Sunday, July 27, 2025
Google search engine

Homeರಾಜ್ಯಹೊಸ ಐದು ಐರಾವತ ಕ್ಲಬ್ ಕ್ಲಾಸ್ 2.0 ಬಸ್​​ಗಳಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ

ಹೊಸ ಐದು ಐರಾವತ ಕ್ಲಬ್ ಕ್ಲಾಸ್ 2.0 ಬಸ್​​ಗಳಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ

ಬೆಂಗಳೂರು : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು, ಸಾರ್ವಜನಿಕ ಸೇವಾ ಸಂಸ್ಥೆಯಾಗಿದ್ದು, ಬೆಂಗಳೂರು ನಗರ ಹಾಗೂ ಹೊರ ವಲಯದ ಸಾರ್ವಜನಿಕ ಪ್ರಯಾಣಿಕರಿಗೆ ಉತ್ತಮ, ಸುಲಭ, ಸುರಕ್ಷಿತ ಸಾರಿಗೆ ಸೇವೆಯನ್ನು ಒದಗಿಸಲು ನಿರಂತರವಾಗಿ ಶ್ರಮಿಸುತ್ತಿದೆ. ಈ ನಿಟ್ಟಿನಲ್ಲಿ ಪ್ರತಿದಿನ ಹವಾನಿಯಂತ್ರಿತ ಸಾರಿಗೆಗಳನ್ನು ಒಳಗೊಂಡಂತೆ 1,795 ಮಾರ್ಗಗಳಲ್ಲಿ 6,187 ಅನುಸೂಚಿಗಳನ್ನು 64,975 ಸುತ್ತುವಳಿಗಳೊಂದಿಗೆ 12.79 ಲಕ್ಷ ಕಿ.ಮೀ.ಗಳಲ್ಲಿ ಬೆಂಗಳೂರು ನಗರ ಹಾಗೂ ಹೊರವಲಯದ ಪ್ರಯಾಣಿಕರ ದಟ್ಟಣೆ/ ಅವಶ್ಯಕತೆಗನುಗುಣವಾಗಿ ಕಾರ್ಯಾಚರಣೆ ಮಾಡುತ್ತಿದ್ದು, ಸರಾಸರಿ 42 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಿಂದ 25.0 ಕಿ.ಮೀ.ವರೆಗೆ ಕಾರ್ಯಾಚರಣೆ ವ್ಯಾಪ್ತಿಯನ್ನು ಹೊಂದಿದ್ದು, ನಗರದ ಕೇಂದ್ರ ಭಾಗದಿಂದ ಸುಮಾರು 50.0 ಕಿ.ಮೀ ವ್ಯಾಪ್ತಿಯಲ್ಲಿ ಸಾರಿಗೆ ಸೇವೆಯನ್ನು ಪ್ರಯಾಣಿಕರಿಗೆ ಒದಗಿಸಲಾಗುತ್ತಿದೆ.

ಸಂಸ್ಥೆಯು ಸತತವಾಗಿ 04 ವರ್ಷಗಳಿಂದ ಎಲೆಕ್ಟ್ರಿಕ್ ಬಸ್ಸುಗಳನ್ನು ಪರಿಚಯಿಸುತ್ತಿದ್ದು, ಇಲ್ಲಿಯವರೆಗೆ 1473 ಎಲೆಕ್ಟ್ರಿಕ್ ಬಸ್ಸುಗಳು ಕಾರ್ಯಾಚರಣೆಗೆ ನಿಯೋಜಿಸಲಾಗಿರುತ್ತದೆ. PM E-Drive ಯೋಜನೆಯಡಿಯಲ್ಲಿ 400 ಹವಾನಿಯಂತ್ರಿತ ಹಾಗೂ 4100 ಸಾಮಾನ್ಯ (ಹವಾನಿಯಂತ್ರಣರಹಿತ) ಎಲೆಕ್ಟ್ರಿಕ್ ಬಸ್ಸುಗಳನ್ನು ನಿಯೋಜಿಸಲಾಗುತ್ತಿದೆ.

ಕಲಾಸಿಪಾಳ್ಯದ ಬಸ್ ನಿಲ್ದಾಣದ ಮರುನಾಮಕರಣ ಹಾಗೂ ಜನೋಪಕಾರಿ ಶ್ರೀ ದೊಡ್ಡಣ್ಣಶೆಟ್ಡರ ಬಗ್ಗೆ ಮಾಹಿತಿ

ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ಧರ್ಮಸಂಸ್ಥೆಯನ್ನು ಶ್ರೀ ದೊಡ್ಡಣ್ಣಶೆಟ್ಟರು 1906ರಲ್ಲಿಯೇ ಸ್ಥಾಪಿಸಿ, ಸಮಾಜದಲ್ಲಿನ ಬಡವರು, ಹಿಂದುಳಿದವರು ಎಂಬ ಭೇದ-ಭಾವವಿಲ್ಲದೇ ಸರ್ವ ಜನಾಂಗಕ್ಕೂ ಸಮಾನ ಶಿಕ್ಷಣವನ್ನು ನೀಡಬೇಕೆಂಬ ದೂರದೃಷ್ಟಿಯನ್ನು ಇಟ್ಟುಕೊಂಡು, ಶಾಲಾ ಕಾಲೇಜುಗಳನ್ನು ಸ್ಥಾಪಿಸಿ ಸಮಾಜ ಸೇವೆಯಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡಿದ್ದರು.

ಮುಂದುವರೆದು, ಶ್ರೀ ದೊಡ್ಡಣ್ಣ ಶೆಟ್ಟರ ಸಮಾಜ ಸೇವೆಯನ್ನು ಗುರುತಿಸಿ, ಅಂದಿನ ಮೈಸೂರು ಮಹಾರಾಜರಾದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ರವರು “ಜನೋಪಕಾರಿ” ಎಂಬ ಬಿರುದನ್ನು ನೀಡಿ ಸನ್ಮಾನಿಸಿರುತ್ತಾರೆ. ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ಧರ್ಮ ಸಂಸ್ಥೆಯು ಎಲ್ಲಾ ಜನಾಂಗದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ಊಟ, ವಸತಿ, ವಿದ್ಯಾರ್ಥಿ ವೇತನ ಹಾಗೂ ಜನಾಂಗದ ಆಸಕ್ತ ಮಹಿಳೆಯರಿಗೆ ವಿಧವಾ ಮಾಸಾಶನ ನೀಡುತ್ತಿದೆ. ಸದರಿಯವರು ಸಮಾಜಕ್ಕೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವತಿಯಿಂದ ಕಲಾಸಿಪಾಳ್ಯದಲ್ಲಿ ನಿರ್ಮಿಸಿರುವ ಬಸ್ ನಿಲ್ದಾಣಕ್ಕೆ “ಜನೋಪಕಾರಿ ಶ್ರೀ ದೊಡ್ಡಣ್ಣ ಶೆಟ್ಟರ ಕಲಾಸಿಪಾಳ್ಯ ಬಸ್ ನಿಲ್ದಾಣ” ಎಂದು ಮರು ನಾಮಕರಣ ಮಾಡಲು ಸಂಸ್ಥೆಯ 108ನೇ ಮಂಡಳಿ ಸಭೆಯ ಠರಾವು ಸಂಖ್ಯೆ: 2080 / ದಿನಾಂಕ:15.03.2025ರಲ್ಲಿ ಅನುಮೋದನೆ ನೀಡಲಾಗಿದೆ. ಆದ್ದರಿಂದ ಬೆಂ.ಮ.ಸಾ.ಸಂಸ್ಥೆಯ ವತಿಯಿಂದ ಕಲಾಸಿಪಾಳ್ಯದಲ್ಲಿ ನಿರ್ಮಿಸಿರುವ ಬಸ್ ನಿಲ್ದಾಣಕ್ಕೆ “ಜನೋಪಕಾರಿ ಶ್ರೀ ದೊಡ್ಡಣ್ಣ ಶೆಟ್ಟರ ಕಲಾಸಿಪಾಳ್ಯ ಬಸ್ ನಿಲ್ದಾಣ” ಎಂದು ಮರು ನಾಮಕರಣ ಮಾಡಲು ಸರ್ಕಾರದ ಅನುಮೋದನೆಯನ್ನು ಕೋರಿದ್ದು, ಸರ್ಕಾರದ ಆದೇಶ ಸಂಖ್ಯೆ: ಟಿಡಿ 107 ಟಿಸಿಒ 2025, ಬೆಂಗಳೂರು, ದಿನಾಂಕ:09.07.2025ರನ್ವಯ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಕಲಾಸಿಪಾಳ್ಯ ಬಸ್ ನಿಲ್ದಾಣಕ್ಕೆ “ಜನೋಪಕಾರಿ ಶ್ರೀ ದೊಡ್ಡಣ್ಣ ಶೆಟ್ಟರ ಕಲಾಸಿಪಾಳ್ಯ ಬಸ್ ನಿಲ್ದಾಣ” ಎಂದು ನಾಮಕರಣ ಮಾಡಲು ಆದೇಶಿಸಲಾಗಿರುತ್ತದೆ.

ಕಲಾಸಿಪಾಳ್ಯ ಬಸ್ ನಿಲ್ದಾಣದ ಬಗ್ಗೆ ಮಾಹಿತಿ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು 04 ಪ್ರಮುಖ ಬಸ್ ನಿಲ್ದಾಣಗಳು, 10 ಟಿ.ಟಿ.ಎಂ.ಸಿ ಗಳನ್ನು ಮತ್ತು 36 ಮಧ್ಯಮ/ಸಣ್ಣ ಬಸ್ ನಿಲ್ದಾಣಗಳನ್ನು ಹೊಂದಿರುತ್ತದೆ. ಸದರಿ ಬಸ್ ನಿಲ್ದಾಣಗಳ ಪೈಕಿ ಒಂದಾದ ಕಲಾಸಿಪಾಳ್ಯದಲ್ಲಿ ಸುಸಜ್ಜಿತ, ಮೂಲಭೂತ ಸೌಕರ್ಯಗಳನ್ನು ಒಳಗೊಂಡ ನೂತನ ಬಸ್ ನಿಲ್ದಾಣವನ್ನು ನಾಗರೀಕರ ಬಳಕೆಗೆ ದಿನಾಂಕ: 10-03-2023 ರಂದು ಸಮರ್ಪಿಸಲಾಗಿರುತ್ತದೆ. ಸದರಿ ಬಸ್ ನಿಲ್ದಾಣದಲ್ಲಿ 07 ಬಸ್-ಬೇ, ಪ್ರತಿ ಬಸ್-ಬೇಯಲ್ಲಿ 06 ಪ್ಲಾಟ್ ಫಾರಂಗಳು, ವಾಣಿಜ್ಯ ಮಳಿಗೆಗಳು, ಕುಡಿಯುವ ನೀರು, ಶೌಚಾಲಯಗಳು, ದ್ವಿಚಕ್ರ ಹಾಗೂ ಕಾರುಗಳ ನಿಲುಗಡೆಗೆ ಸ್ಥಳಾವಕಾಶದ ಸೌಲಭ್ಯಗಳನ್ನು ಹೊಂದಿರುತ್ತದೆ.

ಪ್ರಸ್ತುತ, ಕಲಾಸಿಪಾಳ್ಯ ಬಸ್ ನಿಲ್ದಾಣದಿಂದ ವಿವಿಧ ಪ್ರದೇಶಗಳಿಗೆ 671 ಅನುಸೂಚಿಗಳಲ್ಲಿ 2004 ಸುತ್ತುವಳಿಗಳನ್ನು ಹಾಗೂ ಚಂದ್ರಭವನನಿಂದ 505 ಅನುಸೂಚಿಗಳಲ್ಲಿ 1217 ಸುತ್ತುವಳಿಗಳನ್ನು ಒಟ್ಟಾರೆಯಾಗಿ ಕೃ.ರಾ.ಮಾರುಕಟ್ಟೆಯಿಂದ ಒಟ್ಟು 1176 ಅನುಸೂಚಿಗಳಲ್ಲಿ 3221 ಸುತ್ತುವಳಿಗಳನ್ನು ಆಚರಣೆಗೊಳಿಸಲಾಗುತ್ತಿದೆ.

ಕಲಾಸಿಪಾಳ್ಯ ಬಸ್ ನಿಲ್ದಾಣದಲ್ಲಿ 62,374 ಚದರ ಅಡಿ ವಾಣಿಜ್ಯ ಜಾಗ ಹಾಗೂ 52,180 ಚದರ ಅಡಿ ಪಾರ್ಕಿಂಗ್ ಜಾಗ ಸೇರಿ ಒಟ್ಟು 1,14,914 ಚದರ ಅಡಿ ವಾಣಿಜ್ಯ ಜಾಗವಿರುತ್ತದೆ. ನಿಲ್ದಾಣದಲ್ಲಿನ ವಾಣಿಜ್ಯ/ಕಛೇರಿ ಜಾಗವನ್ನು ಪರವಾನಗಿ ಆಧಾರದಲ್ಲಿ ಹಂಚಿಕೆ ಪಡೆಯುವಂತೆ ವಿವಿಧ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕಛೇರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದು, ಹಂಚಿಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ.

ಸದರಿ ಬಸ್ ನಿಲ್ದಾಣದಲ್ಲಿನ ವಾಣಿಜ್ಯ ಜಾಗಗಳಿಂದ ಮಾಸಿಕ ಅಂದಾಜು ರೂ.42,88,497/- ಸಾರಿಗೇತರ ಆದಾಯ ನಿರೀಕ್ಷಿಸಲಾಗಿದೆ. ಪ್ರಸ್ತುತ, ಸದರಿ ಬಸ್ ನಿಲ್ದಾಣದಿಂದ ಮಾಸಿಕ ರೂ.2,52,074/- ಆದಾಯ ಗಳಿಸಲಾಗುತ್ತಿದೆ.

ಸಂಸ್ಥೆಯಲ್ಲಿ ಕೈಗೊಂಡಿರುವ ಕಾರ್ಮಿಕ ಉಪಕ್ರಮಗಳ ಮಾಹಿತಿ

 40 ವರ್ಷ ಮೇಲ್ಪಟ್ಟ ನೌಕರರು ಮತ್ತು ಅಧಿಕಾರಿಗಳ ಹೃದಯ ಸಂಬಂಧಿ ತಪಾಸಣೆಗಳನ್ನು ನಡೆಸಲು ಶ್ರೀ ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆಯೊಂದಿಗೆ 05 ವರ್ಷಗಳ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ. ಇಲ್ಲಿಯವರೆಗೆ ಒಟ್ಟು 13,668 ನೌಕರರುಗಳಿಗೆ ಉಚಿತವಾಗಿ ಹೃದಯ ತಪಾಸಣೆಗೆ ಒಳಪಡಿಸಲಾಗಿರುತ್ತದೆ.

ಬೆಂಗಳೂರು ನಗರದ ಜನದಟ್ಟಣೆಯ ಸಾರಿಗೆ ವ್ಯವಸ್ಥೆಯಲ್ಲಿ ಸದಾ ಕರ್ತವ್ಯನಿರತ ಸಿಬ್ಬಂದಿಗಳ ಶ್ವಾಸಕೋಶ, ಉಸಿರಾಟ ಕಾಯಿಲೆ, ಅಲರ್ಜಿಗಳಿಗೆ ಸಂಬಂಧಿಸಿದ ಸ್ಕ್ರೀನಿಂಗ್ ಮತ್ತು ಸುಧಾರಿತ ಪರೀಕ್ಷೆಗಳನ್ನು ಮಾಡಿಸುವ ಕಾಳಜಿಯೊಂದಿಗೆ ಜಯನಗರದ ವಾಯು ಚೆಸ್ಟ್ ಅಂಡ್ ಸ್ಲೀಪ್ ಸೆಂಟರ್ ನಲ್ಲಿ ತಪಾಸಣಾ ಶಿಬಿರಗಳನ್ನು ಆಯೋಜಿಸಲಾಗುತ್ತಿದ್ದು, ಈವರೆವಿಗೂ 2577 ನೌಕರರುಗಳು ತಪಾಸಣೆಗೆ ಒಳಪಟ್ಟಿರುತ್ತಾರೆ.

ಸಂಸ್ಥೆಯ ನೌಕರರ ಆರೋಗ್ಯದ ಹಿತದೃಷ್ಟಿಯಿಂದ ಸಂಸ್ಥೆಯ ಎಲ್ಲಾ ನೌಕರರಿಗೆ Department of Biotechnology Govt of India ದ ಸಹಕಾರದೊಂದಿಗೆ C-CAMP ಅನ್ನು ಸರ್ಕಾರದ ಸಾರಿಗೆ ಇಲಾಖೆಯ “ಸಾರಿಗೆ ಆಶಾಕಿರಣ ಯೋಜನೆ”ಯಡಿ ಸಂಸ್ಥೆಯ ಕೇಂದ್ರ ಕಛೇರಿ ಸೇರಿದಂತೆ 50 ಘಟಕಗಳು ಮತ್ತು 4 ಕಾರ್ಯಾಗರಗಳಲ್ಲಿ ವಿವಿಧ ತಂಡಗಳೊಂದಿಗೆ ಕಣ್ಣಿನ ತಪಾಸಣಾ ಶಿಬಿರಗಳನ್ನು ಹಂತಹಂತವಾಗಿ ಆಯೋಜಿಸಿ, ನೌಕರರಿಗೆ ಉಚಿತವಾಗಿ ಕಣ್ಣಿನ ಪರೀಕ್ಷೆಯನ್ನು ನಡೆಸಲಾಗುತ್ತದೆ. ಅದರಂತೆ, ಪರೀಕ್ಷೆಗೆ ಒಳಪಡಿಸಲಾದ ನೌಕರರ ಕಣ್ಣಿನ ದೋಷದ ಪ್ರಮಾಣಕ್ಕೆ ತಕ್ಕಂತೆ ಕನ್ನಡಕಗಳನ್ನು ಸಿದ್ಧಪಡಿಸಿ, ನೌಕರರು ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಯಸ್ಥಾನಗಳಿಗೆ ಈ ಯೋಜನೆಯಡಿಯಲ್ಲಿಯೇ ವಿತರಿಸಲಾಗುತ್ತದೆ.

 ಸಂಸ್ಥೆಯು ನೌಕರರ ಭದ್ರತೆ ಮತ್ತು ಕಲ್ಯಾಣಕ್ಕೆ ಬದ್ಧವಾಗಿದ್ದು, ಈ ನಿಟ್ಟಿನಲ್ಲಿ, ನೌಕರರು ತಮ್ಮ ಕರ್ತವ್ಯ ನಿರ್ವಹಣೆಯ ವೇಳೆ ಅಥವಾ ವ್ಯಕ್ತಿಗತ ಅಪಘಾತದಿಂದ ಮೃತಪಟ್ಟರೆ ಅವರ ಕುಟುಂಬದವರಿಗೆ ಆರ್ಥಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ, ಸಂಸ್ಥೆಯು ದಿನಾಂಕ:25-07-2025 ರಂದು ಬ್ಯಾಂಕ್ ಆಫ್ ಬರೋಡಾದೊಂದಿಗೆ ಐದು ವರ್ಷಗಳ ಅವಧಿಗೆ ವಿಮಾ ಸೇವೆಗಳ ಒಡಂಬಡಿಕೆ ಮಾಡಿಕೊಂಡಿದೆ. ಈ ಒಡಂಬಡಿಕೆಯ ಪ್ರಮುಖ ವಿಮಾ ಸೌಲಭ್ಯಗಳಲ್ಲಿ ಕರ್ತವ್ಯನಿರತ ಸಿಬ್ಬಂದಿಯು ಕರ್ತವ್ಯ ನಿರ್ವಹಣೆ ವೇಳೆ ಅಪಘಾತ ಮರಣ ಹೊಂದಿದ್ದಲ್ಲಿ ರೂ. 1.25 ಕೋಟಿ ಪರಿಹಾರವನ್ನು ಮೃತರ ನಾಮನಿರ್ದೇಶಿತರಿಗೆ ನೀಡಲಾಗುತ್ತದೆ; ವೈಯಕ್ತಿಕ ಅಪಘಾತ, ವಿಮಾನ ಅಪಘಾತದಲ್ಲಿ ಮರಣ ಹಾಗೂ ಶಾಶ್ವತ ಪೂರ್ಣ ಅಂಗವಿಕಲತೆಯಾದಲ್ಲಿ ಬ್ಯಾಂಕಿನಿಂದ ರೂ. 1.00 ಕೋಟಿ ಪರಿಹಾರ ಒದಗಿಸಲಾಗುವುದು ಮತ್ತು ಸ್ವಾಭಾವಿಕ ಮರಣ ಹೊಂದಿದ್ದಲ್ಲಿ ರೂ.10 ಲಕ್ಷ ಪರಿಹಾರ ನೀಡಲಾಗುವುದು.

 ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಇರುವ 2500 ನಿರ್ವಾಹಕ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿಗೊಳಿಸಲಾಗಿದ್ದು, ಸದರಿಯವರುಗಳಿಗೆ ಕೌನ್ಸಲಿಂಗ್ ಮೂಲಕ ಘಟಕ ನಿಯೋಜನೆ ಮಾಡಲಾಗಿದ್ದು, ಕರ್ತವ್ಯಕ್ಕೆ ನಿಯೋಜಿಸಲಾಗಿರುತ್ತದೆ.

 ಸಂಸ್ಥೆಯಲ್ಲಿನ ಖಾಲಿ ಹುದ್ದೆಗಳ ಲಭ್ಯತೆಗನುಗುಣವಾಗಿ ಮೃತಾವಲಂಭಿತರುಗಳನ್ನು ಅನುಕಂಪದ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಉದ್ದೇಶಿಸಿ ಕಿರಿಯ ಸಹಾಯಕ ಕಂ ಡೇಟಾ ಎಂಟ್ರಿ ಆಪರೇಟರ್, ದರ್ಜೆ-3 (ಮೇಲ್ವಿಚಾರಕೇತರ) ಹುದ್ದೆಗೆ 200 ಅಭ್ಯರ್ಥಿಗಳನ್ನು, 25 ಕೆ.ಎಸ್.ಟಿ. ಪೇದೆ, 07 ಚಾಲಕರನ್ನು, 10 ನಿರ್ವಾಹಕರನ್ನು, 17 ತಾಂತ್ರಿಕ ಸಿಬ್ಬಂದಿಗಳನ್ನು, 51 ಕಛೇರಿ ಸಹಾಯಕರಿಗೆ ನೇಮಕಾತಿ ನೀಡಲಾಗಿದೆ.    ಜೂನ್ 2023 ರಿಂದ ಇಲ್ಲಿಯವರೆಗೂ ಒಟ್ಟು 310 ಮೃತಾವಲಂಬಿತರುಗಳಿಗೆ ಅನುಕಂಪ ಆಧಾರಿತ ನೇಮಕಾತಿ ಆದೇಶವನ್ನು ನೀಡಲಾಗಿರುತ್ತದೆ.

 ಈ ಸಾಲಿನಲ್ಲಿ Urban Mobility India ಮತ್ತು ASRTU ನಂತಹ ಪ್ರತಿಷ್ಠಿತ ರಾಷ್ಟ್ರೀಯ ಸಂಸ್ಥೆಗಳಿಂದ ಪಡೆದಿರುವ ಪ್ರಶಸ್ತಿಗಳು ಒಳಗೊಂಡಂತೆ, ಬೆಂ.ಮ.ಸಾ.ಸಂಸ್ಥೆಗೆ ಒಟ್ಟಾರೆ 149 ಪ್ರಶಸ್ತಿ/ಪುರಸ್ಕಾರಗಳು ಲಭಿಸಿರುತ್ತದೆ.

RELATED ARTICLES
- Advertisment -
Google search engine

Most Popular