Thursday, August 14, 2025
Google search engine

Homeರಾಜ್ಯಸಮಾಧಿ ನೆಲಸಮ ಜಾಗದಲ್ಲೇ ಡಾ.ವಿಷ್ಣು ಸ್ಮಾರಕ ಮರುನಿರ್ಮಿಸಿ- ರಕ್ತದಲ್ಲಿ ಸರ್ಕಾರಕ್ಕೆ ಅಭಿಮಾನಿ ಪತ್ರ

ಸಮಾಧಿ ನೆಲಸಮ ಜಾಗದಲ್ಲೇ ಡಾ.ವಿಷ್ಣು ಸ್ಮಾರಕ ಮರುನಿರ್ಮಿಸಿ- ರಕ್ತದಲ್ಲಿ ಸರ್ಕಾರಕ್ಕೆ ಅಭಿಮಾನಿ ಪತ್ರ

ಬೆಂಗಳೂರು: ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ನಟ ದಿ. ಡಾ. ವಿಷ್ಣುವರ್ಧನ್ ಅವರ ಸಮಾಧಿ ನೆಲಸಮ ಹಿನ್ನೆಲೆಯಲ್ಲೇ ಅದೇ ಜಾಗದಲ್ಲಿ ವಿಷ್ಣು ಅವರ ಸ್ಮಾರಕವನ್ನು ಮರು ನಿರ್ಮಾಣ ಮಾಡಬೇಕು ಎಂದು  ಕರುಣಾಮಯಿ ವಿಷ್ಣು ಅಭಿಮಾನಿ ಬಳಗದ ಅಧ್ಯಕ್ಷ ಎಸ್ ಎನ್ ರಾಜೇಶ್ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ರಕ್ತದಲ್ಲಿ  ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಎಸ್.ಎನ್  ರಾಜೇಶ್ ಪತ್ರವನ್ನ ಅಂಚೆ ಕಚೇರಿ ಮೂಲಕ ಸರ್ಕಾರಕ್ಕೆ ರವಾನಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು,  ಮೇರು ನಟನ ಸ್ಮಾರಕ ತೆರವುಗೊಳಿಸಿರುವುದು ಅಭಿಮಾನಿಗಳಿಗೆ ತೀವ್ರ ನೋವುಂಟು ಮಾಡಿದೆ. ರಾಜ್ಯ ಸರ್ಕಾರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಜೊತೆಗೆ ಸ್ಮಾರಕ ಮರು ನಿರ್ಮಾಣ ಮಾಡಬೇಕು ಎಂದು  ಆಗ್ರಹಿಸುತ್ತಿದ್ದೇವೆ ಎಂದಿದ್ದಾರೆ.

ಇದೇ ಸಂದರ್ಭದಲ್ಲಿ  ವಿಷ್ಣುವರ್ಧನ್ ಅಭಿಮಾನಿಗಳಾದ  ನಜರಬಾದ್ ನಟರಾಜ್, ಆಟೋ ಚಾಲಕರಾದ ಸದಾಶಿವ್, ರುದ್ರಮೂರ್ತಿ, ಸ್ಯಾಮ್ಯುಯೆಲ್ ವಿಲ್ಸನ್,  ಹರೀಶ್ ನಾಯ್ಡು, ಸೂರಜ್, ಚಂದ್ರು, ಹಾಗೂ ಇನ್ನಿತರರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular