Saturday, August 2, 2025
Google search engine

Homeರಾಜ್ಯಸುದ್ದಿಜಾಲ10ರಂದು ಸಾಲಿಗ್ರಾಮದಲ್ಲಿ ಬೃಹತ್ ಬಸವ ಜಯಂತಿ ಕಾರ್ಯಕ್ರಮ: ಗ್ರಾಮೀಣ ಜನತೆಗೆ ಬಸವ ರಥದ ಮೂಲಕ ಆಹ್ವಾನ

10ರಂದು ಸಾಲಿಗ್ರಾಮದಲ್ಲಿ ಬೃಹತ್ ಬಸವ ಜಯಂತಿ ಕಾರ್ಯಕ್ರಮ: ಗ್ರಾಮೀಣ ಜನತೆಗೆ ಬಸವ ರಥದ ಮೂಲಕ ಆಹ್ವಾನ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ: 10 ರಂದು ಸಾಲಿಗ್ರಾಮದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಮತ್ತು ವೀರಶೈವ ಲಿಂಗಾಯತ ಸಂಘಟನೆಗಳ ಒಕ್ಕೂಟದಿಂದ ನಡೆಯುವ ಬಸವ ಜಯಂತಿ ಹಿನ್ನಲೆಯಲ್ಲಿ ತಾಲೂಕಿನ ವ್ಯಾಪ್ತಿಯ ಗ್ರಾಮಗಳಲ್ಲಿ ಬಸವ ರಥದ ಮೂಲಕ ಸಾರ್ವಜನಿಕರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು.

ಸಾಲಿಗ್ರಾಮ ತಾಲೂಕಿನ‌ ಹೊಸೂರು, ಹಳಿಯೂರು ಬಡಾವಣೆ , ಹಳಿಯೂರು,ಸೋಮನಹಳ್ಳಿ, ಕುಪ್ಪೆ ಮುದ್ದನಹಳ್ಳಿ, ಹೋಸಕೋಟೆ ನಿಜಗನಹಳ್ಳಿ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಬಸವರಥದ ರಥದೊಂದಿಗೆ ಕಾರ್ಯಕ್ರಮದ ಪ್ರಚಾರವನ್ನು ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ ಮಾತನಾಡಿ ಅಂದು ಸಾಲಿಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ಬೆಳಿಗ್ಗೆ 11 ಗಂಟೆಗೆ ನಡೆಯುವ ಕಾರ್ಯಕ್ರಮದ ಸಾನಿಧ್ಯವನ್ನು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಜಿ, ಸಿದ್ದಮಠದ ಶ್ರೀ ಸಿದ್ದಲಿಂಗ ವಹಿಸಲಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಅರಣ್ಯ ಖಾತೆ ಸಚಿವ ಈಶ್ವರ ಖಂಡ್ರೆ ಮಾಡಲಿದ್ದು
ಪ್ರತಿಭಾ ಪುರಸ್ಕಾರವನ್ನು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಶಂಕರ್‌ಬಿದರಿ ನೇರವೇರಿಸಲಿದ್ದು ಸಾಧಕರಿಗೆ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಸನ್ಮಾನ ಮಾಡಲಿದ್ದು ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ, ಶಾಸಕ ಡಿ.ರವಿಶಂಕರ್, ಮಾಜಿ ಸಚಿವರಾದ ಸಾ.ರಾ.ಮಹೇಶ್, ಎಚ್.ವಿಶ್ವನಾಥ್, ಶಾಸಕ ಗಣೇಶ್ ಪ್ರಸಾದ್, ಮಾಜಿ ಎಂಎಲ್ಸಿ ತೋಂಟದಾರ್ಯ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಮಹದೇವಸ್ವಾಮಿ ಮಾಹಿತಿ ನೀಡಿದರು.

ಭಾನುವಾರ ಬೆಳಿಗ್ಗೆ 8 ಗಂಟೆಗೆ ಶ್ರೀ ಯೋಗನರಸಿಂಹ ಸ್ವಾಮಿ ದೇವಾಲದಿಂದ ಕಾರ್ಯಕ್ರಮದ ವೇದಿಕೆ ವರಿಗೆ ಬೃಹತ್ ಮೆರೆವಣಿಗೆ ಕಾರ್ಯಕ್ರಮನ್ನು ಹಮ್ಮಿಕೊಳ್ಳಲಾಗಿದ್ದು ಈ ಕಾರ್ಯಕ್ರಮಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪ್ರಚಾರ ಸಮಿತಿ ಅಧ್ಯಕ್ಷ ಸರಗೂರು ನಟರಾಜು, ಕೆ.ಆರ್.ನಗರ- ಸಾಲಿಗ್ರಾಮ ತಾಲೂಕು ಯುವ ಘಟಕದ ಅಧ್ಯಕ್ಷ ಕುಮಾರಸ್ವಾಮಿ, ಕುಪ್ಪೆ ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಕುಪ್ಪೆ ನವೀನ್, ಮಾಯಿಗೌಡನಹಳ್ಳಿ ಗ್ರಾ.ಪ.. ಮಾಜಿ ಸದಸ್ಸ ಎಂ.ಎಸ್.ಮಲ್ಲಿಕಾರ್ಜುನ, ಹನಸೋಗೆ ಗ್ರಾ.ಪಂ.ಮಾಜಿ ಸದಸ್ಯ ಕರ್ತಾಳು ನಟಬುದ್ದಿ, ವೀರಶೈವ ಸಮಾಜದ ಮುಖಂಡರಾದ ಕೊಳೂರು ಪ್ರಕಾಶ್, ಗಿರೀಶ್,ನಾಗರಾಜು, ರೇವಣ್ಣ, ಹಳಿಯೂರು ರೇವಣ್ಣ, ಹೊಸೂರು ಕೇಬಲ್ ನಾಗೇಂದ್ರ, ಹಾಡ್ಯ ಹರೀಶ್, ವಡ್ಡರಹಳ್ಳಿ ಪುಟ್ಟರಾಮಣ್ಣ ಸೇರಿದಂತೆ ಮತ್ತಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular