Wednesday, August 6, 2025
Google search engine

Homeಅಪರಾಧಚಿತ್ರದುರ್ಗದಲ್ಲಿ ಭೀಕರ ಅಪಘಾತ: ಎರಡು ಬಸ್‌ಗಳ ನಡುವೆ ಸಿಲುಕಿ ಆಟೋ ನಜ್ಜುಗುಜ್ಜು : ಐವರಿಗೆ ಗಂಭೀರ...

ಚಿತ್ರದುರ್ಗದಲ್ಲಿ ಭೀಕರ ಅಪಘಾತ: ಎರಡು ಬಸ್‌ಗಳ ನಡುವೆ ಸಿಲುಕಿ ಆಟೋ ನಜ್ಜುಗುಜ್ಜು : ಐವರಿಗೆ ಗಂಭೀರ ಗಾಯ

ಚಿತ್ರದುರ್ಗ : ಚಿತ್ರದುರ್ಗದಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಎರಡು ಬಸ್ ಗಳ ನಡುವೆ ಸಿಲುಕಿ ಆಟೋ ಅಪ್ಪಚ್ಚಿಯಾಗಿದೆ. ಐವರು ಗಂಭೀರವಾಗಿ ಗಾಯಗೊಂಡ ಶಾಕಿಂಗ್ ಘಟನೆ ನಡೆದಿದೆ.

ಅಪಘಾತದ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆಟೋಗೆ ಹಿಂಭಾಗದಿಂದ ಬಂದ ಖಾಸಗಿ ಬಸ್ ಡಿಕ್ಕಿಯಾಗಿ ಮುಂದೆ ತೆರಳುತ್ತಿದ್ದ ಸಾರಿಗೆ ಬಸ್‍ಗೆ ಅಪ್ಪಳಿಸಿದೆ. ಇದರಿಂದ ಎರಡು ಬಸ್‍ಗಳ ನಡುವೆ ಆಟೋ ಸಿಲುಕಿದೆ. ಪರಿಣಾಮ ಆಟೋ ಚಾಲಕ ಸೇರಿದಂತೆ ಐವರಿಗೆ ಗಂಭೀರ ಗಾಯಗಳಾಗಿವೆ.

ಇನ್ನು,ಪ್ರವಾಸಕ್ಕೆ ಹೋಗುತ್ತಿದ್ದ ಖಾಸಗಿ ಬಸ್‌ ಒಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಬಸ್‌ಲ್ಲಿದ್ದ 25 ಕ್ಕೂ ಅಧಿಕ ಜನರಿಗೆ ಗಾಯಗಳಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದೇವನ ಗೂಲ್‌ ಗ್ರಾಮದ ಬಳಿ ನಡೆದಿದೆ.

ದುರ್ಘಟನೆ ಇಂದು ಮುಂಜಾನೆ ನಡೆದಿದೆ. ಬೆಂಗಳೂರಿನ ಎಂಎನ್‌ಸಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಗಳು ವೀಕೆಂಡ್‌ ಹಿನ್ನೆಲೆ ಪ್ರವಾಸ ಹಾಗೂ ಟ್ರಕಿಂಗ್‌ ಮಾಡಲು ಕುದುರೆಮುಖದ ನೇತ್ರಾವತಿ ಪೀಕ್‌ ಕಡೆ ಖಾಸಗಿ ಬಸ್‌ ಮೂಲಕ ತೆರಳುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಬಸ್‌ ಪಲ್ಟಿಯಾಗಿದೆ.

ಘಟನೆಯಲ್ಲಿ 25 ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಬಸ್‌ ಅಪಘಾತವಾಗುತ್ತಿದ್ದಂತೆ ಸ್ಥಳೀಯರು ಗಾಯಾಳುಗಳನ್ನು ಚಿಕ್ಕಮಗಳೂರು ಹಾಗೂ ಮೂಡಿಗೆರೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆ ಬಗ್ಗೆ ಮೂಡಿಗೆರೆ ಪೊಲೀಸ್‌ ಠಾಣಾ ವ್ಯಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಚಿತ್ರದುರ್ಗ ಸರ್ಕಾರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ನಗರದ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎರಡು ಬಸ್ ಡ್ರೈವರ್ ಗಳನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಗಾಯಳುಗಳ ಕುಟುಂಬಸ್ಥರ ದುಃಖ ಮುಗಿಲುಮುಟ್ಟಿದ್ದು, ಸೂಕ್ತ ಪರಿಹಾರ ನೀಡುವಂತೆ ಒತ್ತಾಯ ಮಾಡಿದ್ದಾರೆ.

ಮತ್ತೊಂದೆಡೆ, ಕಿಲ್ಲರ್ ಬಿಎಂಟಿಸಿ ಬಸ್ ಗೆ ಮತ್ತೊಂದು ಬಲಿ ಪಡೆದಿದೆ. ಪೀಣ್ಯ 2ನೇ ಹಂತದಿಂದ ಚಾಲಕನ ಅಜಾಗರೂಕತೆಯಿಂದ ಪುಟ್ ಪಾತ್ ಮೇಲೆ ಬಸ್ ನುಗಿದ್ದು, ಪರಿಣಾಮ ಒಂದು ಸಾವನ್ನಪ್ಪಿದ್ದು,  ಮಗು ಸೇರಿ ನಾಲ್ವರು ಗಂಭೀರ ಗಾಯಗಳಾಗಿವೆ.

22 ನೇ ಡಿಪೋಗೆ ಸೇರಿದ್ದ KA.51,4170 ನಂಬರ್ ನ ಎಲೆಕ್ಟ್ರಿಕ್ ಬಸ್ ಪೀಣ್ಯ 2ನೇ ಹಂತದಿಂದ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಹೋಗುತ್ತಿತ್ತು. ಈ ವೇಳೆ ಚಾಲಕನ ಅಜಾಗರೂಕತೆಯಿಂದ ಬಸ್ ರಸ್ತೆ ಬಿಟ್ಟು ಪಕ್ಕದಲ್ಲಿದ್ದ ಪುಟ್ ಪಾತ್ ಮೇಲೇರಿದೆ.

ಈ ವೇಳೆ ಪುಟ್ ಪಾತ್ ಮೇಲೆ ಇದ್ದ ಸಣ್ಣ ಕ್ಯಾಂಟೀನ್ ನಲ್ಲಿ ಜನ ಟೀ, ಕಾಫೀ ಕುಡಿಯಲು ಬಂದಿದ್ದರು. ಇದೇ ವೇಳೆ ಬಸ್ ಏಕಾಏಕಿ ಕ್ಯಾಂಟೀನ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಒಂದು ಮಗು ಸ್ಥಳದಲ್ಲೇ ಸಾವನ್ನಪ್ಪಿದ್ದು, ನಾಲ್ವರು ಗಂಭೀರ ಗಾಯಗೊಂಡಿದ್ದಾರೆ.

ಇನ್ನು ಬಿಎಂಟಿಸಿ ಬಸ್ ಡಿಕ್ಕಿಯ ರಭಸಕ್ಕೆ ಕ್ಯಾಂಟೀನ್ ಸಂಪೂರ್ಣ ನಾಶವಾಗಿದ್ದು, ಬಸ್ ನ ಮುಂಭಾಗ ಕೂಡ ಜಖಂ ಆಗಿದೆ. ಸದ್ಯ ಚಾಲಕನ ಅಜಾಗರೂಕತೆಯಿಂದಲೇ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಸದ್ಯ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

RELATED ARTICLES
- Advertisment -
Google search engine

Most Popular