ಹಾವೇರಿ : ಪತಿಗೆ ಸಾಲಗಾರರ ಕಿರುಕುಳದಿಂದ ಬೇಸತ್ತು ಪತ್ನಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಕೋಟಿಹಳ ಗ್ರಾಮದಲ್ಲಿ ನಡೆದಿದೆ. ಪತಿಗೆ ಸಾಲಗಾರರ ಕಿರುಕುಳದಿಂದ ಬೇಸತ್ತು ಕೋಟಿಹಾಳ ಗ್ರಾಮದ ಬಳಿ ತುಂಗಭದ್ರಾ ನದಿಗೆ ಹಾರಿ ಪತ್ನಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ತುಂಗಭದ್ರಾ ನದಿಯ ನಡು ನೀರಲ್ಲಿ ಸಿಲುಕಿದ್ದ ರೂಪ ಆಮ್ಲೆರ್ (40) ಮಾಡಲಾಗಿದೆ. ಗಂಡನಿಗೆ ಸಾಲಗಾರರು ಕಿರುಕುಳ ಕೊಡುತ್ತಿದ್ದರು. ನಿನ್ನೆ ರಾತ್ರಿ ತುಂಗಭದ್ರ ನದಿಗೆ ರೂಪ ಹಾರಿದ್ದಾರೆ. ಹಾವೇರಿ ಜಿಲ್ಲೆಯ ಹರಟ್ಟಿಹಳ್ಳಿ ಮೂಲದ ರೂಪ ಅಂಬ್ಲೆರ್ ರಕ್ಷಣೆ ಮಾಡಲಾಗಿದೆ. ಇಂದು ಬೆಳಿಗ್ಗೆ ಗ್ರಾಮದ ಬಳಿ ಜಮೀನಿನ ಕಡೆಗೆ ರೈತನೊಬ್ಬ ತೆರಳುತ್ತಿದ್ದ ಈ ವೇಳೆ ರಕ್ಷಣೆಗೆ ಕೋರಿ ಕೂಗಿದ್ದಾರೆ. ಬಳಿಕ ರೈತ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಸ್ಥಳಕ್ಕೆ ಆಗಮಿಸಿ ಪೊಲೀಸರು ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ.