Saturday, August 2, 2025
Google search engine

Homeರಾಜ್ಯಸುದ್ದಿಜಾಲಧರ್ಮಸ್ಥಳ ಪ್ರಕರಣ: 6ನೇ ಸ್ಥಳದಲ್ಲಿ ಕಳೇಬರದ ಅವಶೇಷ ಪತ್ತೆ?

ಧರ್ಮಸ್ಥಳ ಪ್ರಕರಣ: 6ನೇ ಸ್ಥಳದಲ್ಲಿ ಕಳೇಬರದ ಅವಶೇಷ ಪತ್ತೆ?

ಮಂಗಳೂರು (ದಕ್ಷಿಣ ಕನ್ನಡ): ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಆತಂಕಕಾರಿ ಅಪರಾಧ ಕೃತ್ಯದ ಶೋಧ ಕಾರ್ಯಾಚರಣೆ ತೀವ್ರಗೊಂಡಿದ್ದು, ಇಂದು 3ನೇ ದಿನದ ಕಾರ್ಯಾಚರಣೆಯಲ್ಲಿ ನೇತ್ರಾವತಿ ನದಿಯ ಬಳಿಯ ಆರನೇ ಸ್ಥಳದಲ್ಲಿ ಕೆಲ ಎಲುಬಿನ ಅವಶೇಷಗಳು ಪತ್ತೆಯಾಗಿರುವ ಮಾಹಿತಿ ಲಭ್ಯವಾಗಿದೆ.

ದೂರುದಾರನು ಗುರುತಿಸಿರುವ 13 ಸ್ಥಳಗಳಲ್ಲಿ ಶೋಧ ನಡೆಯುತ್ತಿದ್ದು, ಈಗಾಗಲೇ ಐದು ಸ್ಥಳಗಳಲ್ಲಿ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ. ಇಂದು ಬೆಳಗ್ಗೆ ಕಾರ್ಯಾಚರಣೆ ಆರಂಭಿಸಿದ ಎಸ್ಐಟಿ, ಆರನೇ ಸ್ಥಳದಲ್ಲಿ ಅಗೆಯುವ ವೇಳೆ ಕೆಲವು ಎಲುಬುಗಳ ಚೂರುಗಳು ಸಿಕ್ಕಿರಬಹುದೆಂದು ಶಂಕೆ ವ್ಯಕ್ತವಾಗಿದೆ.

ಈ ಬಗ್ಗೆ ಎಸ್ಐಟಿ ಅಧಿಕಾರಿಗಳು ಯಾವುದೇ ಅಧಿಕೃತ ದೃಢೀಕರಣ ನೀಡಿಲ್ಲ. ಮೃತದೇಹ ಹೂತು ಹಾಕಲಾಗಿದೆ ಎನ್ನಲಾದ ಈ ಪ್ರಕರಣ ತೀವ್ರ ಕುತೂಹಲ ಕೆರಳಿಸಿದ್ದು, ಪರಿಶೀಲನೆ ಕಾರ್ಯ ಮುಂದುವರೆದಿದೆ.

RELATED ARTICLES
- Advertisment -
Google search engine

Most Popular