Thursday, August 14, 2025
Google search engine

Homeಅಪರಾಧವಿಜಯನಗರದಲ್ಲಿ ಇಬ್ಬರು ಗಣಿ ಉದ್ಯಮಿಗಳ ನಿವಾಸದ ಮೇಲೆ ಇಡಿ ದಾಳಿ : ದಾಖಲೆ ಪರಿಶೀಲನೆ

ವಿಜಯನಗರದಲ್ಲಿ ಇಬ್ಬರು ಗಣಿ ಉದ್ಯಮಿಗಳ ನಿವಾಸದ ಮೇಲೆ ಇಡಿ ದಾಳಿ : ದಾಖಲೆ ಪರಿಶೀಲನೆ

ವಿಜಯನಗರ : ಇಂದು ಬೆಳಿಗ್ಗೆ ಶಾಸಕ ಸತೀಶ ಸೈಲ್ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿ ಶಾಕ್ ನೀಡಿದ್ದರು. ಇದೀಗ ಕೇವಲ ಶಾಸಕ ಸತೀಶ್ ಸೈಲ್ ಅಷ್ಟೆ ಅಲ್ಲದೆ ವಿಜಯನಗರದಲ್ಲಿ ಇಬ್ಬರು ಗಣಿ ಉದ್ಯಮಿಗಳ ಮನೆಗಳ ಮೇಲು ದಾಳಿ ಮಾಡಿ ದಾಖಲೆ ಪರಿಶೀಲನೆ ಮಾಡುತ್ತಿದ್ದಾರೆ.

ಹೌದು ವಿಜಯನಗರದಲ್ಲಿ ಇಬ್ಬರು ಮನೆ ಉದ್ಯಮಿಗಳ ನಿವಾಸದ ಮೇಲೆ ED ಅಧಿಕಾರಿಗಳು ದಾಳಿ ಮಾಡಿದ್ದು ಏಕಕಾಲದಲ್ಲಿ ಮೂರು ಕಡೆ ದಾಳಿ ನಡೆಸಿ ಇಡಿ ಅಧಿಕಾರಿಗಳು ದಾಖಲೆ ಪರಿಶೀಲನೆ ಮಾಡುತ್ತಿದ್ದಾರೆ ಗಣಿ ಉದ್ಯಮಿಗಳ ಮನೆ ಕಚೇರಿ ಮತ್ತು ಸ್ಟೀಲ್ ಅಂಗಡಿಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ಮಾಡಿದ್ದಾರೆ. ಇಬ್ಬರು ಗಣಿ ಉದ್ಯಮಗಳ ನಿವಾಸದ ಮೇಲೆ ಇಡಿ ಅಧಿಕಾರಿಗಳು ಮಾಡಿದ್ದು, ಹೊಸಪೇಟೆ ಪಟ್ಟಣದ ಗಣಿ ಉದ್ಯಮಿ ಸ್ವಸ್ತಿಕ ನಾಗರಾಜ ಹಾಗೂ ನಗರಸಭೆ ಕೈ ಸದಸ್ಯ ಕಾರದಪುಡಿ ಮಹೇಶ್ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಹೊಸಪೇಟೆಯ ಎಂಜೆ ನಗರದಲ್ಲಿರುವ ಸ್ವಸ್ತಿಕ್ ನಾಗರಾಜ್ ಮನೆ ಎಪಿಎಂಸಿಯ ಬಳಿ ಇರುವ ಸ್ಟೀಲ್ ಅಂಗಡಿ ಕಚೇರಿ ಮೇಲೆ ಇಡಿ ದಾಳಿ ಮಾಡಿದೆ ವಾರ್ಡ್ ಸಂಖ್ಯೆ 20ರ ಕಾಂಗ್ರೆಸ್ ಸದಸ್ಯರಾಗಿರುವ ಕಾರದಪುಡಿ ರಮೇಶ್ ಇಬ್ಬರು ಗಣಿ ಉದ್ಯಮಿಗಳ ಮನೆಯಲ್ಲಿ ಈಡೇ ಅಧಿಕಾರಿಗಳಿಂದ ಪರಿಶೀಲನೆ ನಡೆಯುತ್ತಿದೆ.ದಾಳಿಯ ಕುರಿತು ಇನ್ನಷ್ಟು ಮಾಹಿತಿ ನಿರೀಕ್ಷಿಸಲಾಗುತ್ತಿದೆ

RELATED ARTICLES
- Advertisment -
Google search engine

Most Popular