ಮೈಸೂರು: ಭಾರತದ ಪ್ರಮುಖ ಅಗರಬತ್ತಿ ತಯಾರಕರಾದ ಎನ್‌ಆರ್ಗ್ರೂಪ್ ಅಧೀನದ ಮೈಸೂರು ವಾರಿಯರ್ಸ್‌ನ ಮಹಿಳಾ ಕ್ರಿಕೆಟ್ತಂಡ ಚೊಚ್ಛಲ ಮಹಾರಾಣಿ ಟ್ರೋಫಿ ಕೆಎಸ್‌ಸಿಎಟಿ20 2025 ಪಂದ್ಯಾವಳಿಗಾಗಿ ತನ್ನ ತಂಡದ ನಾಯಕಿ ಮತ್ತು 15 ಮಂದಿಯ ಸಂಪೂರ್ಣ ತಂಡವನ್ನು ಘೋಷಿಸಿದೆ.
ಮೈಸೂರಿನ ರೀಜೆಂಟಾ ಸೆಂಟ್ರಲ್ಜವಾಜಿಯಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಭಾರತ ತಂಡದ ಟೆಸ್ಟ್ಕ್ರಿಕೆಟ್ಆಟಗಾರ್ತಿ ಶುಭಾಸತೀಶ್ ಅವರನ್ನು ಮೈಸೂರು ವಾರಿಯರ್ಸ್ಮಹಿಳಾ ತಂಡದ ನಾಯಕಿಯಾಗಿ ಘೋಷಿಸಲಾಯಿತು. ಜೊತೆಗೆ ತಂಡದ 16 ಮಂದಿ ಮಹಿಳಾ ಆಟಗಾರ್ತಿಯರನ್ನು ಪರಿಚಯಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಸಿದ್ಧ ಸಂಗೀತ ನಿರ್ದೇಶಕ ರಘುದೀಕ್ಷಿತ್ಸಂಯೋಜಿಸಿರುವ ಟೀಮ್ಆಂಥಮ್ಅನ್ನು ಕೂಡ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮೈಸೂರು ವಾರಿಯರ್ಸ್‌ನ ಮಾಲೀಕರು ಮತ್ತು ಸೈಕಲ್ಪ್ಯೂ ರ್ಅಗರಬತ್ತಿಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಅರ್ಜುನ್ರಂಗಾ ಅವರು, ಚೊಚ್ಛಲ ಮಹಾರಾಣಿ ಟ್ರೋಫಿಯಲ್ಲಿ ಮೈಸೂರು ವಾರಿಯರ್ಸ್ತಂಡವನ್ನು ಪ್ರತಿನಿಧಿಸಲಿರುವ ಮಹಿಳಾ ಆಟಗಾರರ ತಂಡವನ್ನು ಘೋಷಿಸಿರುವುದು ಸಂತೋಷತಂದಿದೆ. ಭಾರತ ತಂಡಕ್ಕೆ ಆಡಿರುವ ಶುಭಾಸತೀಶ್ ಅವರು ನಮ್ಮ ತಂಡದ ನಾಯಕಿಯಾಗಿರುವುದಕ್ಕೆ ಹೆಮ್ಮೆ ಪಡುತ್ತೇವೆ. ನಮ್ಮಸಂಸ್ಥೆಯು ಮಹಿಳಾ ಕ್ರಿಕೆಟ್ಗೆ ಕೊಡುಗೆ ನೀಡಲು ಉತ್ಸುಕವಾಗಿದೆ”ಎಂದರು.
ಜೊತೆಗೆ ಶಿಕ್ಷಣ ಮತ್ತು ಕ್ರೀಡೆಯ ಮೂಲಕ ಬಾಲಕಿಯರನ್ನು ಸಬಲೀಕರಣಮಾಡುವ ಉದ್ದೇಶದ ಭಾಗವಾಗಿ ಮೈಸೂರು ವಾರಿಯರ್ಸ್ತಂಡವು ಮೈಸೂರಿನ ಕೇರ್ಗಳ್ಳಿಯಲ್ಲಿರುವ ಕಸ್ತೂರ್ಬಾಗಾಂಧಿ ಬಾಲಿಕಾ ವಿದ್ಯಾಲಯದ ಜೊತೆ ಸದುದ್ದೇಶದ ಪಾಲುದಾರಿಕೆಯನ್ನು ಮಾಡಿಕೊಂಡಿರುವುದಾಗಿ ಘೋಷಿಸಿದೆ. ಈ ಮೂಲಕ ತಂಡವು ಗುಣಮಟ್ಟದ ಕ್ರೀಡಾಸಲಕರಣೆಗಳನ್ನು ಒದಗಿಸುವ ಮೂಲಕ ಯುವಬಾಲಕಿಯರನ್ನು ಸಬಲೀಕರಿಸುವ ತಮ್ಮಬದ್ಧತೆಯನ್ನು ಮರುದೃಢಪಡಿಸಿದೆ. ಕಸ್ತೂರ್ಬಾಗಾಂಧಿ ಬಾಲಿಕಾ ವಿದ್ಯಾಲಯಗಳು ಭಾರತಸರ್ಕಾರ ಆರಂಭಿಸಿರುವ ವಸತಿಶಾಲೆಗಳಾಗಿದ್ದು, ವಿಶೇಷವಾಗಿಪರಿಶಿಷ್ಟಜಾತಿ (ಎಸ್ಸಿ), ಪರಿಶಿಷ್ಟಪಂಗಡ (ಎಸ್ಟಿ) ಮತ್ತುಇತರಹಿಂದುಳಿದವರ್ಗಗಳ (ಓಬಿಸಿ) ಹಾಗೂ ಅಲ್ಪಸಂಖ್ಯಾತಸಮುದಾಯಗಳ ಬಾಲಕಿಯರಿಗೆ ಗುಣಮಟ್ಟದ ಶಿಕ್ಷಣವನ್ನುಒದಗಿಸುವ ಗುರಿಯನ್ನು ಹೊಂದಿವೆ. ಜಿಲ್ಲಾಮಟ್ಟದಲ್ಲಿ ಸ್ಪರ್ಧಿಸಲು ತಯಾರಿನಡೆಸುತ್ತಿರುವ ವಿದ್ಯಾರ್ಥಿನಿಯರು ಈಗ ತಮ್ಮ ಶಾಲೆಯಲ್ಲಿಯೇ ಅತ್ಯುತ್ತಮ ಕ್ರೀಡಾಸಲಕರಣೆಗಳೊಂದಿಗೆ ತರಬೇತಿ ಪಡೆಯಬಹುದಾಗಿದ್ದು, ಇದರಿಂದ ಅವರು ಆತ್ಮವಿಶ್ವಾಸದಿಂದ ಸ್ಪರ್ಧಿಸಬಹುದಾಗಿದೆ ಎಂದರು.
ಮಹಾರಾಣಿ ಟ್ರೋಫಿಕೆಎಸ್‌ಸಿಎಟಿ20 2025 ಪಂದ್ಯಾವಳಿಯು ಆಗಸ್ಟ್ 5ರಿಂದ 10ರವರೆಗೆ ಬೆಂಗಳೂರಿನ ಆಲೂರು ಕ್ರೀಡಾಂಗಣದಲ್ಲಿ ನಡೆಯಲಿದ್ದು, ಈಪಂದ್ಯಾವಳಿಯಲ್ಲಿ ಮೈಸೂರು ವಾರಿಯರ್ಸ್, ಹುಬ್ಬಳ್ಳಿ ಟೈಗರ್ಸ್, ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್, ಮಂಗಳೂರು ಡ್ರಾಗನ್ಸ್ಮತ್ತು ಶಿವಮೊಗ್ಗಲಯನ್ಸ್ತಂಡಗಳು ಪರಸ್ಪರ ಸೆಣೆಸಲಿವೆ. ಮೈಸೂರು ವಾರಿಯರ್ಸ್ತಂಡವನ್ನು ಮುಖ್ಯಕೋಚ್ಕರುಣಾಜೈನ್ಮುನ್ನಡೆಸಲಿದ್ದಾರೆ.
ಬ್ಯಾಟ್ಬ್ರಿಕ್ಸ್7, ಕ್ಯಾಂಪಾ, ಸಂಕಲ್ಪ, 360 ಒನ್, ಸಿಂಪೋಲೊ, ಕೊನೆ ಮತ್ತು ಭಾರತ್ಇಂಟರ್‌ನ್ಯಾಷನಲ್ಟ್ರಾವೆಲ್ಸ್ (ಬಿಐಟಿ) ಈ ಆವೃತ್ತಿಪಂದ್ಯಾವಳಿಯನ್ನು ಬೆಂಬಲಿಸುತ್ತಿವೆ.