Monday, August 11, 2025
Google search engine

Homeರಾಜ್ಯಸುದ್ದಿಜಾಲರಕ್ಷಾಬಂಧನ - ಭಾರತೀಯ ಸಂಸ್ಕೃತಿಯ ಮೇರು ತತ್ವ, ಮಾನವೀಯ ಮೌಲ್ಯಗಳ ಪ್ರತಿ ಬಿಂಬ: ಸಂಸ್ಕೃತಿ ಚಿಂತಕ...

ರಕ್ಷಾಬಂಧನ – ಭಾರತೀಯ ಸಂಸ್ಕೃತಿಯ ಮೇರು ತತ್ವ, ಮಾನವೀಯ ಮೌಲ್ಯಗಳ ಪ್ರತಿ ಬಿಂಬ: ಸಂಸ್ಕೃತಿ ಚಿಂತಕ ಸುರೇಶ್ ಎನ್ ಋಗ್ವೇದಿ

ಚಾಮರಾಜನಗರ: ರಕ್ಷಾಬಂಧನ ಭಾರತೀಯ ಸಂಸ್ಕೃತಿಯ ಮೇರು ತತ್ವ. ಪ್ರಪಂಚವೇ ಒಂದು ಕುಟುಂಬ ಎಂದು ಭಾವಿಸಿದ ಭಾರತೀಯ ಸನಾತನ ಧರ್ಮದ ಮೌಲ್ಯವನ್ನು ಜಗತ್ತಿಗೆ ಎಂದಿಗೂ ಬಿಂಬಿಸುತ್ತಿರುವುದು ಭಾರತವೆಂದು ಹೆಮ್ಮೆಯಿಂದ ಹೇಳಬಹುದು ಎಂದು ಸಂಸ್ಕೃತಿ ಚಿಂತಕ ಸುರೇಶ್ ಎನ್ ಋಗ್ವೇದಿ ತಿಳಿಸಿದರು.

ಅವರು ನಗರದ ಜೈ ಹಿಂದ್ ಪ್ರತಿಷ್ಠಾನ ಹಾಗು ಋಗ್ವೇದಿ ಯೂತ್ ಕ್ಲಬ್ ಜೈ ಹಿಂದ್ ಕಟ್ಟೆಯಲ್ಲಿ ಹಮ್ಮಿಕೊಂಡಿದ್ದ ರಕ್ಷಾ ಬಂಧನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ ರಕ್ಷಾಬಂಧನವೂ ಸ್ನೇಹ ,ವಿಶ್ವಾಸ ,ನಂಬಿಕೆ ,ಗೌರವ ಪರಸ್ಪರ ಅರ್ಥ ಮಾಡಿಕೊಳ್ಳುವುದು ಹಾಗೂ ಬದುಕಿನ ಸಂಪೂರ್ಣ ಪೂರ್ಣತೆಯ ಶ್ರೇಷ್ಠ ಬಂಧನವಾಗಿದೆ. ಭಾರತದ ಪುರಾಣಗಳಲ್ಲಿ ಮಹಾಕಾವ್ಯಗಳಲ್ಲಿ ರಕ್ಷಾಬಂಧನದ ಅನೇಕ ಮಹತ್ವಪೂರ್ಣವಾದ ಮಾರ್ಗದರ್ಶನ ಮೌಲ್ವಿಕ ದರ್ಶನ ನಮಗೆ ದೊರಕುತ್ತದೆ. ಶ್ರೀ ಕೃಷ್ಣ ಪರಮಾತ್ಮ ಹಾಗೂ ದ್ರೌಪದಿಯ, ಕೃಷ್ಣ ಸುಧಾಮರ ಚಿತ್ರಣಗಳು ನಮಗೆ ಸದಾ ಸರಿದಾರಿಯಲ್ಲಿ ಹೋಗಲು ಸಹಕಾರಿಯಾಗಿದೆ. ರಕ್ಷಾಬಂಧನದ ಅರ್ಥಪೂರ್ಣವಾದ ತತ್ವವನ್ನು ಯುವಕರಿಗೆ ಮತ್ತು ಮನೆಮನೆಗಳಿಗೆ ತಲುಪಿಸುವ ಕಾರ್ಯವಾಗಬೇಕು .ಪ್ರತಿ ಮನೆಗಳಲ್ಲೂ ಮನಸ್ಸುಗಳು ಪ್ರೀತಿಯಿಂದ ಸ್ನೇಹದಿಂದ ಬೆಳೆಯುವ ವಾತಾವರಣ ಸೃಷ್ಟಿಯಾಗಬೇಕು. ಸಾಹಿತ್ಯದ ಚಿಂತನೆ ಪುರಾಣಗಳ! ಅರ್ಥ ಇತಿಹಾಸ ತಿಳಿಸುವ ಸಂಘಟನೆಗಳು ಹೆಚ್ಚಾಗಬೇಕು ಎಂದು ತಿಳಿಸಿದರು.

ರಕ್ಷಾಬಂಧನವನ್ನು ಕಟ್ಟುವ ಮೂಲಕ ಪರಸ್ಪರ ಸೌಹಾರ್ದ ,ಭಾವೈಕ್ಯತೆ ,ಏಕತೆಯ ಸ್ವರೂಪವಾಗಿ ರಕ್ಷೆಯು ನಮ್ಮೆಲ್ಲರನ್ನು ಸದಾ ಕಾಲ ಸಂತೋಷವಾಗಿ ಇಡಲಿ ಎಂದು ಶಾರದಾ ಅಭಿಯಾನದ ವತ್ಸಲಾ ರಾಜಗೋಪಾಲ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಜೈ ಹಿಂದ್ ಪ್ರತಿಷ್ಠಾನದ ಕುಸುಮ ಶರಣ್ಯ ,ಶ್ರಾವ್ಯ ,ಸಿಂಚನ ,ಸಾನಿಕ ,ಮಾಲಾ, ಸರಸ್ವತಿ ಮುಂತಾದವರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular