Thursday, July 10, 2025
Google search engine

Homeರಾಜ್ಯಸುದ್ದಿಜಾಲಮುಷ್ಕರಕ್ಕೆ ಮಂಗಳೂರು ಕಾರ್ಮಿಕರಿಂದ ಭಾರೀ ಬೆಂಬಲ: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗೆ ತೀವ್ರ ಆಕ್ರೋಶ

ಮುಷ್ಕರಕ್ಕೆ ಮಂಗಳೂರು ಕಾರ್ಮಿಕರಿಂದ ಭಾರೀ ಬೆಂಬಲ: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗೆ ತೀವ್ರ ಆಕ್ರೋಶ

ಮಂಗಳೂರು (ದಕ್ಷಿಣ ಕನ್ನಡ): ಕಾರ್ಮಿಕ ವರ್ಗದ ಪ್ರಮುಖ 29 ಕಾನೂನುಗಳನ್ನು 4 ಸಂಹಿತೆಗಳನ್ನಾಗಿ ರೂಪಿಸಿದ ಕೇಂದ್ರ ಸರ್ಕಾರದ ಕಾರ್ಪೊರೇಟ್ ಪರ, ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ದೇಶಾದ್ಯಂತ ನಡೆದ ಮಹಾಮುಷ್ಕರ ಮಂಗಳೂರಿನಲ್ಲಿಯೂ ಅತ್ಯಂತ ಯಶಸ್ವಿಯಾಗಿ ನಡೆದಿದೆ. ಎಲ್ಲಾ ವಿಭಾಗದ ಕಾರ್ಮಿಕರು, ಮಾಧ್ಯಮ ವರ್ಗದ ನೌಕರರು ಮುಷ್ಕರದಲ್ಲಿ ಪಾಲ್ಗೊಂಡಿದ್ದು, ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಅಂಬೇಡ್ಕರ್ ವೃತ್ತದಿಂದ ಸಾವಿರಕ್ಕೂ ಮಿಕ್ಕಿದ ಕಾರ್ಮಿಕರು, ನೌಕರರು ಕೇಂದ್ರ ಸರ್ಕಾರದ ಆಕ್ರಮಣಕಾರಿ ನೀತಿಗಳ ವಿರುದ್ಧ ತೀವ್ರ ಆಕ್ರೋಶಭರಿತರಾಗಿ ಘೋಷಣೆಗಳನ್ನು ಕೂಗುತ್ತಾ ಸಾಗಿದರು.ಬಳಿಕ ಕ್ಲಾಕ್ ಟವರ್ ಬಳಿಯಲ್ಲಿ ಪ್ರತಿಭಟನಾ ಸಭೆಯನ್ನು ನಡೆಸಲಾಯಿತು. ಸಭೆಯನ್ನು ಉದ್ಘಾಟಿಸಿ ಮಾತನಾಡಿದ CITU ಜಿಲ್ಲಾ ಪ್ರದಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು, ಕೇಂದ್ರ ದಲ್ಲಿ ಕಳೆದ 11 ವರ್ಷಗಳಿಂದ ಅಧಿಕಾರದಲ್ಲಿರುವ ನರೇಂದ್ರ ಮೋದಿ ನೇತ್ರತ್ವದ ಸರಕಾರ ನಿತ್ಯ ನಿರಂತರವಾಗಿ ಕಾರ್ಪೊರೇಟ್ ಕಂಪೆನಿಗಳ ಹಿತಾಸಕ್ತಿಗಳನ್ನು ಕಾಪಾಡುತ್ತಿದೆಯೇ ಹೊರತು ಈ ದೇಶದ ಕಾರ್ಮಿಕ ವರ್ಗ, ರೈತಾಪಿ ಜನತೆ ಜನಸಾಮಾನ್ಯರದ್ದಲ್ಲ. ದೇಶದ ಆರ್ಥಿಕತೆಗೆ ಅತ್ಯಂತ ದೊಡ್ಡ ಶಕ್ತಿ ನೀಡುವ ಕಾರ್ಮಿಕ ವರ್ಗವನ್ನು ತೀರಾ ನಗಣ್ಯವನ್ನಾಗಿಸಿ,ಕಾರ್ಮಿಕ ಕಾನೂನುಗಳನ್ನು ನಿಷ್ಕ್ರಿಯಗೊಳಿಸಿ ಇಡೀ ಕಾರ್ಮಿಕ ವರ್ಗವನ್ನು ಮತ್ತೆ ಜೀತದಾಳುಗಳನ್ನಾಗಿಸುವ ಹುನ್ನಾರ ನಡೆಯುತ್ತಿದೆ. ಕೆಲಸದ ಅವಧಿಯನ್ನು ಹೆಚ್ಚಿಸುವ ಮೂಲಕ ಮಾಲಕ ವರ್ಗದ ಬಂಡವಾಳವನ್ನು ಹೆಚ್ಚಿಸಲು ಕೇಂದ್ರ ಸರಕಾರ ಕಟಿಬದ್ದವಾಗಿದೆ.ಇಂತಹ ಆಳುವ ವರ್ಗಗಳ ವಿರುದ್ದ ಧೀರೋದತ್ತವಾದ ಸಮರವನ್ನು ಹೂಡಲು ದೇಶದ ಕಾರ್ಮಿಕ ವರ್ಗ ಒಂದಾಗಿ ಮಹಾಮುಷ್ಕರಕ್ಕೆ ಕರೆ ನೀಡಿದ್ದು,ಅತ್ಯಂತ ಯಶಸ್ವಿಯಾಗಿರುವುದು ಮಾತ್ರವಲ್ಲದೆ 25 ಕೋಟಿಗೂ ಮಿಕ್ಕಿ ಕಾರ್ಮಿಕರು ಭಾಗವಹಿಸಿರುವುದು ದೇಶದ ಚರಿತ್ರೆಯಲ್ಲೇ ಮಹತ್ವಪೂರ್ಣ ದಾಖಲೆಯಾಗಿದೆ ಎಂದು ಹೇಳಿದರು.

AITUC ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೀತಾರಾಮ ಬೇರಿಂಜರವರು ಮಾತನಾಡಿ, ದೇಶದ ಸಂಪತ್ತನ್ನು ಸ್ರಷ್ಠಿಸುವ ಕಾರ್ಮಿಕರನ್ನು ಅತ್ಯಂತ ಕೀಳಾಗಿ ಕಾಣುವ ಸಮಾಜ ಯಾವತ್ತೂ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಅಂತಹ ಕಾರ್ಮಿಕ ವರ್ಗದ ಶ್ರಮವನ್ನು ಅರ್ಥೈಸಿ,ಶ್ರಮಕ್ಕೆ ತಕ್ಕ ಪ್ರತಿಫಲವನ್ನೂ,ಎಲ್ಲಾ ಸಾಮಾಜಿಕ ಭದ್ರತೆಗಳನ್ನೂ, ನಿವ್ರತ್ತಿಯ ಬಳಿಕ ಯೋಗ್ಯವಾದ ಪಿಂಚಣಿಯನ್ನು ನೀಡಲು ಕೇಂದ್ರ ಸರ್ಕಾರ ಮುಂದಾಗಬೇಕಾಗಿದೆ ಎಂದು ಹೇಳಿದರು.

ಬ್ಯಾಂಕ್ ನೌಕರರ ಸಂಘಟನೆಯ ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿ ಫಣೀಂದ್ರ ಕೆ ಯವರು ಮಾತನಾಡುತ್ತಾ, ದೇಶದ ಬ್ಯಾಂಕ್ ವಿಮೆ ಸೇರಿದಂತೆ ಎಲ್ಲಾ ಆರ್ಥಿಕ ರಂಗಗಳನ್ನು ವಿಲೀನಕರಣ, ಖಾಸಗೀಕರಣಗೊಳಿಸುವ ಮೂಲಕ ದೇಶದ ಆರ್ಥಿಕತೆಯನ್ನೇ ನಾಶ ಮಾಡಲು ಕೇಂದ್ರ ಸರಕಾರ ಹೊರಟಿದೆ.ಜನಸಾಮಾನ್ಯರ ಬದುಕು ಹಾಗೂ ದೇಶದ ಅಭಿವೃದ್ಧಿಯಲ್ಲಿ ಆರ್ಥಿಕ ಕ್ಷೇತ್ರವೇ ಪ್ರಮುಖವಾಗಿದೆ. ಅಂತಹ ಕ್ಷೇತ್ರವನ್ನೇ ನಾಶ ಮಾಡಿ ದೇಶದ ಅಭಿವೃದ್ಧಿ ನಡೆಸುವುದಾದರೂ ಹೇಗೆ….? ಎಂದು ಪ್ರಶ್ನಿಸಿದರು.

ಸಬೆಯನ್ನುದ್ದೇಶಿಸಿ CITU ಜಿಲ್ಲಾ ನಾಯಕರಾದ ವಸಂತ ಆಚಾರಿ,ಜೆ ಬಾಲಕ್ರಷ್ಣ ಶೆಟ್ಟಿ, ರೈತ ನಾಯಕರಾದ ಕೆ ಯಾದವ ಶೆಟ್ಟಿ, ಸನ್ನಿ ಡಿಸೋಜ, ಬ್ಯಾಂಕ್ ಅಧಿಕಾರಿಗಳ ಸಂಘಟನೆಯ ವಿನ್ಸೆಂಟ್ ಡಿಸೋಜ,ಬ್ಯಾಂಕ್ ನೌಕರರ ಸಂಘಟನೆಯ ಸುನಿಲ್ ಪದಕಣ್ಣಾಯ, ವಿಮಾ ಪ್ರತಿನಿಧಿಗಳ ಸಂಘಟನೆಯ ಲೋಕೇಶ್ ಶೆಟ್ಟಿ ಮುಂತಾದವರು ಮಾತನಾಡಿದರು.

ಹೋರಾಟವನ್ನು ಬೆಂಬಲಿಸಿ ಯುವಜನ ಸಂಘಟನೆಯ ಮುಖಂಡರಾದ ಬಿ ಕೆ ಇಮ್ತಿಯಾಜ್, ಸಂತೋಷ್ ಬಜಾಲ್,ನಿತಿನ್ ಕುತ್ತಾರ್, ರಿಜ್ವಾನ್ ಹರೇಕಳ,ನವೀನ್ ಕೊಂಚಾಡಿ,ತಯ್ಯುಬ್ ಬೆಂಗರೆ, ರಜಾಕ್ ಮುಡಿಪು, ಮಹಿಳಾ ಮುಖಂಡರಾದ ಜಯಂತಿ ಶೆಟ್ಟಿ, ಭಾರತಿ ಬೋಳಾರ, ಅಸುಂತ ಡಿಸೋಜ, ಪ್ರಮೀಳಾ ಶಕ್ತಿನಗರ,ಸಮಿತಾ ಬಿಸಿರೋಡ್, ಮಮತಾ, ಆದಿವಾಸಿ ಸಂಘಟನೆಯ ಕರಿಯಾ ಕೆ,ರಶ್ಮಿ ವಾಮಂಜೂರು, ತುಳಸಿ ಬೆಳ್ಮಣ್ಣು ಹಾಗೂ ಅಪಾರ ಸಂಖ್ಯೆಯ ಕಾರ್ಯಕರ್ತರು ಭಾಗವಹಿಸಿದ್ದರು.

ಪ್ರತಿಭಟನೆಯಲ್ಲಿ ಬ್ಯಾಂಕ್ ನೌಕರರ ಸಂಘಟನೆಯ ನಾಯಕರಾದ ಗಿರೀಶ್,ಬಿ ಎಂ ಮಾಧವ,ಪುರುಷೋತ್ತಮ ಪೂಜಾರಿ, CITU ಮುಖಂಡರಾದ ಯೋಗೀಶ್ ಜಪ್ಪಿನಮೊಗರು, ಸುಕುಮಾರ್ ತೊಕ್ಕೋಟು,ವಸಂತಿ ಕುಪ್ಪೆಪದವು,ನೋಣಯ್ಯ ಗೌಡ,ಯಶೋಧ ಮಳಲಿ, ಪದ್ಮಾವತಿ ಶೆಟ್ಟಿ, ಸುಂದರ ಕುಂಪಲ,ರವಿಚಂದ್ರ ಕೊಂಚಾಡಿ,ಜನಾರ್ದನ ಕುತ್ತಾರ್,ಭವ್ಯಾ ಮುಚ್ಚೂರು, ಬಿಜು ಆಗಸ್ಟಿನ್,ವಿಶ್ವನಾಥ ಬಂಗಾರಡ್ಕ,ರೋಹಿದಾಸ್, ರಫೀಕ್ ಹರೇಕಳ AITUC ನಾಯಕರಾದ ಎಚ್ ವಿ ರಾವ್,ಬಿ ಶೇಖರ್,ಸುರೇಶ್ ಕುಮಾರ್, ಕರುಣಾಕರ್ ಮಾರಿಪಳ್ಳ,ವಿ ಕುಕ್ಯಾನ್, ಪ್ರವೀಣ್ ಕುಮಾರ್, ಜಯಸಿಂಹ, ರೈತ ನಾಯಕರಾದ ಕ್ರಷ್ಣಪ್ಪ ಸಾಲ್ಯಾನ್, ಶೇಖರ್ ಕುಂದರ್, ಸದಾಶಿವದಾಸ್,ವಿವಿಧ ಸಂಘಟನೆಗಳ ಮುಖಂಡರಾದ ಸದಾನಂದ,ಜೀವನ್ ಲೋಬೋ,ಎಂ ಎಸ್ ಭಟ್, ಜನಾರ್ಧನ ಪೆರಾಜೆ, ಸೋಮಶೇಖರ್, ಪುಷ್ಪರಾಜ್ ಬೋಳೂರು,ಜಗತ್ಪಾಲ್, ಕ್ರಷ್ಣಪ್ಪ,ಫಾರೂಕ್,ಮಜೀದ್,ಮುಝಾಫರ್ ಅಹಮದ್, ಸಂತೋಷ್ ಆರ್ ಎಸ್,ವಿನಾಯಕ ಶೆಣೈ, ವಿಜಯ, ಕಲಂದರ್, ಅಹಮದ್ ಭಾವ,ಅನ್ಸಾರ್ ಫೈಸಲ್ ನಗರ ಮುಂತಾದವರು ಭಾಗವಹಿಸಿದ್ದರು.

ಪ್ರಾರಂಭದಲ್ಲಿ CITU ನಾಯಕರಾದ ಯೋಗೀಶ್ ಜಪ್ಪಿನಮೊಗರು ರವರು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರೆ,ಕೊನೆಯಲ್ಲಿ AITUC ಮುಖಂಡರಾದ ಕರುಣಾಕರ್ ಮಾರಿಪಳ್ಳರವರು ವಂದಿಸಿದರು.

RELATED ARTICLES
- Advertisment -
Google search engine

Most Popular