Friday, July 18, 2025
Google search engine

Homeಅಪರಾಧಕಾನೂನು'ಬಿಕ್ಲು ಶಿವ' ಕೊಲೆ ಪ್ರಕರಣ: ಶಾಸಕ ಭೈರತಿ ಬಸವರಾಜ್ ಹೈಕೋರ್ಟ್‌ಗೆ ಅರ್ಜಿ

‘ಬಿಕ್ಲು ಶಿವ’ ಕೊಲೆ ಪ್ರಕರಣ: ಶಾಸಕ ಭೈರತಿ ಬಸವರಾಜ್ ಹೈಕೋರ್ಟ್‌ಗೆ ಅರ್ಜಿ

ಬೆಂಗಳೂರು : ಬೆಂಗಳೂರಿನಲ್ಲಿ ರೌಡಿಶೀಟರ್, ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಶಾಸಕ ಭೈರತಿ ಬಸವರಾಜ್ ಪ್ರಕರಣ ರದ್ದುಗೊಳಿಸುವಂತೆ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ. ಹೈ ಕೋರ್ಟ್ ಏಕ ಸದಸ್ಯ ಪೀಠದಲ್ಲಿ ತುರ್ತು ವಿಚಾರಣೆಗೆ ಕೂಡ ಮನವಿ ಮಾಡಿದ್ದಾರೆ.

ಭೈರತಿ ಬಸವರಾಜ್ ಪರ ಹಿರಿಯ ವಕೀಲ ಸಂದೇಶ ಚೌಟ ಈ ಕುರಿತು ಮನವಿ ಮಾಡಿದ್ದಾರೆ. ವಕೀಲರ ಮನವಿಗೆ ಎಸ್‌ಪಿಪಿ ಬಿ.ಎ ಬೆಳ್ಳಿಯಪ್ಪ ಆಕ್ಷೇಪ ವ್ಯಕ್ತಪಡಿಸಿದ್ದು, ನೋಟಿಸ್ ನೀಡಿದಕ್ಕೆ ಹೈಕೋರ್ಟ್ ಗೆ ಬಂದಿದ್ದಾರೆ ಅಂದಮೇಲೆ ಈ ಪ್ರಕರಣ ತುರ್ತು ವಿಚಾರಣೆಯ ಅಗತ್ಯವಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬಳಿಕ ಅರ್ಜಿಯಲ್ಲಿ ಏನಿದೆ ಅಂತ ತಿಳಿಯುವ ಮೊದಲೇ ಎಸ್ ಪಿ ಪಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತುರ್ತು ವಿಚಾರಣೆಗೆ ಆಕ್ಷೇಪ ಸರಿಯಲ್ಲ ಎಂದು ಶಾಸಕರ ಪರ ವಕೀಲ ಸಂದೇಶ್ ಚೌಟ ವಾದ ಮಂಡಿಸಿದರು. ಬಸವರಾಜ ವಿರುದ್ಧದ ಎಫ್ಐಆರ್ ನಲ್ಲಿ ಯಾವುದೇ ಹುರುಳಿಲ್ಲ. ಶಾಸಕ ಭೈರತಿ ಬಸವರಾಜ್ ಹೆಸರನ್ನೇ ದೂರುದಾರರು ಹೇಳಿಲ್ಲ ಹೀಗೆಂದು ಕೊಲೆಯಾದ ವ್ಯಕ್ತಿಯ ತಾಯಿ ಸ್ಪಷ್ಟಪಡಿಸಿದ್ದಾರೆ. ಆದರೂ ಬಸವರಾಜ್ ಹೆಸರನ್ನು ಸೇರಿಸಲಾಗಿದೆ. ಮಧ್ಯಾಹ್ನ 2:30ಕ್ಕೆ ವಿಚಾರಣೆ ನಡೆಸುವಂತೆ ಮನವಿ ಮಾಡಿದರು.

RELATED ARTICLES
- Advertisment -
Google search engine

Most Popular