ಮಂಗಳೂರು (ದಕ್ಷಿಣ ಕನ್ನಡ): ಧರ್ಮಸ್ಥಳದ ಸುತ್ತ ಶಂಕಿತ ಅಸಹಜ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಶೋಧ ಕಾರ್ಯಾಚರಣೆ ಇಂದು ನೇತ್ರಾವತಿ ಅರಣ್ಯದಲ್ಲಿ ನಡೆದಿದ್ದು, 7ನೇ ಹಾಗೂ 8ನೇ ಸ್ಥಳಗಳಲ್ಲಿ ಯಾವುದೇ ಕುರುಹುಗಳು ಸಿಗಲಿಲ್ಲ.
ಹಲವಾರು ಮೃತದೇಹ ಹೂತು ಹಾಕಿದ ಪ್ರಕರಣ ಸಂಬಂಧ ಶುಕ್ರವಾರ ಸಂಜೆ ಎಸ್.ಐ.ಟಿ ತಂಡದ ಅಧಿಕಾರಿಗಳು ಧರ್ಮಸ್ಥಳ ಗ್ರಾಮ ಪಂಚಾಯತ್ ಗೆ ಆಗಮಿಸಿ 1995 ರಿಂದ 2014ರ ವರೆಗಿನ ಯುಡಿಆರ್ (ಅಸಹಜ ಸಾವು) ದಾಖಲೆಗಳನ್ನು ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಶನಿವಾರ ಮತ್ತೊಂದು ಶೋಧ ನಡೆಯಲಿದೆ.