ಚಾಮರಾಜನಗರ: ಜುಲೈ 26 ಭಾರತೀಯರಿಗೆ ವಿಶೇಷ ದಿನ . ನೆರೆ ರಾಷ್ಟ್ರವಾದ ಪಾಕಿಸ್ತಾನದ ವಿರುದ್ಧ ವೀರ ದಿಗ್ವಿಜಯವನ್ನು ಪಡೆದು ಭಾರತೀಯ ಸೈನ್ಯದ ಶಕ್ತಿಯನ್ನು ಇಮ್ಮಡಿಗೂಳಿಸಿ, ಭಾರತೀಯರ ರಾಷ್ಟ್ರಭಕ್ತಿಯನ್ನು ವಿಶ್ವಕ್ಕೆ ತಿಳಿಸಿದ ಯುದ್ಧವೆಂದು ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ , ಸಂಸ್ಕೃತಿ ಚಿಂತಕ ಸುರೇಶ್ ಎನ್ ಋಗ್ವೇದಿ ತಿಳಿಸಿದರು.

ಅವರು ಜೈ ಹಿಂದ್ ಪ್ರತಿಷ್ಠಾನ, ಋಗ್ವೇದಿ ಯೂತ್ ಕ್ಲಬ್ ಹಾಗೂ ಜಿಲ್ಲಾ ಯುವ ಸಂಘಟನೆಗಳ ಒಕ್ಕೂಟ ಋಗ್ವೇದಿ ಕುಟೀರದ ಜೈ ಹಿಂದ್ ಕಟ್ಟೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಗಿಲ್ ವಿಜಯ ದಿವಸ ಕಾರ್ಯಕ್ರಮದಲ್ಲಿ ವೀರ ಯೋಧರಿಗೆ ಶ್ರದ್ಧಾಂಜಲಿ ಗೌರವ ಸಲ್ಲಿಸಿ ಮಾತನಾಡುತ್ತ , ಭಾರತದ ದೇಶಭಕ್ತಿ, ಸಂಸ್ಕೃತಿ, ಪರಂಪರೆಯ ರಕ್ಷಣೆಯಲ್ಲಿ ಸಾವಿರಾರು ವರ್ಷಗಳಿಂದ ಜಗತ್ತಿಗೆ ಮಾದರಿಯಾಗಿದೆ .ಹಲವಾರು ವಿದೇಶಿಯರ ದಾಳಿಯನ್ನು ಸಮರ್ಥವಾಗಿ ಎದುರಿಸಿ ಇಂದಿಗೂ ಜಗತ್ತಿನ ಶ್ರೇಷ್ಠ ರಾಷ್ಟ್ರವಾಗಿ ಉಳಿದಿರುವ ಭಾರತವನ್ನು ಯಾವ ಶಕ್ತಿಯು ವಶಪಡಿಸಿಕೊಳ್ಳಲು ಸಾಧ್ಯವಿಲ್ಲ. ಭಾರತವು ವೈಜ್ಞಾನಿಕವಾಗಿ ,ಆರ್ಥಿಕವಾಗಿ ಸಾಂಸ್ಕೃತಿಕವಾಗಿ ,ಶೈಕ್ಷಣಿಕವಾಗಿ ತೀವ್ರ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದ್ದು, ಇಡೀ ಜಗತ್ತಿನ ಶ್ರೇಷ್ಠ ಆರ್ಥಿಕ ರಾಷ್ಟ್ರವಾಗಿಯೂ ಕೂಡ ಹೊರಹೊಮ್ಮುತ್ತಿದೆ. ನಮ್ಮ ಸೈನ್ಯ ಶಕ್ತಿ ಇಡೀ ಜಗತ್ತಿಗೆ ಮಾದರಿಯಾಗಿ ತನ್ನ ಶಕ್ತಿಯನ್ನು ಎಲ್ಲ ಯುದ್ಧಗಳನ್ನು ಸಮರ್ಥವಾಗಿ ವಿಶ್ವಕ್ಕೆ ತಿಳಿಸಿದೆ. ಪ್ರತಿ ಭಾರತೀಯನ ಮನದಲ್ಲೂ ರಾಷ್ಟ್ರಪ್ರೇಮ ,ರಾಷ್ಟ್ರಭಕ್ತಿ ಸದಾಕಾಲ ಜಾಗೃತವಾಗುತ್ತಿದೆ. ಸಂಕಷ್ಟದಲ್ಲಿ ಮತ್ತಷ್ಟು ದೃಢವಾದ ನಿಲುವನ್ನು ಹೊಂದಿ ,ಪೂರ್ಣ ಭಾರತದ ನಿಷ್ಠೆಯನ್ನು ವ್ಯಕ್ತಪಡಿಸಿ ಸಹಕಾರ ನೀಡುವ ಭಾರತೀಯ ಕೋಟ್ಯಾಂತರ ಜನರ ಭಕ್ತಿ ಸದಾಕಾಲ ಇದೆ . ರಾಷ್ಟ್ರಕ್ಕಾಗಿ ಅರ್ಪಣೆ ಮಾಡಿಕೊಂಡ ಸೈನಿಕರಿಗೆ ಭಾರತೀಯರ ಶ್ರದ್ಧಾಪೂರ್ವಕ ಗೌರವ ನಮನಗಳನ್ನು ಸಲ್ಲಿಸಿ ಸದಾ ಕಾಲ ರಾಷ್ಟ್ರದ ಗಡಿಗಾಗಿ , ರಾಷ್ಟ್ರದ ಉಳಿವಿಗಾಗಿ ಶ್ರಮಿಸುತ್ತಿರುವ ಸೈನಿಕ ಶಕ್ತಿಗೆ ಅವರ ಕುಟುಂಬ ವರ್ಗಕ್ಕೆ ಭಾರತೀಯರ ನಿಷ್ಠೆಯನ್ನು ಕಾರ್ಗಿಲ್ ವಿಜಯ ದಿವಸದ ಮೂಲಕ ಸಮರ್ಪಿಸುವ ದಿನವಾಗಿದೆ . ಯುವಶಕ್ತಿಗೆ ಕಾರ್ಗಿಲ್ ವಿಜಯದ ಸಂಪೂರ್ಣ ಇತಿಹಾಸವನ್ನು ತಿಳಿಸುವ ಮೂಲಕ ಯಾವುದೇ ನೆರೆ ರಾಷ್ಟ್ರಗಳು ಭಾರತವನ್ನು ಎಂದಿಗೂ ಕೂಡ ಮಣಿಸಲಾಗದು ಎಂಬ ದಿಟ್ಟ ಸಂದೇಶವನ್ನು ನೀಡಬಹುದಾಗಿದೆ . ಪ್ರತಿ ಭಾರತೀಯನು ಭಾರತಕ್ಕಾಗಿ ದುಡಿಯೋಣ . ಸಂಸ್ಕೃತಿ ಪರಂಪರೆಯನ್ನು ರಾಷ್ಟ್ರೀಯ ವಿಚಾರಗಳನ್ನು ಅರಿಯೋಣ ಎಂದು ತಿಳಿಸಿದರು.
ಜಿಲ್ಲಾ ಯುವ ಸಂಘಟನೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ, ದೊಡ್ಡಮೋಳೆ ಸುರೇಶ್ ಮಾತನಾಡಿ ಶಿವಶಕ್ತಿ ರಾಷ್ಟ್ರದ ಪ್ರಮುಖ ಆಸ್ತಿ ಯುವಶಕ್ತಿಗೆ ರಾಷ್ಟ್ರೀಯ ಚಿಂತನೆಯ ಆದರ್ಶಗಳನ್ನು ತಿಳಿಸುವ ದಿಕ್ಕಿನಲ್ಲಿ ರಾಷ್ಟ್ರೀಯ ಕಾರ್ಯಕ್ರಮಗಳು ದಿಗ್ವಿಜಯದ ನೆನಪುಗಳು ಸದಾಕಾಲ ಜಾಗೃತಿಯಾಗಿ ನಮ್ಮಲ್ಲಿ ಮತ್ತಷ್ಟು ದೇಶಭಕ್ತಿಯ ಬಗ್ಗೆ ಚಿಂತಿಸಲು ಅವಕಾಶ ನೀಡುತ್ತದೆ. ದೇಶಭಕ್ತಿಯನ್ನು ಹೆಚ್ಚಿಸಿಕೊಳ್ಳೋಣ . ಯುವಕರು ಕೆಟ್ಟ ವ್ಯಸನಗಳಿಗೆ ಬಲಿಯಾಗದೆ ಉತ್ತಮ ನಡವಳಿಕೆಯಿಂದ ದೇಶಕ್ಕಾಗಿ ಅರ್ಪಣೆ ಮಾಡಿಕೊಂಡ ನೂರಾರು ಹುತಾತ್ಮರ ಇತಿಹಾಸವನ್ನು ತಿಳಿಯುವ ಪ್ರಯತ್ನವನ್ನು ಮಾಡೋಣ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಯುವ ಒಕ್ಕೂಟದ ರವಿಕುಮಾರ್, ಮಹದೇವೇಗೌಡ , ಅವಿನಾಶ್, ಸುರೇಂದ್ರ ,ಪುಟ್ಟು, ಹನುಮಂತ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.