Thursday, July 31, 2025
Google search engine

Homeಅಪರಾಧಕಾನೂನುಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣ: ಮಹತ್ವದ ದಾಖಲೆ ಸಲ್ಲಿಸಲು ಸರ್ಕಾರಕ್ಕೆ ಕಾಲಾವಕಾಶ ನೀಡಿದ ಕೋರ್ಟ್

ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣ: ಮಹತ್ವದ ದಾಖಲೆ ಸಲ್ಲಿಸಲು ಸರ್ಕಾರಕ್ಕೆ ಕಾಲಾವಕಾಶ ನೀಡಿದ ಕೋರ್ಟ್

ಬೆಂಗಳೂರು : ಚಿನ್ನಸ್ವಾಮಿ ಸ್ಟೇಡಿಯಂ ಬಳಿಯ ಕಾಲ್ತುಳಿತ ಘೋರ ಪ್ರಕರಣ ಸಂಬಂಧ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಇಂದು ಕರ್ನಾಟಕ ಹೈಕೋರ್ಟ್‌ ಕೈಗೆತ್ತಿಕೊಂಡಿತ್ತು.

ಇನ್ನು ಸಾರ್ವಜನಿಕ ಸಮಾರಂಭಗಳಲ್ಲಿ ಜನಸಂದಣಿ ನಿಯಂತ್ರಿಸುವುದಕ್ಕೆ ಸಂಬಂಧಿಸಿದಂತೆ ಪ್ರಮಾಣೀಕೃತ ಕಾರ್ಯಾಚರಣೆ ವಿಧಾನದ (ಎಸ್‌ಒಪಿ) ದಾಖಲೆ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ಕಾಲಾವಕಾಶ ನೀಡಿ ವಿಚಾರಣೆಯನ್ನು ಮುಂದೂಡಿತು.

ವಾದ ಆರಂಭಿಸಿದ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು, ನ್ಯಾ.ಕುನ್ಹಾ ಅವರ ಆಯೋಗದ ವರದಿ ಸಿದ್ಧವಾಗಿದೆ. ನ್ಯಾಯಾಲಯ ಸೂಚಿಸಿದರೆ ಮೊದಲಿಗೆ ಪೀಠಕ್ಕೆ ಸಲ್ಲಿಕೆ ಮಾಡಿ, ಆನಂತರ ಸದನದ ಮುಂದೆ ಮಂಡಿಸಲಾಗುವುದು ಎಂದರು. ಆದರೆ, ವಿಚಾರಣಾ ಆಯೋಗ ಕಾಯಿದೆ ಪ್ರಕಾರ ಮಾಡಿ ಎಂದು ಪೀಠ ಹೇಳಿತು. ನಾವು ನ್ಯಾ.ಕುನ್ಹಾ ವರದಿ ಪ್ರಶ್ನಿಸಿದ್ದೇವೆ. ನಮಗೆ ವರದಿಯ ಪ್ರತಿ ನೀಡಿಲ್ಲ ಎಂದು ಡಿಎನ್‌ಎ ಪರ ಹಿರಿಯ ವಕೀಲ ಡಿ ಕೆ ಸಂಪತ್‌ ಕುಮಾರ್‌ ಪೀಠಕ್ಕೆ ತಿಳಿಸಿದರು.

ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ. ಸರ್ಕಾರ ಸರಿಯಾದ ನಿಟ್ಟಿನಲ್ಲಿ ಕ್ರಮಕೈಗೊಂಡಿದೆಯೇ ಎಂಬುವುದನ್ನು ನೋಡುತ್ತಿದ್ದೇವೆ. ಈಗ ನ್ಯಾ.ಕುನ್ಹಾ ವರದಿ ಸಿದ್ಧವಾಗಿದೆ. ಇದರ ಹೊರತಾಗಿ ನಾವು ಬೇರೆ ಕಡೆ ಗಮನಹರಿಸುವುದಿಲ್ಲ ಎಂದು ಪೀಠ ಹೇಳಿತು.

ಕಾಲ್ತುಳಿತ ಪ್ರಕರಣದಲ್ಲಿ ಸಾವನ್ನಪ್ಪಿದ ಸಂತ್ರಸ್ತರಿಗೆ ತಲಾ 25 ಲಕ್ಷ ರೂಪಾಯಿ ನೀಡಿದ್ದೇವೆ. ಈಗ ಆಗಿರುವ ತಪ್ಪನ್ನು ಸರಿಪಡಿಸಿಕೊಂಡು ಮುನ್ನಡೆಯುವ ದಾರಿ ಒಂದೇ ನಮಗೆ ಇದೆ ಎಂದು ಆರ್‌ಸಿಬಿ ಪರ ಹಿರಿಯ ವಕೀಲ ಸಿ ಬಿ ನಂದಕುಮಾರ್ ಅವರು ವಾದ ಮಂಡಿಸಿದರು.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಮಾರ್ಗಸೂಚಿ 2014ಚರಿಂದಲೇ ಜಾರಿಯಲ್ಲಿದೆ. ಇದರಲ್ಲಿ ರಾಜ್ಯ ಸರ್ಕಾರ, ಸ್ಥಳೀಯ ಆಡಳಿತಕ್ಕೆ ಮಾರ್ಗಸೂಚಿಗಳನ್ನು ನೀಡಲಾಗಿದೆ ಎಂದು ಅಮಿಕಸ್‌ ಕ್ಯೂರಿ ಎಸ್‌ ಸುಶೀಲಾ ಹೇಳಿದರು. ಆದರೆ, ಪೊಲೀಸರಿಂದ ಕಾರ್ಯಕ್ರಮ ಆಯೋಜಕರು ಅನುಮತಿ ಪಡೆಯಬೇಕಿತ್ತು. ಪೊಲೀಸರು ಮಾರ್ಗಸೂಚಿ ಇದೆಯೇ ನೋಡಬೇಕಿತ್ತು ಎಂದು ಪೀಠ ಹೇಳಿತು.

‘ಮಾರ್ಗಸೂಚಿ ಸುಧಾರಣೆ ಸರ್ಕಾರ ನಿರ್ಧರಿಸಲಿ’ 2014ರ ಮಾರ್ಗಸೂಚಿ ಇದೆ. ಅದನ್ನು ಸುಧಾರಣೆ ಮಾಡಬೇಕೆ ಎಂಬುವುದನ್ನು ಸರ್ಕಾರ ನಿರ್ಧರಿಸಬೇಕು. ಮುಂದೆ ಇಂಥಹ ಘಟನೆ ನಡೆಯದಂತೆ ಎಚ್ಚರವಹಿಸಬೇಕು ಎಂದು ಅಮಿಕಸ್‌ ಕ್ಯೂರಿ ಎಸ್‌ ಸುಶೀಲಾ ಹೇಳಿದರು. ಈಚೆಗೆ ಹರಿದ್ವಾರದಲ್ಲಿನ ಮಾನಸ ದೇವಿ ದೇವಾಲಯದಲ್ಲಿ ಕಾಲ್ತುಳಿತ ಸಂಭವಿಸಿದೆ. ಜನರು ಸಾವನ್ನಪ್ಪಿದ್ದಾರೆ. ವಿಪತ್ತು ನಿರ್ವಹಣಾ ಘಟಕದ ಬದಲಿಗೆ ತಜ್ಞರ ಮೂಲಕ ಸಮಗ್ರವಾದ ಮಾರ್ಗಸೂಚಿ ರೂಪಿಸಿ, ನಮಗೆ ಸಲ್ಲಿಸಬೇಕು ಎಂದು ಪೀಠ ಸೂಚಿಸಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 35, ಸಾವಿರ ಜನರು ಮಾತ್ರ ಕೂರಬಹುದು. ಆದರೆ, ಕಾರ್ಯಕ್ರಮಕ್ಕೆ 3 ಲಕ್ಷ ಜನ ಬಂದಿದ್ದರು. ನೂಕಾಟ, ತಳ್ಳಾಟದಿಂದ ಘಟನೆ ನಡೆದಿದೆ ಎಂದು ಎಜಿ ಸ್ಪಷ್ಟನೆ‌ ನೀಡಿದರು. ವಿಚಾರಣಾ ಆಯೋಗದ ವರದಿಯು ಬಹಿರಂಗವಾಗುವ ಸಮಯಕ್ಕೆ ಬಹಿರಂಗವಾಗಲಿದೆ. ಮುಂದೆ ಈ ರೀತಿಯ ಘಟನೆ ನಡೆಯದಂತೆ ತಡೆಯಲು ಏನು ಮಾಡಬೇಕು ಅದಕ್ಕೆ ನೀವು ನ್ಯಾಯಾಲಯಕ್ಕೆ ಸಲಹೆ ನೀಡಬಹುದು ಎಂದು ಪೀಠ ಹೇಳಿದೆ‌.

ಸಾರ್ವಜನಿಕ ಸಮಾರಂಭಗಳಲ್ಲಿ ಜನಸಂದಣಿ ನಿಯಂತ್ರಿಸುವುದಕ್ಕೆ ಸಂಬಂಧಿಸಿ ಪ್ರಮಾಣೀಕೃತ ಕಾರ್ಯಾಚರಣೆ ವಿಧಾನದ ದಾಖಲೆ ಸಲ್ಲಿಸಲು ರಾಜ್ಯ ಸರ್ಕಾರ ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ಕಾಲಾವಕಾಶ ನೀಡಿ ನ್ಯಾಯಾಲಯ. ವಿಚಾರಣೆ ಮುಂದೂಡಿದೆ.

RELATED ARTICLES
- Advertisment -
Google search engine

Most Popular