Friday, July 18, 2025
Google search engine

HomeUncategorizedರಾಷ್ಟ್ರೀಯಮನೆಗಳಿಗೆ ಮಾಸಿಕ 125 ಯುನಿಟ್ ಉಚಿತ ವಿದ್ಯುತ್: ಸಿಎಂ ನಿತೀಶ್‌ ಕುಮಾರ್ ಘೋಷಣೆ

ಮನೆಗಳಿಗೆ ಮಾಸಿಕ 125 ಯುನಿಟ್ ಉಚಿತ ವಿದ್ಯುತ್: ಸಿಎಂ ನಿತೀಶ್‌ ಕುಮಾರ್ ಘೋಷಣೆ

ಪಾಟ್ನಾ: ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಹಾರದಲ್ಲಿ ಎಲ್ಲಾ ಗೃಹಬಳಕೆದಾರರಿಗೆ ಮಾಸಿಕ 125 ಯುನಿಟ್‌ ಗಳವರೆಗೆ ಉಚಿತ ವಿದ್ಯುತ್‌ ನೀಡುವುದಾಗಿ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಇಂದು ಘೋಷಿಸಿದ್ದಾರೆ.

ಈ ಕುರಿತು ಎಕ್ಸ್‌ ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಈ ಯೋಜನೆಯಿಂದ 1.67 ಕೋಟಿ ಮನೆಗಳಿಗೆ ಸಹಾಯವಾಗಲಿದೆ. ಆಗಸ್ಟ್‌ 1ರಿಂದ ಈ ಯೋಜನೆ ಜಾರಿಗೆ ಬರಲಿದೆ. ಅಂದರೆ ಜುಲೈ ತಿಂಗಳಲ್ಲಿ ಬಳಕೆ ಮಾಡಿದ ವಿದ್ಯುತ್‌ಗೆ 125 ಯುನಿಟ್‌ ವರೆಗೂ ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದು ತಿಳಿಸಿದ್ದಾರೆ.

ನಾವು ಈಗಾಗಲೇ ಅಗ್ಗದ ವಿದ್ಯುತ್‌ ಅನ್ನು ಜನರಿಗೆ ಪೂರೈಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಬಿಹಾರದಲ್ಲಿ ಸೌರಶಕ್ತಿಯನ್ನು ಉತ್ತೇಜಿಸುವ ಮೂಲಕ, ಮುಂದಿನ ಮೂರು ವರ್ಷಗಳಲ್ಲಿ ಪರ್ಯಾಯ ಇಂಧನ ಮೂಲಗಳ ಮೂಲಕ ರಾಜ್ಯದಲ್ಲಿ ಅಂದಾಜು 10,000 ಮೆಗಾವ್ಯಾಟ್ ವಿದ್ಯುತ್‌ ಉತ್ಪಾದಿಸಲಾಗುವುದು ಎಂದು ಮಾಹಿತಿ ಹಂಚಿಕೊಂಡಿದ್ದಾರೆ. 

‘ಕುಟೀರ ಜ್ಯೋತಿ ಯೋಜನೆ’ ಕುರಿತು ಹೇಳಿರುವ ಅವರು, ಇದು ಸಂಪೂರ್ಣವಾಗಿ ರಾಜ್ಯದ ಅನುದಾನಿತ ಯೋಜನೆಯಾಗಿದ್ದು, ಇದರಡಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಬಡ ಜನರ ಮನೆಗಳ ಮೇಲ್ಛಾವಣಿಗಳಲ್ಲಿ ಅವರ ಒಪ್ಪಿಗೆಯೊಂದಿಗೆ ಸೌರ ಫಲಕಗಳನ್ನು ಅಳವಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಇತ್ತೀಚೆಗೆ ಆರ್‌ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ಅವರು ‘200 ಯುನಿಟ್‌ವರೆಗೆ ಉಚಿತ ವಿದ್ಯುತ್‌’ ನೀಡುವುದಾಗಿ ಭರವಸೆ ನೀಡಿದ್ದರು.

RELATED ARTICLES
- Advertisment -
Google search engine

Most Popular