ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾಗಿರುವ ನಟ ದರ್ಶನ್ ನಟಿ ಪವಿತ್ರಾ ಗೌಡ ಹಾಗೂ ಮತ್ತಿತರರು ಮಂಗಳವಾರ ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ. ನಗರದ 57ನೇ ಸಿಟಿ ಸಿವಿಲ್ ಕೋರ್ಟ್ ನಲ್ಲಿ ದರ್ಶನ್ ಮತ್ತು ಆರೋಪಿ ಸಂಗಡಿಗರು ವಿಚಾರಣೆಗಾಗಿ ನ್ಯಾಯಾಧೀಶರ ಎದುರು ಕಟಕಟೆಯಲ್ಲಿ ನಿಲ್ಲಲಿದ್ದಾರೆ.
ಇಂದು ಹಾಜರಾದ ಬಳಿಕ ನೇರ ವಕಾಲತಿಗೆ ದಿನಾಂಕ ನಿಗದಿಗೊಳಿಸುವ ಸಾಧ್ಯತೆಯಿದೆ. ರೇಣುಕಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸದ್ಯ ಹೈಕೋರ್ಟ್ ನಿಂದ ಜಾಮೀನು ಪಡೆದು ನಿರಾಳರಾಗಿದ್ದ ನಟ ದರ್ಶನ್ ಸೇರುದಂತೆ ಉಳಿದ ಆರೋಪಿಗಳಿಗೆ ಜಾಮೀನು ರದ್ದಾಗುವ ಆತಂಕ ಹೆಚ್ಚಾಗಿದೆ. ಈ ಪ್ರಕರಣದ ವಾದ- ಪ್ರತಿವಾದ ಆಲಿಸಿದ್ದ ಸುಪ್ರೀಂ ಕೋರ್ಟ್ ಆದೇಶವನ್ನು ಕಾಯ್ದಿರಿಸಿ, ಮೂರು ಪುಟಗಳಿಗೆ ಮೀರದಂತೆ ಲಿಖಿತ ರೂಪದಲ್ಲಿ ವಾದ ಮಂಡಿಸಲು 10 ದಿನಗಳ ಕಾಲವಕಾಶ ನೀಡಿತ್ತು.
ಆ. 6 ರಂದು ಆರೋಪಿ ದರ್ಶನ್ ಹಾಗೂ ಪವಿತ್ರ ಗೌಡ ಪರವಾಗಿ ವಕೀಲರು ಲಿಖಿತ ರೂಪದಲ್ಲಿ ಪ್ರಬಲ ವಾದ ಮಂಡನೆ ಮಾಡಿದ್ದರು. ನಟ ದರ್ಶನ್ ಜಾಮೀನು ರದ್ದುಗೊಳಿಸಬಾರದು ಮನವಿ ಮಾಡಿರುವ ವಕೀಲರು, ಅದಕ್ಕೆ ಪೂರಕವಾಗಿ ಸಾಕಷ್ಟು ಕಾರಣಗಳನ್ನು ನೀಡಿದ್ದಾರೆ ಮತ್ತು ರೇಣುಕಾಸ್ವಾಮಿ ಅಪಹರಣದ ಆರೋಪದಲ್ಲಿ ದರ್ಶನ್ ವಿರುದ್ಧ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಲಿಖಿತ ರೂಪದಲ್ಲಿ ವಾದಿಸಿದ್ದರು.
ಮತ್ತೊಂದೆಡೆ ಸುಪ್ರೀಂ ಕೋರ್ಟ್ ನಲ್ಲಿಯೂ ದರ್ಶನ್ ಜಾಮೀನು ರದ್ದುಪಡಿಸುವಂತೆ ರಾಜ್ಯ ಪೊಲೀಸ್ ರು ಸಲ್ಲಿಸಿರುವ ಅರ್ಜಿ ಪ್ರಕರಣವನ್ನು 6 ತಿಂಗಳ ಒಳಗೆ ಇತ್ಯರ್ಥಗೊಳಿಸುವಂತೆ ಗಡವು ನೀಡಲಾಗಿದೆ.
ಇತ್ತೀಚಿಗಷ್ಟೇ ಪತ್ನಿ ವಿಜಯಲಕ್ಷ್ಮಿ ಜೊತೆ ಶಕ್ತಿ ಪೀಠಗಳಲ್ಲಿ ಒಂದಾದ ಕಾಮಾಕ್ಯ ದೇವಿ ದೇಗುಲಕ್ಕೆ ಭೇಟಿ ನೀಡಿದ್ದರು. ನಟ ದರ್ಶನ್ ಬೆನ್ನಿಗೆ ನಿಂತಿರೋ ಪತ್ನಿ ವಿಜಯಲಕ್ಷ್ಮೀ ಮೋಹಕ ತಾರೆ ರಮ್ಯಾಗೆ ಟಾಂಗ್ ನೀಡಿದ್ದರು. ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಮಾರ್ಮಿಕವಾಗಿ ರಮ್ಯಾ ವಿರುದ್ಧ ಪೋಸ್ಟ್ ಹಾಕಿರೋ ವಿಜಯಲಕ್ಷ್ಮೀ ಕೌಂಟರ್ ಕೊಟ್ಟಿದ್ದರು.
ಮೊನ್ನೆಯಷ್ಟೇ ದರ್ಶನ್ ಮತ್ತು ವಿಜಯಲಕ್ಷ್ಮೀ ಶಕ್ತಿಪೀಠ ಕಾಮಾಕ್ಷಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಬಳಿಕ ಮಈ ಭೇಟಿಯ ಫೋಟೋವನ್ನು ವಿಜಯಲಕ್ಷ್ಮೀ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದರು. ಫೋಟೋ ಜೊತೆಗೆ ಅವರು ಬರೆದ ಸಂದೇಶವು ಎಲ್ಲರ ಗಮನ ಸೆಳೆದಿತ್ತು. ‘ಹೆಚ್ಚಿನ ಜನರು ನಿಮ್ಮನ್ನು ಕೆಳಗಿಳಿಸಲು ಪ್ರಯತ್ನಿಸಿದರೆ, ದೇವರು ನಿಮ್ಮನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತಾನೆ. ದೇವರು ನಿಮ್ಮನ್ನು ಆಶೀರ್ವದಿಸಲಿ.’ ಎಂದು ಬರೆದುಕೊಂಡಿದ್ದರು.
ಡಿ ಬಾಸ್ ಅಭಿಮಾನಿಗಳು ಅವಾಚ್ಯವಾಗಿ ರಮ್ಯಾಗೆ ಕಮೆಂಟ್ಸ್ ಮಾಡಿದ್ದು, ಇದ್ರಿಂದ ರೊಚ್ಚಿಗೆದ್ದಿದ್ದ ರಮ್ಯಾ ಪೊಲೀಸ್ ಕಂಪ್ಲೇಂಟ್ ನೀಡಿದ್ದು,. ರೇಣುಕಾಸ್ವಾಮಿ ಕೇಸ್ ನಲ್ಲಿ ಅಪರಾಧಿಗಳಿಗೆ ಶಿಕ್ಷೆ ಆಗಬೇಕು. ಅವರ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ಹೇಳಿದ್ದರು. ಇದಕ್ಕೆ ಡಿ ಬಾಸ್ ಸೆಲೆಬ್ರಿಟಿಗಳು ರೊಚ್ಚಿಗೆದ್ದು ಕಮೆಂಟ್ಸ್ ಮಾಡಿದ್ದರು. ಈ ಪ್ರಕರಣದಲ್ಲಿ ಹಲವರನ್ನು ಬಂಧಿಸಲಾಗಿದೆ.