ಬೆಂಗಳೂರು: ದರ್ಶನ್ ಅಂಡ್ ಗ್ಯಾಂಗ್ಗೆ ಮತ್ತೆ ಅಗ್ನಿಪರೀಕ್ಷೆ ಶುರುವಾಗಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಪವಿತ್ರಾ ಗೌಡ ಸೇರಿದಂತೆ 17 ಆರೋಪಿಗಳು ಇಂದು 64ನೇ ಸೆಷನ್ಸ್ ಕೋರ್ಟ್ನಲ್ಲಿ ವಿಚಾರಣೆಗೆ ಹಾಜರಾದರು. ಕಳೆದ ವಿಚಾರಣೆಯಲ್ಲಿ ಕೆಲವು ಆರೋಪಿಗಳು ಗೈರಾಗಿದ್ದ ಹಿನ್ನೆಲೆ, ಇಂದು ನ್ಯಾಯಾಧೀಶ ಐ.ಪಿ.ನಾಯ್ಕ್ ವಿಚಾರಣೆಯನ್ನು ಸೆಪ್ಟೆಂಬರ್ 9ಕ್ಕೆ ಮುಂದೂಡಿದರು.
ಇದೀಗ ಚಾರ್ಜ್ ಪ್ರೇಮ್‌ಗೆ ಕಾಲ ಬಂದಿದೆ. ಚಾರ್ಜ್ ಪ್ರೇಮ್ ಅಂದರೆ – ಆರೋಪಿಗಳ ವಿರುದ್ಧ ಕಾನೂನುಬದ್ಧವಾಗಿ ಸೆಕ್ಷನ್‌ಗಳಡಿ ದೋಷಾರೋಪ ಹೊರಿಸುವ ಪ್ರಕ್ರಿಯೆ. ಕೋರ್ಟ್ ಎರಡೂ ಪಾರ್ಟಿಗಳ ವಾದ ಕೇಳಿದ ಬಳಿಕ, ಯಾವುದೇ ಸೆಕ್ಷನ್‌ಗಳಡಿಯಲ್ಲಿ ಆರೋಪ ಹೊರುತ್ತದೆ ಎಂಬುದರ ಬಗ್ಗೆ ನಿರ್ಧಾರ ಕೈಗೊಳ್ಳುತ್ತದೆ. ಇದರಿಂದಾಗಿ ಆರೋಪಿಗಳ ಮೇಲೆ ಮತ್ತಷ್ಟು ಒತ್ತಡ ಬಂದಿದೆ.
ಇದೀಗ ಒಂದು ಕಡೆ ಸೆಷನ್ಸ್ ಕೋರ್ಟ್ನಲ್ಲಿ ವಿಚಾರಣೆಯ ಭಾರ, ಮತ್ತೊಂದೆಡೆ ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನಿನ ತೀರ್ಪಿನ ನಿರೀಕ್ಷೆ. ಸುಪ್ರೀಂ ಕೋರ್ಟ್ ಈಗಾಗಲೇ ಮೇಲ್ಮನವಿ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿದ್ದು, ಟ್ರಯಲ್ ಎಷ್ಟು ದಿನದಲ್ಲಿ ಮುಗಿಸಲಾಗುತ್ತೆ ಎಂಬ ಪ್ರಶ್ನೆಯನ್ನೂ ಎತ್ತಿತ್ತು. ಸರ್ಕಾರದ ಪರ ವಕೀಲರು “ಆರು ತಿಂಗಳಲ್ಲಿ ಮುಗಿಸುತ್ತೇವೆ” ಎಂದು ಪ್ರತಿಕ್ರಿಯಿಸಿದ್ದರು.
ಸೆ.9ರಂದು ಮುಂದಿನ ಹಂತ ನಿರ್ಧಾರವಾಗಲಿದೆ.