Monday, July 28, 2025
Google search engine

Homeರಾಜ್ಯಸುದ್ದಿಜಾಲಯುವ ಶಕ್ತಿ ಸೈನ್ಯ ಸೇರಿ ದೇಶ ಸೇವೆಗೆ ಮುಂದಾಗಬೇಕು – ಸುರೇಶ್ ಎನ್ ಋಗ್ವೇದಿ

ಯುವ ಶಕ್ತಿ ಸೈನ್ಯ ಸೇರಿ ದೇಶ ಸೇವೆಗೆ ಮುಂದಾಗಬೇಕು – ಸುರೇಶ್ ಎನ್ ಋಗ್ವೇದಿ

ಚಾಮರಾಜನಗರ: ಸದೃಢ ಯುವಕರು ಭಾರತದ ಸೇವೆ ಮಾಡಲು ಸೈನ್ಯ ಸೇರುವಂತೆ ಹಾಗೂ ದೇಶ ಸೇವೆ ಸಲ್ಲಿಸಲು ಸದಾ ಮುಂದಾಗಬೇಕು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಉಪನ್ಯಾಸಕರು,ಸಂಸ್ಕೃತಿ ಚಿಂತಕರಾದ ಸುರೇಶ್ ಎನ್ ಋಗ್ವೇದಿ ರವರು ತಿಳಿಸಿದರು.

ಅವರು ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ ಮೇರಾ ಯುವ ಭಾರತ್, ರಂಗ ದೀವಿಗೆ ಆಶ್ರಯದಲ್ಲಿ ಪರಿಶಿಷ್ಟ ವರ್ಗಗಳ ಪಾಲಕರ ವಿದ್ಯಾರ್ಥಿ ನಿಲಯದಲ್ಲಿ ನಡೆದ ಕಾರ್ಗಿಲ್ ವಿಜಯೋತ್ಸವ ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡುತ್ತಾ ಕಾರ್ಗಿಲ್ ಹಿಮಾಚಾದಿತ ಪ್ರದೇಶ ಆರು ತಿಂಗಳ ಕಾಲ ಹಿಮದಿಂದ ಕೂಡಿರುವ ಪ್ರದೇಶದ ಮೇಲೆ ಪಾಕಿಸ್ತಾನದ ಸೈನ್ಯ ವಶಪಡಿಸಿಕೊಂಡಾಗ ಭಾರತೀಯ ಸೈನಿಕರು ಸುಮಾರು 60 ದಿನಗಳ ಕಾಲ ನಿರಂತರವಾಗಿ ಹೋರಾಟ ನಡೆಸಿ ಕಾರ್ಗಿಲ್ ನಲ್ಲಿ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಭಾರತದ ಸೈನ್ಯ ಶಕ್ತಿಯನ್ನು ಜಗತ್ತಿಗೆ ತೋರಿಸಿದ ದಿನ. ಕಾರ್ಗಿಲ್ ಯುದ್ಧದಲ್ಲಿ ತ್ಯಾಗ ಬಲಿದಾನಗೈದ ವೀರ ಸೈನಿಕರಿಗೆ ಗೌರವ ನಮನ ಸಲ್ಲಿಸುವುದು ಹಾಗೂ ಅವರ ಕುಟುಂಬ ವರ್ಗದವರಿಗೆ ಕೋಟ್ಯಾಂತರ ಭಾರತೀಯರ ಆತ್ಮಶಕ್ತಿ ಸದಾಕಾಲ ಇರುತ್ತದೆ ಎಂಬ ದಿವ್ಯ ಸಂದೇಶವನ್ನು ಕಳೆದ 26 ವರ್ಷಗಳಿಂದಲೂ ನಿರಂತರವಾಗಿ ಭಾರತೀಯರು ವೀರ ಸೈನಿಕರಿಗೆ ಅರ್ಪಿಸುತ್ತಿದ್ದಾರೆ. ಭಾರತದ ಜನಸಂಖ್ಯೆಯ ಶೇಕಡ ಐವತ್ತಕ್ಕೂ ಹೆಚ್ಚು ಯುವಶಕ್ತಿ ಇರುವುದು ನಮ್ಮ ದೇಶದಲ್ಲಿ ಮಾತ್ರ . ಪ್ರಪಂಚದ ಹಲವಾರು ದಾಳಿಗಳನ್ನು ಎದುರಿಸಿರುವ ಭಾರತ ತನ್ನ ಸಂಸ್ಕೃತಿ, ಪರಂಪರೆ ಹಾಗೂ ಮೌಲ್ಯಗಳನ್ನು ಎಂದಿಗೂ ಬಿಟ್ಟು ಕೊಟ್ಟಿಲ್ಲ. ತನ್ನ ಶ್ರೇಷ್ಠ ನಾಗರೀಕತೆಯ ಮೂಲಕ ಪ್ರಪಂಚದಲ್ಲಿ ಅಗ್ರಸ್ಥಾನ ಪಡೆದಿದೆ.ಆರ್ಥಿಕವಾಗಿ ಮತ್ತು ವೈಜ್ಞಾನಿಕವಾಗಿ ತುಂಬಾ ಪ್ರಬಲವಾಗಿದೆ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಪಾಕಿಸ್ತಾನಿಗಳು ಕೂರ ಮನಸ್ಥಿತಿಯುಳ್ಳವರಾಗಿದ್ದು ನಮ್ಮ ದೇಶದ ಸೈನಿಕ ಸೌರಭ ಕಾಲಿಯ ರವರನ್ನು ಅಪಹರಣ ಮಾಡಿ ಚಿತ್ರ ಹಿಂಸೆ ನೀಡಿದರು. 21 ದಿನದಲ್ಲಿ ಕಣ್ಣುಗಳನ್ನು ಕಿತ್ತರು ,ಕೈಗಳನ್ನು ಕತ್ತರಿಸಿದರು, ತೀವ್ರ ಹಿಂಸೆ ನೀಡಿದರು. ಆದರೂ ದೇಶಪ್ರೇಮಿಯಾದ ಕಾಲಿಯಾ ಸೈನ್ಯದ ಯಾವುದೇ ಗುಟ್ಟನ್ನು ಬಿಟ್ಟು ಕೊಡದೆ ಪ್ರಾಣ ತ್ಯಾಗ ಮಾಡಿದರು. 58° ಸೆಲ್ಫಿಯರ್ ಚಳಿಯ ಹಿಮಪಾತದಲ್ಲಿ 1999 ಮೇ 3 ರಿಂದ ಜುಲೈ 26ರ ವರೆವಿಗೂ ಕಾರ್ಗಿಲ್ ನಲ್ಲಿ ಹೋರಾಡಿ ಜಯ ತಂದುಕೊಟ್ಟ ಆ ಹುತಾತ್ಮ ಯೋಧರ ತ್ಯಾಗ ಬಲಿದಾನವನ್ನು ಯುವ ಪೀಳಿಗೆ ಎಂದೂ ಮರೆಯುವಂತಿಲ್ಲ, ಸೈನ್ಯಕ್ಕೆ ಸೇರಬಯಸುವ ಯುವಕರು ಅಗ್ನಿಪಥ್ ಅಂತಹ ಸೇನಾಪಡೆಗೆ ಸೇರುವ ಮೂಲಕ ದೇಶ ಸೇವೆಯನ್ನು ಮಾಡಬಹುದು ಎಂದು ಅವರು ಹೇಳಿದರು.

ದಲಿತ ಮುಖಂಡರಾದ ಶ್ರೀ ವೆಂಕಟರಮಣ ಸ್ವಾಮಿ ಮಾತನಾಡಿ ಭಾರತೀಯ ಸೈನಿಕರು ಅಪಾರ ಧೈರ್ಯಶಾಲಿಗಳು . ದೇಶದ ಹಿತ ಕಾಯಲು ತನ್ನನ್ನು ತಾನು ಅರ್ಪಿಸಿಕೊಂಡವರು, 1999ರ ಕಾರ್ಗಿಲ್ ಯುದ್ಧದಲ್ಲಿ ಗೆಲುವು ಸಾಧಿಸಿದ ಹುತಾತ್ಮ ಸೈನಿಕರು ಸದಾ ಸ್ಮರಣೀಯರು .
ಚೀನಾದವರು ನಂಬಿಕೆ ದ್ರೋಹಿಗಳು . ರಾತ್ರೋರಾತ್ರಿ ನಮ್ಮ ದೇಶದ ಸೈನಿಕರ ಮೇಲೆ ದಾಳಿ ನಡೆಸಿದ್ದರು, ಆದರೂ ಆ ದಾಳಿಯನ್ನು ಎದುರಿಸುವ ಸಮರ್ಥ ಸೇನಾನಿಗಳು ಭಾರತದಲ್ಲಿರುವುದರಿಂದ ಅಪಾಯ ಸಂಭವಿಸಲಿಲ್ಲ. ಜಗತ್ತಿನ 57 ಮುಸ್ಲಿಂ ರಾಷ್ಟ್ರಗಳಲ್ಲಿ ಒಂದು ಕೋಟಿಗೂ ಹೆಚ್ಚು ಭಾರತೀಯರು ವಾಸವಾಗಿದ್ದಾರೆ. ನಾವುಗಳು ಪೆಟ್ರೋಲಿಯಂ ಉತ್ಪನ್ನಗಳಿಗಾಗಿ ಆ ರಾಷ್ಟ್ರಗಳನ್ನು ಅವಲಂಬಿಸುತ್ತೇವೆ. ಇಂತಹ ವ್ಯಾವಹಾರಿಕ ಸಂಬಂಧವನ್ನು ಗಟ್ಟಿಗೊಳಿಸುವ ಬದಲು ಶತ್ರುತ್ವವನ್ನು ಸಾಧಿಸುತ್ತಿವೆ. ಇಂದು ನಮ್ಮ ಸೈನ್ಯದ ಬಲ ಸದೃಢವಾಗಿದೆ. ಶತ್ರುಗಳನ್ನು ಎದುರಿಸುವ ಶಕ್ತಿ ಸೈನ್ಯಕ್ಕಿದೆ. 1965ರಲ್ಲಿ ಲಾಲ್ ಬಹುದ್ದೂರ್ ಶಾಸ್ತ್ರಿ ರವರು ಜೈ ಜವಾನ್ ಜೈ ಕಿಸಾನ್ ಎಂಬ ಧ್ಯೇಯ ವಾಕ್ಯವನ್ನು ಕೊಟ್ಟಿದ್ದಾರೆ ಅದರಂತೆ ನಾವೆಲ್ಲರೂ ಸಾಗೋಣ ಎಂದು ಹೇಳಿದರು.

ರಂಗ ದೀವಿಗೆ ಸಂಸ್ಥೆಯ ಅಧ್ಯಕ್ಷರಾದ ಕಲೆ ನಟರಾಜು ರವರು ಪ್ರಾಸ್ತಾವಿಕವಾಗಿ ಮಾತನಾಡಿ 1999 ಲಡಾಖ್ ನ ಕಾರ್ಗಿಲ್ ಜಿಲ್ಲೆಯ ಪರ್ವತ ಶಿಖರಗಳಲ್ಲಿ ಪಾಕಿಸ್ತಾನಿಗಳೊಂದಿಗೆ ಸೆಣೆಸಾಡಿ ಜಯಶೀಲರಾಗಿ ವೀರ ಮರಣ ಹೊಂದಿದ ಆ ಯೋಧರ ನೆನಪಿನ ದಿನವನ್ನು ಕಾರ್ಗಿಲ್ ವಿಜಯ ದಿವಸ ಎಂದು ಆಚರಿಸುತ್ತಿದ್ದೇವೆ.ದೇಶದ ಜನತೆಗೆ ಅನ್ನ ನೀಡುವ ರೈತ ಎಷ್ಟು ಮುಖ್ಯವೋ ದೇಶ ಕಾಯುವ ಸೈನಿಕರು ಅಷ್ಟೇ ಮುಖ್ಯ .ನಾವೆಲ್ಲರೂ ಸ್ವಚ್ಚಂದವಾಗಿ ನೆಮ್ಮದಿಯಿಂದ ಜೀವಿಸಲು ಅವರು ಶ್ರಮಿಸುತ್ತಿದ್ದಾರೆ .ಅಂತವರನ್ನು ಯುವ ಪೀಳಿಗೆ ಮಾದರಿಯಾಗಿ ತೆಗೆದುಕೊಂಡು ದೇಶದ ಹಿತ ಕಾಯಬೇಕು. ಸಾಮಾಜಿಕ ಕಳಕಳಿ ಹೊಂದಿ ಸ್ವಸ್ಥ ಸಮಾಜ ನಿರ್ಮಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ನಿಲಯದ ಮೇಲ್ವಿಚಾರಕರಾದ ಬಸವಣ್ಣರವರು ವಹಿಸಿ ವಿದ್ಯಾರ್ಥಿಗಳು ದೇಶಪ್ರೇಮಿಗಳ ಜೀವನ ಚರಿತ್ರೆಗಳನ್ನು ಓದಬೇಕು ಸಾಧನೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಗಿಲ್ ವಿಜಯೋತ್ಸವದ ಕುರಿತು ರಸಪ್ರಶ್ನೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಹನುಮೇಶ ರಾಯಚೂರು ವಂದಿಸಿದರು.

RELATED ARTICLES
- Advertisment -
Google search engine

Most Popular