ವರದಿ: ಎಡತೊರೆ ಮಹೇಶ್
ಎಚ್.ಡಿ.ಕೋಟೆ : ಕಳೆದ ಐದಾರು ವರ್ಷಗಳ ಅವಧಿಯಲ್ಲಿ ತಾಲ್ಲೂಕಿನಲ್ಲಿ ಕೇವಲ 100 ಮಂದಿಗೆ ಮಾತ್ರ ಸಾಗುವಾಳಿಯನ್ನು ನೀಡಲಾಗಿದ್ದು, ಅರ್ಜಿ ಸಲ್ಲಿಸಿರುವ ಸಂಖ್ಯೆಗೆ ತುಂಬಾ ಕಡಿಮೆ ಪ್ರಮಾಣದ್ದಾಗಿದೆ ಎಂದು ಕರ್ನಾಟಕ ಭೂಹಕ್ಕುದಾರರ ವೇದಿಕೆಯ ಜೀವಿಕಾ ಸಂಚಾಲಕ ಬಸವರಾಜು ತಿಳಿಸಿದರು.
ಪಟ್ಟಣದ ಪತ್ರಕರ್ತರ ಸಂಘದ ಆವರಣದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಎಚ್.ಡಿ. ಕೋಟೆ ತಾಲ್ಲೂಕಿನಲ್ಲಿ 11616 ಕ್ಕೂ ಹೆಚ್ಚಿ ಅರ್ಜಿಗಳು ಭೂ ಹಿಡುವಳಿಗಾಗಿ ಅರ್ಜಿ ಸಲ್ಲಿಸಲಾಗಿದೆ, ಹಲವು ಮಂದಿ ರೈತರು ಕಿಮ್ಮತ್ತನ್ನೂ ಸಹ ಕಟ್ಟಲಾಗಿದೆ, ಆದರೆ ಇದುವರೆಗೂ ಸಹ ಭೂ ಹಕ್ಕನ್ನು ನೀಡಿಲ್ಲ ಎಂದು ಬೇಸರಿಸಿದರು.
ಎರಡು ಮೂರು ತಲೆಮಾರುಗಳಿಂದ ಉಳುಮೆ ಮಾಡುತ್ತಿರುವ ರೈತರಿಗೆ ಇದುವರೆಗೂ ಅದರ ಮಾಲೀಕನಾಗಲು ಸಾಧ್ಯವಾಗುತ್ತಿಲ್ಲ, ಇದರಿಂದ ರೈತ ಜಮೀನುಗಳ ಮೂಲಕ ದೊರೆಯುವ ಫಲವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ, ರಿಯಾಯಿತಿ ದರದಲ್ಲಿ ಗೊಬ್ಬರ, ಬಿತ್ತನೆ ಬೀಜ, ಬೆಳೆ ಹಾನಿಯಾದರೆ ಪರಿಹಾರವಾಗಲಿ ಮತ್ತು ಬ್ಯಾಂಕ್ ಗಳಲ್ಲಿ ಸಾಲ ಸೌಲಭ್ಯ ದೊರೆಯುತ್ತಿಲ್ಲ ಎಂದರು.
ರೈತ ಸಂಘದ ಅಧ್ಯಕ್ಷ ಮಹದೇವನಾಯಕ, ಜಿಲ್ಲಾ, ಮಚ್ಚರೆ ನಾಗೇಗೌಡ, ಬ್ಯಾಟರಾಯಸ್ವಾಮಿ, ಚಿಕ್ಕಬೋರೆಗೌಡ, ಶಿವರಾಜು, ಮರ್ಷಲಿನ್, ಸುಶೀಲ, ಶಿವಕುಮಾರ್, ಸಿದ್ದರಾಮೇಗೌಡ, ರಾಜು, ಗೋಪಾಲರಾಜು ಇದ್ದರು.