ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಸಾಲಿಗ್ರಾಮ ತಾಲೂಕಿನ ಹೊಸೂರು ಕೃಷಿಪತ್ತಿನಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಜೆಡಿಎಸ್ ನ ಹಳಿಯೂರು ಎಚ್.ಎಸ್.ಜಗದೀಶ್ ಮತ್ತು ಉಪಾಧ್ಯಕ್ಷರಾಗಿ ದೊಡ್ಡಕೊಪ್ಪಲು ಸಿ.ಎಂ.ರಾಜೇಗೌಡ (ಕಂಡಕ್ಟರ್) ಅವಿರೋಧವಾಗಿ ಆಯ್ಕೆಯಾದರು.
ಗುರುವಾರ ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಎಚ್.ಎಸ್.ಜಗದೀಶ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ರಾಜೇಗೌಡ ಅವರನ್ನು ಹೊರತು ಪಡಿಸಿ ಬೇರೆಯಾರು ನಾಮಪತ್ರ ಸಲ್ಲಿಸದ ಕಾರಣ ಇವರುಗಳು ಅವಿರೋಧವಾಗಿ ಆಯ್ಕೆಯಾದರು.

ಹಾಲಿ ಅಧ್ಯಕ್ಷ ಎಚ್.ಆರ್.ಕೃಷ್ಣಮೂರ್ತಿ ಮತ್ತು ಉಪಾಧ್ಯಕ್ಷರಾಗಿದ್ದ ಕೆಂಪನಾಯಕ ಅವರ ರಾಜೀನಾಮೆ ಯಿಂದ ತೆರವಾದ ಸ್ಥಾನಕ್ಕೆ ಈ ಚುನಾವಣೆ ನಿಗದಿಯಾಗಿತ್ತು ಚುನಾವಾಣಾಧಿಕಾರಿಯಾಗಿ ಸಹಕಾರ ಇಲಾಖೆಯ ಸಿಡಿಓ ಎಸ್.ರವಿ ಕಾರ್ಯನಿರ್ವಹಿಸಿದರು.
ನಂತರ ಮಾತನಾಡಿದ ನೂತನ ಅಧ್ಯಕ್ಷ ಎಚ್.ಎಸ್.ಜಗದೀಶ್ ಮಾತನಾಡಿ ಸಂಘದ ವತಿಯಿಂದ ಹೊಸ ಸದಸ್ಯರಿಗೆ ಸಾಲಕೊಡಿಸುವುದು ಸಂಘದ ಕಟ್ಟಡ ನವೀಕರಣ, ಹೆಚ್ಚಿನ ರೀತಿಯಲ್ಲಿ ಐಪಿ ಸೆಟ್ , ಟ್ಯಾಕ್ಟರ್ ಮತ್ತು ವಾಹನ ಸಾಲ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಫಲಿತಾಂಶ ಪ್ರಕಟಿಸುತ್ತಿದ್ದಂತೆಯೇ ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಉದ್ಯಮಿ ಎಚ್.ಕೆ.ಮಧುಚಂದ್ರ
ಸಂಘದ ಮಾಜಿ ಅಧ್ಯಕ್ಷ ಎಸ್.ಟಿ.ಕೀರ್ತಿ, ಒಕ್ಕಲಿಗರ ಸಂಘದ ಉಪಾಧ್ಯಕ್ಷ ಎ.ಕುಚೇಲ್, ಎಪಿಎಂಸಿ ಮಾಜಿ ನಿರ್ದೇಶಕ ಶಿವಸ್ವಾಮಿ ಕೃಷಿಕ ಸಮಾಜದ ನಿರ್ದೇಶಕ ಡಿ.ಸಿ.ರಾಮೇಗೌಡ, ನಿವೃತ್ತ ಶಿಕ್ಷಕ ಪುರುಷೋತ್ತಮ್, ಆಶ್ರಯ ಸಮಿತಿ ಮಾಜಿ ಸದಸ್ಯ ಬಿ.ರಮೇಶ್ , ಗ್ರಾ.ಪಂ.ಸದಸ್ಯರಾದ ಕಾಂಚನಾಜಯ್ ,ಮಲ್ಲೇಶಚಾರಿ, ಸಿ.ಬಿ.ಧರ್ಮ, ಮುಖಂಡರಾದ ಸಿ.ಬಿ.ಲೋಕೇಶ್ ಎಚ್.ಎನ್.ಶಿವಣ್ಣ, ಎಚ್.ಅರ್ ರಾಘವೇಂದ್ರ , ಎಚ್.ಡಿ.ಭಾಸ್ಕರ್, ಪೇಪರ್ ಪ್ರಮೋದ್, ಗಡಿಯಕಾಂತಣ್ಣ, ಉಮೇಶ್, ರಾಮಚಾರಿ ಸುರೇಶ್, ಗ್ಯಾರಂಟಿ ಗೋಪಾಲ್, ಎಚ್.ಜಿ.ರಾಮೇಗೌಡ,ಬ್ಯಾಂಕ್ ಮಹೇಶ್, ಹೋರಿ ವಸಂತ್ ಸೇರಿದಂತೆ ಮತ್ತಿತರು ಅಭಿನಂದಿಸಿದರು.
ಚುನಾವಣಾ ಸಭೆಯಲ್ಲಿ ಸಂಘದ ನಿರ್ದೇಶಕರಾದ ಎಚ್.ಆರ್.ಕೃಷ್ಣಮೂರ್ತಿ, ಎಚ್.ಎನ್.ರಮೇಶ್, ಎಸ್.ಆರ್.ವಿವೇಕನಂದ, ಎಚ್.ಬಿ.ನವೀನ, ಎಸ್.ಬಿ.ಹುಚ್ಚೇಗೌಡ, ಕಮಲಮ್ಮ , ಕಲ್ಯಾಣಮ್ಮ ಪಾರ್ಥಯ್ಯ, ಕೆಂಪನಾಯಕ, ಜಿಲ್ಲಾ ಸಹಕಾರ ಸಂಘದ ಮೇಲ್ವಿಚಾರಕ ಮೂಡಲಕೊಪ್ಪಲು ದಿನೇಶ್, ಸಂಘದ ಸಿಇಓ ಚಂದ್ರಕಲಾ ಪಾಪೇಗೌಡ ಸೇರಿದಂತೆ ಮತ್ತಿತರರು ಹಾಜರಿದ್ದರು.