Tuesday, August 12, 2025
Google search engine

Homeರಾಜ್ಯಸುದ್ದಿಜಾಲವಿಷ್ಣುವರ್ಧನ್ ಸ್ಮಾರಕವನ್ನು ಶಾಶ್ವತವಾಗಿ ರಕ್ಷಿಸಿ: ಸಿಎಂಗೆ ಮನವಿ ಮಾಡಿದ ಅಭಿಮಾನಿ ಬಳಗದ ಅಧ್ಯಕ್ಷ ಸಿ.ಎಸ್. ಗಿರೀಶ್

ವಿಷ್ಣುವರ್ಧನ್ ಸ್ಮಾರಕವನ್ನು ಶಾಶ್ವತವಾಗಿ ರಕ್ಷಿಸಿ: ಸಿಎಂಗೆ ಮನವಿ ಮಾಡಿದ ಅಭಿಮಾನಿ ಬಳಗದ ಅಧ್ಯಕ್ಷ ಸಿ.ಎಸ್. ಗಿರೀಶ್

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ: ನಟ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ ಸ್ಮಾರಕವನ್ನು ಶಾಶ್ವತವಾಗಿ ರಕ್ಷಿಸಲು ಸ್ಮಾರಕವಿದ್ದ ಭೂಮಿಯನ್ನು ಸರಕಾರ ಸ್ವಾಧೀನಪಡಿಸಿಕೊಳ್ಳಬೇಕು ಎಂದು ಚುಂಚನಕಟ್ಟೆ ಹೋಬಳಿ ಡಿ.ರವಿಶಂಕರ್ ಅಭಿಮಾನಿ ಬಳದ ಅಧ್ಯಕ್ಷ ಚಿಕ್ಕಕೊಪ್ಪಲು ಸಿ.ಎಸ್.ಗಿರೀಶ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಚಿಕ್ಕಕೊಪ್ಪಲು ಸಿ.ಎಸ್.ಗಿರೀಶ್

ಕನ್ನಡ ಚಿತ್ರ ಲೋಕದಲ್ಲಿ ಸಾಹಸ ಸಿಂಹ ಎಂದು ಹೆಸರಾದ ಶ್ರೇಷ್ಠನಟ ಡಾ. ವಿಷ್ಣು ಸೇವೆ ಮತ್ತು ಕೊಡುಗೆ ಮರೆಯಲು ಸಾಧ್ಯವಿಲ್ಲ ಇಂತಹ ವ್ಯಕ್ತಿಯ ಅಭಿಮಾನ್ ಸ್ಟುಡಿಯೊ ಆವರಣದಲ್ಲಿದ್ದ ಡಾ. ವಿಷ್ಣು ಸ್ಮಾರಕ ಕನ್ನಡಾಭಿಮಾನಿಗಳಿಗೆ ಭಾವನಾತ್ಮಕ ಪ್ರೇರಣೆಯ ಕೇಂದ್ರವಾಗಿದೆ ಆದರೆ ಇತ್ತೀಚೆಗೆ ಸ್ಮಾರಕ ಇರುವ ಜಾಗವನ್ನು ಕೆಲವರು ತಮ್ಮ ಹಕ್ಕು ಭೂಮಿಯೆಂದು ಹೇಳಿಕೊಂಡು ರಾತ್ರೋರಾತ್ರಿ ಧ್ವಂಸ ಮಾಡಿರುವುದು ನಮ್ಮೆಲ್ಲರಿಗೂ ನೋವು ತಂದಿದೆ,” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

“ವಿಷ್ಣು ಸ್ಮಾರಕವನ್ನು ಶಾಶ್ವತವಾಗಿ ರಕ್ಷಿಸಿ, ಅದನ್ನು ರಾಷ್ಟ್ರೀಯ ಮಟ್ಟದ ಪ್ರವಾಸಿ ಕೇಂದ್ರವನ್ನಾಗಿಸಬೇಕು. ಕಲೆಯ ತರಬೇತಿಯ ಕಲಾ ಗ್ರಾಮ ಹಾಗೂ ಕನ್ನಡ ಸಂಸ್ಕೃತಿಯ ಪ್ರತೀಕವಾಗಿ ಅಭಿವೃದ್ಧಿಪಡಿಸಬೇಕು ಈ ನಿಟ್ಟಿನಲ್ಲಿ ಸರ್ಕಾರ ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.

ಈ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಭೂಮಿಯನ್ನು ತಕ್ಷಣವೇ ಸ್ವಾಧೀನ ಪಡಿಸಿಕೊಳ್ಳಬೇಕು ಎಂದು ಈ ಮೂಲಕ ವಿಷ್ಣುವರ್ಧನ್ ಅವರು ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು‌ ಸ್ಮರಿಸು ಬೇಕು ಈ ಮೂಲಕ ಸ್ಮಾರಕ ರಕ್ಷಣೆ ಮಾಡಬೇಕೆಂದರು.

RELATED ARTICLES
- Advertisment -
Google search engine

Most Popular