Friday, August 15, 2025
Google search engine

HomeUncategorizedರಾಷ್ಟ್ರೀಯನ್ಯೂಕ್ಲಿಯರ್ ಬೆದರಿಕೆಗೆ ಭಾರತ ಬಗ್ಗಲ್ಲ: ಪಾಕಿಸ್ತಾನಕ್ಕೆ ಪ್ರಧಾನಿ ಮೋದಿ ತಿರುಗೇಟು

ನ್ಯೂಕ್ಲಿಯರ್ ಬೆದರಿಕೆಗೆ ಭಾರತ ಬಗ್ಗಲ್ಲ: ಪಾಕಿಸ್ತಾನಕ್ಕೆ ಪ್ರಧಾನಿ ಮೋದಿ ತಿರುಗೇಟು

ನವದೆಹಲಿ: 79ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ನವದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಪಾಕಿಸ್ತಾನಕ್ಕೆ ತೀವ್ರ ಸಂದೇಶ ನೀಡಿದ್ದಾರೆ. “ನ್ಯೂಕ್ಲಿಯರ್ ಬೆದರಿಕೆಗಳಿಂದ ಭಾರತ ಬೆದರುವುದಿಲ್ಲ. ಇಂಥ ಬೆದರಿಕೆಗಳನ್ನು ನಾವು ಇತ್ತೀಚೆಗೆ ನೋಡಿರುವುದಿಲ್ಲ, ನಾವು ದಶಕಗಳಿಂದ ನೋಡುತ್ತಲೇ ಇದ್ದೇವೆ. ಆದರೆ ಇನ್ನು ಮುಂದೆ ಇವು ನಡೆಯಲು ಬಿಡುವುದಿಲ್ಲ,” ಎಂದು ಅವರು ತಿಳಿಸಿದ್ದಾರೆ.

ಪೆಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಗ್ಗೆ ಉಲ್ಲೇಖಿಸಿ, “ಧರ್ಮ ಕೇಳಿ ಹತ್ಯೆ ಮಾಡಲಾಯಿತು. ಪತ್ನಿಯ ಎದುರು ಪತಿಯನ್ನು, ಮಗನ ಮುಂದೆ ತಂದೆಯನ್ನು ಕೊಲ್ಲಲಾಯಿತು. ಇಡೀ ದೇಶದಲ್ಲಿ ಆಕ್ರೋಶ ಮಡುಗಟ್ಟಿತ್ತು. ಆಪರೇಷನ್ ಸಿಂಧೂರ್ ಈ ಆಕ್ರೋಶದ ಪ್ರತಿಬಿಂಬವಾಗಿದೆ,” ಎಂದರು. ಸೇನೆಗೆ ಪೂರ್ಣ ಸ್ವಾತಂತ್ರ್ಯ ನೀಡಿ, ದಾಳಿ, ಸಮಯ ಮತ್ತು ಗುರಿ ನಿರ್ಧರಿಸಲು ಮುಕ್ತವಾದ ಹಿನ್ನೆಲೆಯಲ್ಲಿ, ಸೇನೆ ಪಾಕಿಸ್ತಾನದ ಒಳಗೆ ನುಗ್ಗಿ ಭಾರಿ ನಷ್ಟಂಟುಮಾಡಿತು ಎಂದೂ ಅವರು ಹೇಳಿದರು.

ಸಿಂಧೂ ಜಲ ಒಪ್ಪಂದದ ಕುರಿತು ಮಾತನಾಡಿ, “ಈ ಒಪ್ಪಂದದಿಂದ ಭಾರತಕ್ಕೆ ಅನ್ಯಾಯವಾಗಿದೆ. ನಮ್ಮ ಜನರು ಬಾಯಾರಿಕೊಂಡಿದ್ದಾರೆ. ನಮ್ಮ ನದಿಯ ನೀರು ನಮ್ಮದಾಗಬೇಕು. ರೈತರ ಹಿತಕ್ಕಾಗಿ, ರಾಷ್ಟ್ರದ ಹಿತಕ್ಕಾಗಿ ಈ ಒಪ್ಪಂದವನ್ನು ಪುನರ್ವಿಚಾರ ಮಾಡುವುದು ಅಗತ್ಯ,” ಎಂದು ಹೇಳಿದರು.

ಆತ್ಮನಿರ್ಭರ್ ಭಾರತದ ಕುರಿತು, “ಇದು ಕೇವಲ ಆರ್ಥಿಕ ಘೋಷಣೆಯಲ್ಲ. ಇದು ಭಾರತದ ಶಕ್ತಿ ಮತ್ತು ಸಾಮರ್ಥ್ಯದ ಪ್ರತೀಕವಾಗಿದೆ. ನಮ್ಮ ಶಸ್ತ್ರಾಸ್ತ್ರಗಳನ್ನು ನಾವು ತಾನೇ ನಿರ್ಮಿಸುತ್ತಿದ್ದೇವೆ. ಆಪರೇಷನ್ ಸಿಂಧೂರನಲ್ಲಿ ನಮ್ಮ ಶಸ್ತ್ರಾಸ್ತ್ರಗಳು ಶಕ್ತಿಯನ್ನೂ, ತಂತ್ರಜ್ಞಾನವನ್ನೂ ಪ್ರದರ್ಶಿಸಿವೆ,” ಎಂದು ಅವರು ಸ್ಪಷ್ಟಪಡಿಸಿದರು.

RELATED ARTICLES
- Advertisment -
Google search engine

Most Popular