Sunday, August 17, 2025
Google search engine

Homeಅಪರಾಧನಟ ದರ್ಶನ್‌ಗೆ ಮತ್ತೆ ಬಳ್ಳಾರಿ ಜೈಲಿನ ದಾರಿ? : ಜೈಲು ಅಧಿಕಾರಿಗಳಿಂದ ಕೋರ್ಟ್‌ಗೆ ಅರ್ಜಿ

ನಟ ದರ್ಶನ್‌ಗೆ ಮತ್ತೆ ಬಳ್ಳಾರಿ ಜೈಲಿನ ದಾರಿ? : ಜೈಲು ಅಧಿಕಾರಿಗಳಿಂದ ಕೋರ್ಟ್‌ಗೆ ಅರ್ಜಿ

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಯಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್​ಗೆ ಹೊಸ ಶಾಕ್ ಎದುರಾಗುವ ಸಾಧ್ಯತೆ ಇದೆ. ಪರಪ್ಪನ ಅಗ್ರಹಾರದಿಂದ ಮತ್ತೆ ಬಳ್ಳಾರಿಗೆ ಶಿಫ್ಟ್ ಆಗುವ ನಿರೀಕ್ಷೆ ಇದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್​ರನ್ನ ಬಳ್ಳಾರಿಗೆ ಶಿಫ್ಟ್ ಮಾಡುವಂತೆ ಜೈಲು ಅಧಿಕಾರಿಗಳು ಅರ್ಜಿ ಸಲ್ಲಿಸಿದ್ದಾರೆ. ಜೈಲು ಅಧಿಕಾರಿಗಳು 64ನೇ ಸೆಷನ್ಸ್ ಕೋರ್ಟ್ ಗೆ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಜೈಲು ಅಧಿಕಾರಿಗಳಿಂದ ನೇರವಾಗಿ ಅರ್ಜಿ ಪಡೆಯಲು ಕೋರ್ಟ್ ನಿರಾಕರಿಸಿದೆ. 64ನೇ ಸೆಷನ್ಸ್ ಕೋರ್ಟ್ ಕೇಸಿನ ಎಸ್ಪಿಪಿ ಮೂಲಕವೇ ಈ ಒಂದು ಅರ್ಜಿ ಸಲ್ಲಿಸುವಂತೆ ಜೈಲು ಅಧಿಕಾರಿಗಳಿಗೆ ಸೂಚನೆ ನೀಡಿದೆ.

ಬೆಂಗಳೂರು ಜೈಲಿನಲ್ಲಿ ಭದ್ರತೆ ಹಾಗೂ ಆಡಳಿತ ಹಿತದೃಷ್ಟಿಯಿಂದ ಬೇರೆ ಜೈಲಿಗೆ ಶಿಫ್ಟ್ ಮಾಡುವಂತೆ ಅರ್ಜಿಯಲ್ಲಿ ತಿಳಿಸಲಾಗಿದೆ. ಜೈಲಿನ ಚೀಫ್ ಸೂಪರಿಡೆಂಟರಿಂದ ಅರ್ಜಿ ಸಲ್ಲಿಕೆಯಾಗಿದೆ. ಆದರೆ ಈ ಅರ್ಜಿಯನ್ನ ಎಸ್ಪಿಪಿ ಮೂಲಕ ಹಾಕಿಸುವಂತೆ ಕೋರ್ಟ್ ಸೂಚನೆ ನೀಡಿದ್ದು, ಇದೀಗ ಕೋರ್ಟ್ ನಿಂದ ಜೈಲು ಅಧಿಕಾರಿ ಎಸ್ಪಿಪಿ ಭೇಟಿಗೆ ತೆರಳಿದ್ದಾರೆ.

ಈ ಹಿಂದೆ ದರ್ಶನ್ ಬಳ್ಳಾರಿ ಜೈಲಿನಲ್ಲಿ, ಜಗದೀಶ್, ಲಕ್ಷ್ಮಣ್ – ಶಿವಮೊಗ್ಗ, ನಾಗರಾಜ್‌ – ಗುಲ್ಬರ್ಗ ಜೈಲು, ಪ್ರದೋಷ್ – ಬೆಳಗಾವಿ ಜೈಲು, ಪವಿತ್ರಾಗೌಡ, ಅನುಕುಮಾರ್ ಬೆಂಗಳೂರು ಜೈಲಿನಲ್ಲೇ ಇದ್ದರು.

ಬಳ್ಳಾರಿಗೆ ಯಾಕೆ ಶಿಫ್ಟ್?: ಈ ಹಿಂದೆ ಇದೇ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್‍ಗೆ ರಾಜಾತಿಥ್ಯ ನೀಡಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು. ಇದಾದ ಬಳಿಕ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ಬಳಿಕ ಜಾಮೀನು ಮಂಜೂರಾಗುವ ತನಕ 63 ದಿನಗಳ ಕಾಲ ಬಳ್ಳಾರಿ ಜೈಲಿನಲ್ಲಿ ಕಳೆದಿದ್ದರು. ಅಕ್ಟೋಬರ್ 30 ರಂದು ಬಳ್ಳಾರಿ ಜೈಲಿನಿಂದ ರಿಲೀಸ್ ಆಗಿದ್ದರು. ಇದೀಗ ಮತ್ತೆ ಅದೇ ಜೈಲಿಗೆ ಅವರು ಶಿಫ್ಟ್ ಆಗುವ ಸಾಧ್ಯತೆ ಇದೆ.

ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿದ್ದಾಗ ತೀವ್ರ ಬೆನ್ನುನೋವಿನಿಂದ ಬಳಲುತ್ತಿದ್ದ ದರ್ಶನ್‍ಗೆ ವಿಮ್ಸ್ ಆಸ್ಪತ್ರೆಯಲ್ಲಿ ಸ್ಕ್ಯಾನ್ ಸಹ ಮಾಡಿಸಲಾಗಿತ್ತು. ಸ್ಕ್ಯಾನ್ ಬಳಿಕ ತುರ್ತು ಸರ್ಜರಿಗೆ ಸೂಚಿಸಲಾಗಿತ್ತು. ಅದೇ ಆಧಾರದ ಮೇಲೆ ದರ್ಶನ್ ಜಾಮೀನು ಪಡೆದಿದ್ದರು. ಬೇಲ್ ಪಡೆದ ಬಳಿಕ ದರ್ಶನ್ ಶಸ್ತ್ರಚಿಕಿತ್ಸೆ ಮಾಡಿಸಿರಲಿಲ್ಲ.

ಬಳ್ಳಾರಿ ಜೈಲಿನಲ್ಲಿ ದರ್ಶನ್‍ಗೆ ಯಾವುದೇ ವಿಶೇಷ ಸೌಲಭ್ಯ ಕೊಟ್ಟಿರಲಿಲ್ಲ. ಸಾಮಾನ್ಯ ಕೈದಿಯಂತೆ ನೋಡಿಕೊಳ್ಳಲಾಗಿತ್ತು. ಇದೀಗ ಜಾಮೀನು ರದ್ದಾಗಿರುವುದರಿಂದ ಮತ್ತೇ ಬಳ್ಳಾರಿ ಜೈಲಿಗೆ ಕರೆತರುವ ಸಾಧ್ಯತೆ ಇದೆ.

RELATED ARTICLES
- Advertisment -
Google search engine

Most Popular