Thursday, August 14, 2025
Google search engine

Homeರಾಜ್ಯಸುದ್ದಿಜಾಲಹೊಸೂರು ಮುತ್ತೂಟ್ ಫಿನ್ ಕಾರ್ಪ್ ನಲ್ಲಿ ಶ್ರಾವಣ ಮಂಗಳಗೌರಿ ಪೂಜಾ ಆಚರಣೆ: 40 ಮುತ್ತೈದೆಯರಿಗೆ ಬಾಗಿನ...

ಹೊಸೂರು ಮುತ್ತೂಟ್ ಫಿನ್ ಕಾರ್ಪ್ ನಲ್ಲಿ ಶ್ರಾವಣ ಮಂಗಳಗೌರಿ ಪೂಜಾ ಆಚರಣೆ: 40 ಮುತ್ತೈದೆಯರಿಗೆ ಬಾಗಿನ ವಿತರಣೆ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್‌‌ ನಗರ: ಸಾಲಿಗ್ರಾಮ ತಾಲೂಕಿನ ಹೊಸೂರು ಮುತ್ತೂಟ್ ಫಿನ್ ಕಾರ್ಪ್ ನಲ್ಲಿ ಮಂಗಳಗೌರಿ ಪೂಜಾ ಕಾರ್ಯಕ್ರಮ ನಡೆಯಿತು. ಶ್ರಾವಣದಲ್ಲಿ ಆಚರಿಸಲಾಗುವ ಶ್ರಾವಣ ಮಂಗಳ ಗೌರಿ ಪೂಜೆಯು ಶ್ರೇಷ್ಠವಾಗಿದ್ದು ಈ ಹಿನ್ನಲೆಯಲ್ಲಿ ಮಂಗಳ ಗೌರಿಯನ್ನು ಶಾಖೆಯಲ್ಲಿ ಕೂರಿಸಿ ವಿವಿಧ ಪೂಜಾ ಪುರಸ್ಕಾರವನ್ನು ನೇರವೇರಿಸಲಾಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮುತ್ತೂಟ್ ಫಿನ್ ಕಾರ್ಪ್ ನ ವ್ಯವಸ್ಥಾಪಕ ಎಚ್.ಜೆ.ಜಯಶಂಕರ್ ಮಾತನಾಡಿ ಮಂಗಳ ಗೌರಿಯನ್ನು ಪೂಜಿಸುವುದರಿಂದ ಗಂಡದಿರ ಆಯುಷ್ಯ ಹೆಚ್ಚುವುದರ ಜತಗೆ ಕುಟುಂಬದಲ್ಲಿ ಸಮೃದ್ಧಿ, ಸಂತೋಷ ಮತ್ತು ಆರೋಗ್ಯ ನೆಲೆಯಾಗುತ್ತದೆ ಈ ಹಿನ್ನಲೆಯಲ್ಲಿ ಈ ಕಾರ್ಯಕ್ರವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ 40 ಮಂದಿ ಮುತ್ತೈದೆ ಮಹಿಳೆಯರಿಗೆ ಅರಿಸಿನ ಕುಂಕಮ, ವಸ್ತ್ರ, ಸಿಹಿ ವಿತರಿಸಿ ಬಾಗಿನ ನೀಡಲಾಯಿತು.

ಕಾರ್ಯಕ್ರಮವನ್ನು ಮುತ್ತೂಟ್ ಫಿನ್ ಕಾರ್ಪ್ ನ ಮೈಸೂರಿನ ಪ್ರಾದೇಶಿಕ ವ್ಯವಸ್ಥಾಪಕ ಪ್ರಭಾಕರ್ ತಿಮ್ಮೇಶ್, ಹುಣಸೂರು ಮತ್ತು ಕೆ.ಅರ್.ನಗರ ವಲಯ ವ್ಯವಸ್ಥಾಪಕ ರವಿ, ಮಾರ್ಗದರ್ಶನದಲ್ಲಿ ಆಯೋಜಿಸಲಾಗಿತ್ತು
ಕಾರ್ಯಕ್ರಮದಲ್ಲಿ ಶಾಖೆಯ ಸಿಬ್ಬಂದಿಗಳಾದ ಎಚ್.ಎಲ್. ಶಶಾಂಕ್, ಎಚ್.ಎ ಕಿರಣ, ಎಸ್, ಬಿಂದು, ಎಸ್.ಜಿ ಅಯನ ಸೇರಿದಂತೆ ಮತ್ತಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular