ಬೆಂಗಳೂರು: ಬೆಂಗಳೂರು ಬೊಮ್ಮನಹಳ್ಳಿಯಲ್ಲಿ ಗಂಡ ಹೆಂಡತಿ ಜಗಳ ಕ್ರೂರ ಕೊಲೆಯಲ್ಲಿ ಅಂತ್ಯಗೊಂಡಿರುವ ದುರ್ಘಟನೆ ನಡೆದಿದೆ. ಶ್ರೀನಿವಾಸಪುರ ಮೂಲದ ಪದ್ಮಜಾ (29) ಎಂಬ ಯುವತಿಯನ್ನು ಪತಿ ಹರೀಶ್ ಭೀಕರವಾಗಿ ಹತ್ಯೆ ಮಾಡಿದ ಆರೋಪ ಎದುರಿಸುತ್ತಿದ್ದಾನೆ. ಇಬ್ಬರೂ ಬಿಇ ಪದವೀಧರರಾಗಿದ್ದು, ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದರು. ಆದರೆ, ಹರೀಶ್ ಇತ್ತೀಚೆಗೆ ಕೆಲಸ ಬಿಟ್ಟಿದ್ದ ಹಾಗು ತೀವ್ರ ಮಾನಸಿಕ ಒತ್ತಡದಲ್ಲಿದ್ದ ಎನ್ನಲಾಗಿದೆ.
ಜುಲೈ 7ರಂದು ಪತ್ನಿ ಶಾಪಿಂಗ್ ಹೋಗಿದ್ದ ವಿಚಾರವಾಗಿ ಆರಂಭವಾದ ಜಗಳ, ಕೊನೆಯದಾಗಿ ಹತ್ಯೆಯಾಗಿ ಮಾರ್ಪಟ್ಟಿತು. ಗಲಾಟೆಯಲ್ಲಿ ಹರೀಶ್ ಪತ್ನಿಯ ಕುತ್ತಿಗೆ ಹಿಸುಕಿ, ನಂತರ ನೆಲಕ್ಕೆ ಬೀಳಿಸಿ ಕಾಲಿನಿಂದ ತುಳಿದು ಪದ್ಮಜಾ ಹತ್ಯೆ ಮಾಡಿದ. ಬಳಿಕ ಪತ್ನಿ ಸಹಜವಾಗಿ ಮೃತಪಟ್ಟಂತೆ ನಟನೆ ಮಾಡಿದ.
ಆದರೆ ಮಗಳು ಈ ದಾರುಣ ಘಟನೆ ನೋಡಿದ್ದರಿಂದ, ವಿಚಾರಣೆ ವೇಳೆ ಆಕೆಯ ಹೇಳಿಕೆಯಿಂದ ಪತಿ ಮೇಲೆ ಅನುಮಾನ ಬಿದ್ದು, ಹರೀಶ್ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಬೊಮ್ಮನಹಳ್ಳಿ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.