Thursday, August 14, 2025
Google search engine

Homeರಾಜ್ಯಸುದ್ದಿಜಾಲಪ್ರತ್ಯೇಕ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಗಳ ಬಂಧನ

ಪ್ರತ್ಯೇಕ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಗಳ ಬಂಧನ

ಮಂಗಳೂರು (ದಕ್ಷಿಣ ಕನ್ನಡ): 3 ಪ್ರತ್ಯೇಕ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆ‌ಮರೆಸಿಕೊಂಡಿದ್ದ ಆರೋಪಿಗಳನ್ನು ಬಂಧಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

ಪುತ್ತೂರು ನಗರ ಠಾಣಾ ಅಕ್ರ 69/2023 ಕಲ:379 ಐ.ಪಿ.ಸಿ ಪ್ರಕರಣದಲ್ಲಿ 09 ಬಾರಿ ವಾರಂಟ್ ಜಾರಿಯಾಗಿದ್ದರೂ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಹಾವೇರಿ, ಸವಣೂರು ನಿವಾಸಿ ಶಿವಕುಮಾರ್@ಶಿವು ಎಂಬಾತನನ್ನು, ಪುತ್ತೂರು ಉಪವಿಭಾಗದ ಡಿವೈಎಸ್ಪಿ ಅರುಣ್ ನಾಗೇಗೌಡರವರು ಹಾಗೂ ಪುತ್ತೂರು ನಗರ ಠಾಣಾ ಪೊಲೀಸ್ ನಿರೀಕ್ಷಕರಾದ ಕಿರಣ್ ಜಾನ್ಸನ್ ಡಿಸೋಜಾ ರವರ ಮಾರ್ಗದರ್ಶನದಲ್ಲಿ, ಉಪ್ಪಿನಂಗಡಿ ಠಾಣಾ ಪಿ.ಎಸ್.ಐ ಕೌಶಿಕ್  ರವರ ನೇತೃತ್ವದ, ಸಿಬ್ಬಂದಿಗಳಾದ  ಸಿ ಹೆಚ್ ಸಿ 685 ಪ್ರಶಾಂತ ರೈ, ಸಿಹೆಚ್ ಸಿ 1028 ಗಣೇಶ ಎನ್, ಸಿಪಿಸಿ 2283 ಶ್ರೀಶೈಲ ಎಂ.ಕೆ, ಸಿಪಿಸಿ 2404  ಮಹಮ್ಮದ್ ಮೌಲಾನಾ,  ರವರುಗಳನ್ನು ಒಳಗೊಂಡ ವಿಶೇಷ ತಂಡವು ಬೆಂಗಳೂರಿನ ಅಬ್ಜಿಗೆರೆ ಎಂಬಲ್ಲಿ ದಸ್ತಗಿರಿ ಮಾಡಿದೆ.

ಇನ್ನು ಉಪ್ಪಿನಂಗಡಿ ಪೊಲೀಸ್ ಠಾಣಾ ಅ.ಕ್ರ:14/2022, ಕಲಂ:394 ಐ.ಪಿ.ಸಿ. ಪ್ರಕರಣದಲ್ಲಿ ಆರೋಪಿಯಾಗಿ, ಮಾನ್ಯ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ 03 ವರ್ಷಗಳಿಂದ ತಲೆಮರೆಸಿಕೊಂಡಿದ್ದ, ಬೆಂಗಳೂರು, ಜಗಜೀವನ್ ರಾಮ್ ನಗರ ನಿವಾಸಿ ಸಯ್ಯದ್ ಕಲೀo @ ಕಲ್ಲು ಮಾಮು ಎಂಬಾತನನ್ನು, ಪುತ್ತೂರು ಉಪವಿಭಾಗದ ಉಪಾಧೀಕ್ಷಕರಾದ ಅರುಣ್ ನಾಗೇಗೌಡ ರವರ ಮಾರ್ಗದರ್ಶನದಲ್ಲಿ, ಉಪ್ಪಿನಂಗಡಿ ಪೊಲೀಸ್ ವೃತ ನಿರೀಕ್ಷಕರಾದ ರವಿ ಬಿ.ಎಸ್ ಹಾಗೂ ಪೊಲೀಸ್ ಉಪನಿರೀಕ್ಷರಾದ ಕೌಶಿಕ್ ರವರ ನೇತೃತ್ವದಲ್ಲಿ, ಉಪ್ಪಿನಂಗಡಿ ಠಾಣಾ CHC -826 ಶಿವರಾಮ ರೈ ಮತ್ತು dysp ವಿಶೇಷ ತಂಡದ ಸಿಬ್ಬಂದಿಗಳಾದ CPC 2384 ಶಾಂತಕುಮಾರ್, CPC 1035 ರವಿಕುಮಾರ್ , CPC 1926 ರಮೇಶ್ ರವರುಗಳನ್ನು ಒಳಗೊಂಡ ತಂಡವು ದಸ್ತಗಿರಿ ಮಾಡಿದ್ದಾರೆ. ಈ ಅಸಾಮಿಯ ವಿರುದ್ಧ ಬೆಂಗಳೂರು ನಗರದ ವಿವಿಧ ಠಾಣೆಗಳಲ್ಲಿ 4 ಪ್ರಕರಣಗಳು ದಾಖಲಾಗಿದೆ.

ಇನ್ನು ಕಡಬ ಪೊಲೀಸ್ ಠಾಣಾ ಅ ಕ್ರ: 91/2019 ಕಲಂ: 341,323,324,504,506 R/w 34 IPC ಪ್ರಕರಣದಲ್ಲಿ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ, ಕಳೆದ ಮೂರು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕಡಬ ರಾಮಕುಂಜ ನಿವಾಸಿ ಯೂಸೂಫ್ (32) ಎಂಬಾತನನ್ನು, ಕಡಬ ಠಾಣಾ ಪೊಲೀಸರು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದಾರೆ. ನ್ಯಾಯಾಲಯವು ಸದ್ರಿ ಆಸಾಮಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

RELATED ARTICLES
- Advertisment -
Google search engine

Most Popular