ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಸುಮಾರು 40 ವರ್ಷಗಳಿಂದ ಕೆಲ ಖಾಸಗಿ ವ್ಯಕ್ತಿಗಳು ಸರ್ಕಾರಿ ನಾಲಾ ಪರಿವೀಕ್ಷಣಾ ಪಥದ ಸೇವಾ ರಸ್ತೆಯನ್ನು ಒತ್ತುವರಿ ಮಾಡಿಕೊಂಡಿದ್ದರಿಂದ ರೈತರಿಗೆ ತೊಂದರೆಯಾಗುತ್ತಿದೆ ಎಂದು ದೂರು ನೀಡಿದ ಹಿನ್ನಲೆಯಲ್ಲಿ ಹಾರಂಗಿ ಇಲಾಖೆಯ ಅಧಿಕಾರಿಗಳು ತೆರವುಗೊಳ್ಳಿಸಿ ರೈತರಿಗೆ ಅನುಕೂಲ ಕಲ್ಪಿಸಿದ್ದಾರೆ.
ತಾಲೂಕಿನ ಹಂಪಾಪುರ ಗ್ರಾಮದ ಸರ್ವೆ ನಂ 589 ಮತ್ತು 590 ರ ಹಿಡುವಳಿದಾರರು ಸರ್ಕಾರಿ ನಾಲೆಯ ಪರಿವೀಕ್ಷಣಾ ಪಥದ ರಸ್ತೆಯನ್ನು ಒತ್ತುವರಿ ಮಾಡಿದ್ದರಿಂದ ಸುಮಾರು 35 ರಿಂದ 40 ಎಕರೆ ಜಮೀನಿನ ರೈತರು ತಾವು ಬೆಳೆದ ಬೆಳೆಗಳನ್ನು ಸಾಗಾಣಿಕೆ ಮಾಡಲು ಅಡಚಣೆಯಾಗುತ್ತಿತ್ತು ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು ನೊಂದ ರೈತರಿಗೆ ನ್ಯಾಯ ದೊರೆಕಿಸಿಕೊಟ್ಟಿದ್ದಾರೆ.
ರೈತರ ಮನವಿಯ ಮೇರೆಗೆ ಹಾರಂಗಿ ಇಲಾಖೆಯ ಅಧಿಕಾರಿಗಳು ಒತ್ತುವರಿ ಮಾಡಿಕೊಂಡಿರುವ ರೈತರಿಗೆ ಕೂಡಲೇ ತೆರವುಗೊಳ್ಳಿಸುವಂತೆ ನೋಟೀಸ್ ನೀಡಿದ್ದರು ಇದನ್ನು ತಿರಸ್ಕರಿಸಿದ್ದರಿಂದ ತಾಲೂಕು ಸರ್ವೆ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಸಹಯೋಗದಿಂದ ಒತ್ತುವರಿ ತೆರೆವುಗೊಳ್ಳಿಸಿ ಅನ್ಯಾಯಕ್ಕೊಳ್ಳಗಾದ ರೈತರ ನೆರವಿಗೆ ದಾವಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿದ್ದಾರೆ.
ಒತ್ತುವರಿ ತೆರವಿನಿಂದ ಹಂಪಾಪುರ ನಾಲಾ ವ್ಯಾಪ್ತಿಯ ಗ್ರಾಮಗಳಾದ ಬಾಲೂರು, ಗಂಧನಹಳ್ಳಿ, ಹಂಪಾಪುರ ಗ್ರಾಮದ ರೈತರಿಗೆ ಅನುಕೂಲವಾಗಿದ್ದು ಮನವಿಗೆ ಸ್ಪಂದಿಸಿದ ಅಧಿಕಾರಿಗಳನ್ನು ಈ ಭಾಗದ ರೈತರು ಅಭಿನಂದನೆ ಸಲ್ಲಿಸಿದ್ದಾರೆ.
ರೈತರು ಮಾತನಾಡಿ ಇದು ಸುಮಾರು 40 ವರ್ಷಗಳ ಸಮಸ್ಯೆಯಾಗಿದ್ದು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಹತ್ತಾರು ವರ್ಷಗಳಿಂದ ಮನವಿ ಸಲ್ಲಿಸಿದರು ಅಧಿಕಾರಿಗಳು ನಿರ್ಲಕ್ಷ್ಯ ತೋರಿಸುತ್ತಿದ್ದರು ಆದರೆ ಈಗ ನೀರಾವರಿ ಇಲಾಖೆಯ ಎಇಇ ಅಜಾಯ್ ಪಾಷಾ ಅವರು ನಮ್ಮಗಳ ಮನವಿಗೆ ಸ್ಪಂದಿಸಿದ್ದು ಸಮಸ್ಯೆಗೆ ಶಾಶ್ವತ ಪರಿಹಾರ ನೀಡಿರುವುದರಿಂದ ನಾಲಾ ವ್ಯಾಪ್ತಿಯ ರೈತರು ಅವರಿಗೆ ಸದಾ ಕೃತಜ್ಞರಾಗಿರುತ್ತೆವೆ ಎಂದು ತಿಳಿಸಿದರು.
ನೀರಾವರಿ ಇಲಾಖೆಯ ಎಇಇ ಅಯಾಜ್ ಪಾಷಾ, ಇಂಜಿನಿಯರ್ ಕಿರಣ್, ಸರ್ವೆಯರ್ ಗಳಾದ ಭಾಸ್ಕರ್, ಕುಮಾರಸ್ವಾಮಿ, ರೈತರುಗಳಾದ ವಿಜಯ್ ಕುಮಾರ್, ಕೃಷ್ಣೇಗೌಡ, ಲೋಕೇಶ್, ಸೋಮಶೇಖರ್, ಅಲಮೇಲಮ್ಮ, ಜಗದೀಶ್, ಗಣೇಶ್, ದಿನೇಶ್, ಕೆಂಪೇಗೌಡ, ಮಹದೇವ, ಉಮೇಶ್, ಮಂಜುನಾಥ್, ಶ್ರೀನಾಥ್ ಸೇರಿದಂತೆ ಪೊಲೀಸ್ ಇಲಾಖಾ ಸಿಬ್ಬಂದಿಗಳು ಮತ್ತು ರೈತರು ಹಾಜರಿದ್ದರು.