ನವದೆಹಲಿ: ನಟ ದರ್ಶನ್ ಸೇರಿ ಆರು ಮಂದಿ ಆರೋಪಿಗಳಿಗೆ ನೀಡಿದ್ದ ಜಾಮೀನು ರದ್ದುಗೊಳಿಸಲು ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ಜುಲೈ 22ಕ್ಕೆ ಮುಂದೂಡಿದೆ.
ವಿಚಾರಣೆಯ ವೇಳೆ, ದರ್ಶನ್ ಜಾಮೀನು ಏಕೆ ರದ್ದು ಮಾಡಬಾರದು? ಎಂದು ನ್ಯಾಯಾಲಯ ದರ್ಶನ್ ಪರ ವಕೀಲ ಕಪಿಲ್ ಸಿಬಲ್ಗೆ ಪ್ರಶ್ನೆ ಮಾಡಿತು. “ದರ್ಶನ್ ಕೈವಾಡವಿದೆ ಎಂಬುದಕ್ಕೆ ಯಾವುದೇ ನೇರ ಸಾಕ್ಷ್ಯಗಳಿಲ್ಲ” ಎಂಬುದಾಗಿ ಸಿಬಲ್ ವಾದ ಮಂಡಿಸಿದರು. ಆದರೆ ಸುಪ್ರೀಂಕೋರ್ಟ್ ಈ ವಾದವನ್ನು ಒಪ್ಪದೇ, ಮುಂದಿನ ದಿನಾಂಕಕ್ಕೆ ವಿಚಾರಣೆ ಮುಂದಿಟ್ಟಿತು.
ಈ ಮೊದಲು ದರ್ಶನ್ ಪರ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸುತ್ತಿದ್ದರು. ಆದರೆ ಅವರು ಪ್ರಕರಣದಿಂದ ಹಿಂದೆ ಸರಿದು, ಈಗ ಕಪಿಲ್ ಸಿಬಲ್ ಪ್ರಮುಖ ವಕೀಲರಾಗಿದ್ದಾರೆ.
ಬರ್ಬರ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ 17 ಆರೋಪಿಗಳು ಆರು ತಿಂಗಳ ಕಾಲ ಜೈಲಿನಲ್ಲಿ ಇದ್ದರು. ನಂತರ ಕರ್ನಾಟಕ ಹೈಕೋರ್ಟ್ ಕೆಲವು ಪ್ರಮುಖ ಆರೋಪಿಗಳಿಗೆ ಜಾಮೀನು ನೀಡಿದ್ದು, ಇದನ್ನು ಪ್ರಶ್ನಿಸಿ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ.