗಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಓರ್ವ ಮಹಿಳೆಯ ಸ್ಥಿತಿ ಚಿಂತಾಜನಕವಾದ ಘಟನೆ ಜು.9ರ ಬುಧವಾರ ನಗರದ ಘಟನೆ ಜೋಶಿ ಮಾಳ ಎಂಬಲ್ಲಿ ನಡೆದಿದೆ.
ಜೋಶಿ ಮಾಳ ನಿವಾಸಿಗಳಾದ ಸಂತೋಷ ಗಣಪತಿ ಕುರಡೇಕರ(44), ಸುವರ್ಣ ಕುರಡೇಕರ, ಮಂಗಳಾ ಕುರಡೇಕರ ಆತ್ಮಹತ್ಯೆ ಮಾಡಿಕೊಂಡವರು. ಸುನಂದಾ ಕುರಡೇಕರ ಎಂಬವರ ಸ್ಥಿತಿ ಚಿಂತಾಜನಂಕವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಾಲದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಡೆತ್ ನೋಟ್ ಬರೆದಿಟ್ಟಿದ್ದಾರೆ.
ತಾಯಿ, ಮಗ, ಮಗಳು ಸಾವನ್ನಪ್ಪಿದ್ದು, ಓರ್ವ ಮಗಳ ಸ್ಥಿತಿ ಗಂಭೀರವಾಗಿದೆ. ಬೆಳಗ್ಗೆ 9 ಗಂಟೆಗೆ ವಿಷ ಸೇವಿಸಿರುವ ಕುಟುಂಬಸ್ಥರು, ಗಂಭೀರವಾಗಿರುವ ಮಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸ್ ಕಮಿಷನರ್ ಭೂಷನ್ ಗುಲಾಬರಾವ್ ಬೊರಸೆ ಭೇಟಿ ನೀಡಿ ಪರಿಶೀಲನೆ ನಡೆಸಿದರು .